ಅಂಕೋಲಾದಲ್ಲಿ ವಿಜಯ ಸಂಕಲ್ಪ ಯಾತ್ರೆಯನ್ನು ನೋಡಿದರೆ ರೂಪಾಲಿ ಮತ್ತೆ ಗೆಲ್ಲುವುದು ಖಚಿತ: ಸಚಿವ ಮುರುಗೇಶ್ ನಿರಾಣಿ

By Govindaraj S  |  First Published Mar 20, 2023, 1:00 AM IST

ಜಿಲ್ಲೆಯ ಅಂಕೋಲಾದಲ್ಲಿ ಇಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ನೇತೃತ್ವದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ನಡೆಯಿತು. ಅಂಕೋಲಾದ ಬಾಳೆಗುಳಿ ಕ್ರಾಸ್‌ನಿಂದ ಅಂಕೋಲಾಕ್ಕೆ ಪ್ರವೇಶ ಮಾಡಿದ ಬಿಜೆಪಿಯ ವಿಜಯ ಸಂಕಲ್ಪ‌ ಯಾತ್ರೆಯನ್ನು ಕಾರ್ಯಕರ್ಯರು ಪುಷ್ಪಾರ್ಪಣೆ ಮೂಲಕ ಸ್ವಾಗತಿಸಿಕೊಂಡರು. 


ಉತ್ತರ ಕನ್ನಡ (ಮಾ.20): ಜಿಲ್ಲೆಯ ಅಂಕೋಲಾದಲ್ಲಿ ಇಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ನೇತೃತ್ವದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ನಡೆಯಿತು. ಅಂಕೋಲಾದ ಬಾಳೆಗುಳಿ ಕ್ರಾಸ್‌ನಿಂದ ಅಂಕೋಲಾಕ್ಕೆ ಪ್ರವೇಶ ಮಾಡಿದ ಬಿಜೆಪಿಯ ವಿಜಯ ಸಂಕಲ್ಪ‌ ಯಾತ್ರೆಯನ್ನು ಕಾರ್ಯಕರ್ಯರು ಪುಷ್ಪಾರ್ಪಣೆ ಮೂಲಕ ಸ್ವಾಗತಿಸಿಕೊಂಡರು. ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಾರವಾರ- ಅಂಕೋಲಾ ಶಾಸಕಿ ರೂಪಾಲಿ ನಾಯ್ಕ್ ಉಪಸ್ಥಿತರಿದ್ದ ಈ ಕಾರ್ಯಕ್ರಮವನ್ನು ಅಂಕೋಲಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಆಯೋಜಿಸಲಾಗಿತ್ತು. 

ಕಾರ್ಯಕ್ರಮದ ಅಂಗವಾಗಿ ನೂರಾರು ಕಾರ್ಯಕರ್ತರು ಬೈಕ್ ರ್ಯಾಲಿಯೊಂದಿಗೆ ಯಾತ್ರೆಯಲ್ಲಿ ಸಾಗಿದ್ದು, ಅಂಕೋಲಾ ಪಟ್ಟಣವಂತೂ ಸಂಪೂರ್ಣ ಕೇಸರಿಮಯವಾಗಿತ್ತು. ರಾಜ್ಯದಲ್ಲಿ ಜನಸಂಕಲ್ಪ‌ ಯಾತ್ರೆ ಯಶಸ್ವಿಯಾಗಿ ನಡೆಯುತ್ತಿದ್ದು, ಜನರಿಂದ ಉತ್ತಮ ಸ್ಪಂದನೆ ದೊರಕುತ್ತಿದೆ. ಅಂಕೋಲಾದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯನ್ನು ನೋಡಿದರೆ ಶಾಸಕಿ ರೂಪಾಲಿ ಮತ್ತೆ ಗೆಲ್ಲುವುದು ಖಚಿತ. ಬಿಜೆಪಿಯ ಅಭ್ಯರ್ಥಿಗಳ ಗೆಲುವಿನೊಂದಿಗೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲಿದೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದರು. ಬಳಿಕ ಉರಿಗೌಡ ಮತ್ತು ನಂಜೇಗೌಡರ ಬಗ್ಗೆ ಸ್ವಪಕ್ಷದ ಹೇಳಿಕೆಯನ್ನೂ ಖಂಡಿಸಿದ ನಿರಾಣಿ, ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಬೇಕಿದೆ ಹೊರತು ಈ ವಿಚಾರದಲ್ಲಿ ರಾಜಕಾರಣ ಮಾಡೋದು ಸರಿಯಲ್ಲ.

Tap to resize

Latest Videos

ಸಿದ್ದರಾಮಯ್ಯ ಗೆದ್ದ ಕ್ಷೇತ್ರಕ್ಕೆ ಒಳ್ಳೆಯದನ್ನ ಮಾಡಲಿ: ಸಚಿವ ಮುರುಗೇಶ್‌ ನಿರಾಣಿ

ನಮ್ಮ ಪಕ್ಷದವರನ್ನು ಸೇರಿ ಹೇಳುತ್ತಿದ್ದೇನೆ, ಈ ವಿಚಾರದಲ್ಲಿ ಹೇಳಿಕೆಗಳನ್ನು ನೀಡೋದು ಸರಿ ಅಲ್ಲ. ರಾಜ್ಯದಲ್ಲಿ ಮಾಡೋಕೆ ಬೇಕಾದಷ್ಟು ಕೆಲಸವಿದ್ದು, ದೇಶದ ಅಭಿವೃದ್ಧಿಯತ್ತ ಗಮನ ಹರಿಸಬೇಕು. ಆ ಗೌಡ್ರು ಏನಾದ್ರು, ಈ ಗೌಡ್ರು ಏನ್ ಮಾಡಿದ್ರು ಅನ್ನೋ ವಿಷಯ ಬಿಟ್ಟು ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಬೇಕು. ಯುವಕರಿಗೆ ಉದ್ಯೋಗ, ನೀರಾವರಿ, ಕೃಷಿಕರ ಅಭಿವೃದ್ಧಿ ಬಗ್ಗೆ ಚಿಂತನೆ ಇರಬೇಕು.ಸುಮ್ಮನೆ ಟೈಮ್ ಹಾಳು ಮಾಡುವುದರ ಬಗ್ಗೆ ಹೇಳಿಕೆ ನೀಡಬಾರದು. ಯಾವುದೇ ಪಕ್ಷವಿರಲಿ, ಯಾವುದೇ ಸಮಾಜವಿರಲಿ ನಾವು ಮಾಡುವ ಕೆಲಸದತ್ತ ಗಮನ ಹರಿಸಬೇಕು ಎಂದರು. ಬಸವನಗೌಡ ಯತ್ನಾಳ ಮತ್ತು ಮುರಗೇಶ್ ನಿರಾಣಿ ನಡುವಿನ ಗೊಂದಲ ನೂರಕ್ಕೆ ನೂರರಷ್ಟು ಸರಿ ಹೋಗಿದೆ. 

ಮೋದಿ, ಬೊಮ್ಮಾಯಿ ಆಡಳಿತದಿಂದ ರಾಜ್ಯದಲ್ಲಿ ಮತ್ತೆ ಬಿಜೆಪಿಗೆ ಅಧಿಕಾರ ಖಚಿತ: ಸಚಿವ ಹಾಲಪ್ಪ ಆಚಾರ್‌

ಯತ್ನಾಳ ಕಡೆಯಿಂದ ಈಗ ಏನು ಉತ್ತರ ಬರುತ್ತಿಲ್ಲ, ನಮ್ಮಿಬ್ಬರ ನಡುವೆ ಸರಿ ಹೋಗಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಸಚಿವ ನಿರಾಣಿ ನಗೆ ಬೀರಿದರು. ಇನ್ನು ಶಾಸಕಿ ರೂಪಾಲಿ ನಾಯ್ಕ್ ಮಾತನಾಡಿ, ಕಾಂಗ್ರೆಸ್ ಸರಕಾರ ಕೇವಲ ಬಾಯಿ ಮಾತಿನಲ್ಲಿ ಅಶ್ವಾಸನೆ ನೀಡಿತ್ತಿತ್ತು. ಅಲ್ಲದೇ, ಜನರಿಗೆ ದೊರೆಯಬೇಕಾಗಿದ್ದ ಆರ್ಥಿಕ ಸಹಾಯವನ್ನು ಅರ್ಧಕ್ಕಿಂತ ಹೆಚ್ಚು ತಿಂದ ಬಳಿಕ ನೀಡುತ್ತಿದ್ದರು. ಆದರೆ, ಬಿಜೆಪಿಯ ಮೋದಿ ಸರಕಾರ‌ ಜನರಿಗಾಗಿ ವಿವಿಧ ಯೋಜನೆಗಳನ್ನು ಕೈಗೊಂಡಿದ್ದು, ಕಾರ್ಯಕರ್ತರ ಮೂಲಕ ಮನೆಮನೆಗಳಿಗೆ ತಲುಪುವ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಮತ್ತೆ ಅಧಿಕಾರಕ್ಕೆ ಬರಬೇಕಿದೆ ಎಂದು ಹೇಳಿದರು.

click me!