* ಕೂಡಲಶ್ರೀ ಹೋರಾಟಕ್ಕೆ ನಮ್ಮ ಬೆಂಬಲ: ನಿರಾಣಿ
* ಎಸೆಯುವುದು, ತತ್ತಿ ಒಗೆಯುವುದು ನಮ್ಮ ಸಂಪ್ರದಾಯವಲ್ಲ
* ಕುಂಬಳ ಕಾಯಿ ಕಳ್ಳ ಎಂದರೆ ನಾನ್ಯಾಕೆ ಹೆಗಲು ಮುಟ್ಟಿಕೊಳ್ಳಲಿ
ಬೆಳಗಾವಿ(ಸೆ.30): ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಖಾತೆ ಸಚಿವ ಮುರಗೇಶ ನಿರಾಣಿ(Murugesh Nirani) ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಒಂದೇ ಕಾರಿನಲ್ಲಿ ಸಂಚರಿಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಎಡೆಮಾಡಿದೆ.
ಖಾಸಗಿ ಹೊಟೇಲ್ಲೊಂದರಲ್ಲಿ ನಿರಾಣಿ ಮತ್ತು ಸತೀಶ ಜಾರಕಿಹೊಳಿ(Satish Jarkiholi) ಮಾತುಕತೆ ನಡೆಸಿದ್ದು, ಬಳಿಕ ಇಬ್ಬರೂ ನಾಯಕರು ಒಂದೇ ಕಾರಿನಲ್ಲಿ ಅಜ್ಞಾತ ಸ್ಥಳಕ್ಕೆ ತೆರಳಿದರು. ಯಾವ ವಿಚಾರವಾಗಿ ಚರ್ಚೆ ಮಾಡಿದ್ದಾರೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ. ಅಲ್ಲದೇ, ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಆದರೆ, ಈ ಕುರಿತು ಸಚಿವ ಮುಗರೇಶ ನಿರಾಣಿ ಸ್ಪಷ್ಟನೆಯನ್ನು ನೀಡಿದ್ದಾರೆ.
ಸತೀಶ ಜಾರಕಿಹೊಳಿ ಹಾಗೂ ನಾನು ಒಂದೇ ಕಾರಿನಲ್ಲಿ ಸಂಚರಿಸಿದ್ದೇವೆ ನಿಜ. ಇದರಲ್ಲಿ ಯಾವುದೇ ವಿಶೇಷ ಇಲ್ಲ. ನಾವಿಬ್ಬರೂ ಬೆಂಗಳೂರಿನಿಂದ ಬೆಳಗಾವಿಗೆ(Belagavi) ಬಂದೇವು. ಇಬ್ಬರೂ ಊಟ ಮಾಡಿರಲಿಲ್ಲ. ಹಾಗಾಗಿ, ಇಬ್ಬರು ಊಟ ಮಾಡಿ ಸಕ್ಕರೆ ಕಾರ್ಖಾನೆ ಮಾಲೀಕರ ಸಬೆಗೆ ತೆರಳಿದೇವು. ಇದರಲ್ಲಿ ಯಾವುದೇ ರಾಜಕಾರಣ ಇಲ್ಲ ಎಂದು ಸ್ಪಷ್ಟಪಡಿಸಿದರು.
ಮೊನ್ನೇ ಫೇಸ್‌ಬುಕ್ ಈಗ ಟ್ವಿಟ್ಟರ್ ಖಾತೆಗೆ ಕನ್ನ: ಸೈಬರ್ ಸೆಲ್ ಮೊರೆ ಹೋದ ಸಚಿವ ನಿರಾಣಿ
ಕುಂಬಳ ಕಾಯಿ ಕಳ್ಳ ಎಂದರೆ ನಾನ್ಯಾಕೆ ಹೆಗಲು ಮುಟ್ಟಿಕೊಳ್ಳಲಿ:
ಬಸವಜಯ ಮೃತ್ಯುಂಜಯ ಸ್ವಾಮೀಜಿ ನಮ್ಮ ಗುರುಗಳು. ನಮ್ಮ ಸಮಾಜದ ಪೀಠಕ್ಕೆ ಅವರನ್ನು ನಾವೇ ತಂದವರು. ಅವರು ಯಾರ ಬಗ್ಗೆ ಹೇಳಿದ್ದಾರೋ ಗೊತ್ತಿಲ್ಲ. ಕುಂಬಳ ಕಾಯಿ ಕಳ್ಳ ಎಂದರೆ ನಾನ್ಯಾಕೆ ಹೆಗಲು ಮುಟ್ಟಿಕೊಂಡು ನೋಡಲಿ ಎಂದು ಸಚಿವ ಮುರುಗೇಶ ನಿರಾಣಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ದೇವರಾಣೆಗೂ ನನಗೆ ಸಣ್ಣ ಮನಸ್ಸಿನ ವ್ಯಕ್ತಿ ನಾನಲ್ಲ. ಜಯಮೃತ್ಯುಂಜಯ ಸ್ವಾಮೀಜಿ ನನ್ನ ಮೇಲೆ ಆರೋಪ ಮಾಡಿರಲು ಸಾಧ್ಯವಿಲ್ಲ. ಅವರ ಹೋರಾಟ ಮಾಡುತ್ತಿದ್ದಾರೆ. ಅದಕ್ಕೆ ನಮ್ಮ ಬೆಂಬಲ ಇದೆ ಎಂದರು.
ಇನ್ನು ಕಳೆದ ಹತ್ತು ವರ್ಷಗಳಿಂದ ನಾನು ಸಮಾಜಕ್ಕಾಗಿ ಹೋರಾಡಿದ್ದೇನೆ. ನಾನು ಸಚಿವನಾಗಿರುವುದರಿಂದ ಉಳಿದವರು ಮಾಡುವ ಹಾಗೆ ರೋಡಿನಲ್ಲಿ ಬಂದು ಹೋರಾಟ ಮಾಡಲು ಆಗುವುದಿಲ್ಲ. ನಾವು ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕೆಂಬ ಹೋರಾಟದಲ್ಲಿ ನಾನಿದ್ದೆ ಎಂದರು. ಇನ್ನು ಕಲ್ಲು ಎಸೆಯುವುದು, ತತ್ತಿ ಒಗೆಯುವುದು ನಮ್ಮ ಸಂಪ್ರದಾಯವಲ್ಲ. ನನ್ನದೂ ಸಮೂಹ ಸಂಸ್ಥೆಯಿಂದ ಸಾಕಷ್ಟುಜನರಿಗೆ ಉದ್ಯೋಗ ಕೊಟ್ಟಿದ್ದೇವೆ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರಗೆ ಟಾಂಗ್ ನೀಡಿದರು.
ಸಚಿವ ಇಲ್ಲದಿದ್ದಾಗಲೂ ನಾನು ಹೋರಾಟ ಮಾಡಿದ್ದೇನೆ. ನಾನು ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗಬೇಕು. ವೀರಶೈವ ಲಿಂಗಾಯತದ ಎಲ್ಲ ಪಂಗಡದವರಿಗೆ ಸರಕಾರದ ಮೀಸಲಾತಿ ಸಿಗಬೇಕು. ಇದನ್ನು ನಾವು ಮುಖ್ಯಮಂತ್ರಿ ಗಮನಕ್ಕೆ ತಂದಿದ್ದೇನೆ ಎಂದು ಹೇಳಿದರು.