ಜಗದೀಶ್‌ ಶೆಟ್ಟರ್‌ಗೆ ವಯಸ್ಸಾಗಿದೆ, ಪಾಪ ಅವರ ಬಗ್ಗೆ ಏಕೆ ಮಾತನಾಡಬೇಕು: ಸಚಿವ ಮಂಕಾಳು ವೈದ್ಯ

By Kannadaprabha News  |  First Published Jan 28, 2024, 1:30 AM IST

ಜಗದೀಶ್‌ ಶೆಟ್ಟರ್ ಅವರಿಗೆ ವಯಸ್ಸಾಗಿದೆ. ಏನು ಅನ್ನಿಸಿದೆಯೋ ಗೊತ್ತಿಲ್ಲ. ತಮಗೆ ಆ ಪಕ್ಷ (ಬಿಜೆಪಿ) ಸೇರಿದ ಬಗ್ಗೆ ಗೊತ್ತಾಗಿಲ್ಲ. ವಯಸ್ಸಾಗಿದೆ. ಪಾಪ ಅವರ ಬಗ್ಗೆ ಏಕೆ ಮಾತನಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದರು.


ಕಾರವಾರ (ಜ.28): ಜಗದೀಶ್‌ ಶೆಟ್ಟರ್ ಅವರಿಗೆ ವಯಸ್ಸಾಗಿದೆ. ಏನು ಅನ್ನಿಸಿದೆಯೋ ಗೊತ್ತಿಲ್ಲ. ತಮಗೆ ಆ ಪಕ್ಷ (ಬಿಜೆಪಿ) ಸೇರಿದ ಬಗ್ಗೆ ಗೊತ್ತಾಗಿಲ್ಲ. ವಯಸ್ಸಾಗಿದೆ. ಪಾಪ ಅವರ ಬಗ್ಗೆ ಏಕೆ ಮಾತನಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದರು. ನಗರಕ್ಕೆ ಆಗಮಿಸಿದ್ದ ವೇಳೆ ಜಗದೀಶ ಶೆಟ್ಟರ್ ಕಾಂಗ್ರೆಸ್ ತೊರೆದು ಪುನಃ ಬಿಜೆಪಿ ಸೇರ್ಪಡೆಯಾದ ಬಗ್ಗೆ ಪತ್ರಕರ್ತರ ಪ್ರಶ್ನಿಸಿದಾಗ, ಅಷ್ಟೆಲ್ಲಾ ಮಾತನಾಡಿ, ಹೇಳಬಾರದ್ದು ಹೇಳಿಸಿಕೊಂಡು ಬಿಜೆಪಿಯವರು ಪುನಃ ಅವರನ್ನು ಸೇರಿಸಿಕೊಳ್ಳುತ್ತಾರೆ ಎಂದರೆ ಬಿಜೆಪಿಯವರ ಪರಿಸ್ಥಿತಿ ಎಲ್ಲಿಗೆ ಬಂದಿದೆ ಎಂದು ಯೋಚಿಸಿ. ಅವರನ್ನು ಅಭಿನಂದಿಸಬೇಕು ಎಂದು ಲೇವಡಿ ಮಾಡಿದರು.

ನಾವು ಕಾಂಗ್ರೆಸ್‌ನವರು ಮನುಷ್ಯರು, ಮನುಷ್ಯರ ಮೇಲೆ ಪ್ರೀತಿ, ವಿಶ್ವಾಸ, ನಂಬಿಕೆ ಇಟ್ಟುಕೊಳ್ಳುತ್ತೇವೆ. ಅವರದ್ದು ಏನು ಒಪ್ಪಂದ ಆಗಿದೆಯೋ ಗೊತ್ತಿಲ್ಲ. ಶೆಟ್ಟರ್ ಅವರು ಮಾಜಿ ಮುಖ್ಯಮಂತ್ರಿ, ಹಿರಿಯರು ಅವರಿಗೆ ನೋವಾಗಿದೆ. ಖುಷಿಯಲ್ಲಿರಲಿ ಎಂದು ಎಂಎಲ್‌ಸಿ ಮಾಡಿದ್ದೆವು. ಸಹಾಯ ಮಾಡಿದೆವು. ಆದರೆ ಅವರು ಅದನ್ನು ಉಳಿಸಿಕೊಂಡಿಲ್ಲ ಎಂದರೆ ನಾವು ಏನು ಹೇಳಲು ಸಾಧ್ಯ ಎಂದು ಪ್ರಶ್ನಿಸಿದರು. 

Tap to resize

Latest Videos

undefined

ಅಧಿಕಾರಕ್ಕೆ ಬದಲಾವಣೆ ಮಾಡುತ್ತಾರೋ, ಬಿಜೆಪಿಯವರಿಗೆ ಅಧಿಕಾರ ತಪ್ಪಿಹೋಗುತ್ತದೆ ಎಂದು ಶೆಟ್ಟರ್ ಕಾಲಿಗೆ ಬಿದ್ದು ಕರೆದುಕೊಂಡು ಹೋಗಿದ್ದಾರೆ ಗೊತ್ತಿಲ್ಲ. ಯಾವುದೇ ಕಾರಣಕ್ಕೂ ಸೇರಿಸಿಕೊಳ್ಳುವುದಿಲ್ಲ ಎಂದವರು ಸೇರಿಸಿಕೊಂಡಿದ್ದಾರೆ ಎಂದರೆ ಭಯ ಆರಂಭವಾಗಿದೆ. ಕಳೆದ ಚುನಾವಣೆಯಲ್ಲಿ ಎಲ್ಲ ಕಳೆದುಕೊಂಡಿದ್ದಾರೆ. ಈಗಲೂ ಕಳೆದುಕೊಳ್ಳುತ್ತೇವೆ ಎನ್ನಿಸಿರಬಹುದು ಎಂದ ಅವರು, ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋದವರು ವಾಪಸ್ ಬರುತ್ತಾರೆಯೇ ಎಂದು ಕೇಳಿದಾಗ, ಅವರು ಈಗಲೂ ಬರಲು ರೆಡಿಯಿದ್ದಾರೆ. 

ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್ ಆಗಲ್ಲ: ಸಚಿವ ರಾಮಲಿಂಗಾರೆಡ್ಡಿ

ನಮ್ಮ ಬಳಿ ಸಾಮರ್ಥ್ಯವಿದೆ. ನೀವೇ ಬಂದು ಗೆಲ್ಲಬೇಕೆಂದಿಲ್ಲ ಎಂದು ಹೇಳಿ ನಾವು ಸ್ವಲ್ಪ ಬ್ರೇಕ್ ಹಾಕುತ್ತಿದ್ದೇವೆ. ಯಾರೇ ಇರಲಿ ಅಧಿಕಾರಕ್ಕೋ, ಅವರು ಬದುಕಬೇಕೆಂದು ಏನುಬೇಕಾದರೂ ಮಾಡಿದರೆ ಜನರು ಎಲ್ಲಿ ನಂಬುತ್ತಾರೆ ಎಂದರು. ಕರಾವಳಿ ಉತ್ಸವ ನಡೆಸುವ ಕುರಿತು ಶುಕ್ರವಾರ ದಿನಾಂಕ ನಿಗದಿ ಮಾಡುತ್ತೇವೆ. ಮುಖ್ಯಮಂತ್ರಿ ಅವರ ಸಮಯಾವಕಾಶ ಕೇಳಲಾಗುತ್ತಿದೆ. ಅವರು ಬಂದರೆ ಅನುದಾನವೂ ಬರುತ್ತದೆ ಎನ್ನುವ ನಿರೀಕ್ಷೆಯಿದೆ. ನಮ್ಮ ಮುಖ್ಯಮಂತ್ರಿ ಆಡಿದ ಮಾತಿಗೆ ತಪ್ಪುವುದಿಲ್ಲ. ಉತ್ಸವದ ದಿನಾಂಕವನ್ನೂ ಅಂತಿಮ ಮಾಡುತ್ತೇವೆ ಎಂದು ಹೇಳಿದರು.

click me!