
ಬೆಂಗಳೂರು (ಫೆ.9): ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದ ಕಾಂಗ್ರೆಸ್, ಅವಿರತ ಹೋರಾಟ ಮಾಡಿದ್ದು ಕಾಂಗ್ರೆಸ್ ಹೊರತು ಬಿಜೆಪಿಯವ್ರು, ಈಶ್ವರಪ್ಪನವರು ಅಲ್ಲ. ದೇಶದ ಸ್ವಾತಂತ್ರ್ಯಕ್ಕೆ ಯಾವುದೇ ಹೋರಾಟದ ಮಾಡದ ಇವರು ದೇಶ, ರಾಷ್ಟ್ರೀಯತೆ ಬಗ್ಗೆ ಮಾತಾಡ್ತಾರೆ ಎಂದು ಸಚಿವ ಎಂಬಿ ಪಾಟೀಲ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಸಂಸದ ಡಿಕೆ ಸುರೇಶ್‌ರನ್ನ ಗುಂಡಿಟ್ಟು ಕೊಲ್ಲಬೇಕು ಎಂಬ ಈಶ್ವರಪ್ಪನವರ ಪ್ರಚೋದನಕಾರಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಈಶ್ವರಪ್ಪ ಅನೇಕ ಬಾರಿ ಹೀಗೆ ಮಾತನಾಡಿದ್ದಾರೆ. ಮೈಕ್ ಸಿಕ್ಕರೆ ಏನೇನೋ ಮಾತಾಡ್ತಾರೆ. ಅವೆಲ್ಲವನ್ನ ತೆಗೆದುಬಿಟ್ಟರೆ ಬಹಳ ಅನಾಹುತಕ್ಕೆ ಹೋಗುತ್ತವೆ. ಸಂಸದ ಡಿಕೆಸುರೇಶ್ ದಕ್ಷಿಣ ಭಾರತ ಪ್ರತ್ಯೇಕ ರಾಷ್ಟ್ರವಾಗುತ್ತೆ ಅಂತಾ ಅವರು ಯಾವ ಅರ್ಥದಲ್ಲಿ ಮಾತಾಡಿದ್ದಾರೆ ಅಂತಾ ಅರ್ಥ ಮಾಡಿಕೊಳ್ಳಿ. ದಕ್ಷಿಣ ರಾಜ್ಯಗಳಿಗೆ ನ್ಯಾಯಯುತವಾಗಿ ಬರಬೇಕಾದ ಅನುದಾನದಲ್ಲಿ ಅನ್ಯಾಯವಾಗ್ತಿದೆ. ನಮಗೆ ಕೊಡಬೇಕಾದ ಅನುದಾನ ಉತ್ತರ ಭಾರತಕ್ಕೆ ಕೊಡ್ತಿರೋದ್ರಿಂದ ನಮಗೆ ಅನ್ಯಾಯ ಆಗ್ತಿದೆ ಎಂದು ನೋವಿನಲ್ಲಿ ಆ ಮಾತನ್ನು ಹೇಳಿದ್ದಾರೆ. ಅವರಿಗೆ ಬಂದಿರೋ ಸಿಟ್ಟನ್ನ ಅವರು ಮಾತುಗಳ ಮೂಲಕ ತೋರಿಸಿದ್ದಾರೆ ಅಷ್ಟೆ. ಅದನ್ನೇ ನಿಜವಾಗಿ ದೇಶ ವಿಭಜನೆ ಮಾಡೋ ಅರ್ಥದಲ್ಲಿ ಹೇಳಿದ್ದಾರೆ ಅಂದರೆ ಹೇಗೆ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ದೇಶ ಒಟ್ಟುಗೂಡಿಸುವ ಕೆಲಸ ಮಾಡ್ತಿದೆ. ಸಂವಿಧಾನ ಬದಲಾವಣೆ ಮಾಡೋಕೆ ಬಂದಿರೋದು ಅಂತಾ ಬಿಜೆಪಿ ಸಂಸದ ಅನಂತ ಕುಮಾರ ಹೆಗ್ಡೆ ಹೇಳಿದ್ರು. ಹಾಗಾದರೆ ಇವರ ಉದ್ದೇಶ ಏನು ಅಂತಾ ಇಡೀ ಜಗತ್ತಿಗೆ ಗೊತ್ತಿದೆ. ಡಿಕೆ ಸುರೇಶ್ ಹೇಳಿಕೆಗೂ ಸಂಸತ್ ನಲ್ಲಿ ಮೋದಿ ಮಾತಾಡೋದು ಸರಿನಾ? ಬಿಜೆಪಿಯವರಿಗೆ ಇಂಥ ಹೇಳಿಕೆ ಸಿಕ್ರೆ ಸಾಕು. ಅದನ್ನೇ ಹಿಡಿದುಕೊಂಡು ರಾಜಕೀಯ ಮಾಡ್ತಾರೆ. ಅದೇ ದಕ್ಷಿಣ ಭಾರತಕ್ಕೆ ಆಗ್ತಿರೋ ಅನ್ಯಾಯ ಹೇಗೆ ಸರಿ ಮಾಡ್ತೇವೆ ಅಂತಾ ಪ್ರಧಾನಿ ಹೇಳಲಿಲ್ಲ.
ಕಾಂಗ್ರೆಸ್ ಹಿಂದಿನಿಂದಲೂ ದೇಶ ಒಡೆಯುವ ಕೆಲಸ ಮಾಡುತ್ತಿದೆ: ಈಶ್ವರಪ್ಪ ವಾಗ್ದಾಳಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.