ಸಚಿವ ಮಧು ಭ್ರಷ್ಟಾಚಾರ ಶೀಘ್ರವೇ ತೆರೆದಿಡುವೆ: ಪ್ರಣವಾನಂದ ಸ್ವಾಮೀಜಿ

By Kannadaprabha News  |  First Published Dec 31, 2023, 8:58 PM IST

ನನ್ನ ತಲೆ ಕೆಟ್ಟು ಚೆಕ್ ಬೌನ್ಸ್ ಆಗಿಲ್ಲ. ನಾನು ಸಮಾಜದ ಯಾವುದೇ ಜಾಗವನ್ನೂ ಕಬಳಿಸಿಲ್ಲ ಎಂದು ಈಡಿಗ ಸಮಾಜದ ಶ್ರೀ ಪ್ರಣವಾನಂದ ಸ್ವಾಮೀಜಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಟೀಕೆಗೆ ತಿರುಗೇಟು ನೀಡಿದ್ದಾರೆ.


ದಾವಣಗೆರೆ (ಡಿ.31): ನನ್ನ ತಲೆ ಕೆಟ್ಟು ಚೆಕ್ ಬೌನ್ಸ್ ಆಗಿಲ್ಲ. ನಾನು ಸಮಾಜದ ಯಾವುದೇ ಜಾಗವನ್ನೂ ಕಬಳಿಸಿಲ್ಲ ಎಂದು ಈಡಿಗ ಸಮಾಜದ ಶ್ರೀ ಪ್ರಣವಾನಂದ ಸ್ವಾಮೀಜಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಟೀಕೆಗೆ ತಿರುಗೇಟು ನೀಡಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ನನಗೆ ತಲೆ ಕೆಟ್ಟಿದ್ಯೋ, ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ತಲೆ ಕೆಟ್ಟಿದ್ಯೋ ಎಂಬುದು ಜನರಿಗೆ ಗೊತ್ತಿದೆ ಎಂದು ಮಧು ಬಂಗಾರಪ್ಪ ವಿರುದ್ದ ಹರಿಹಾಯ್ದರು. ಓರ್ವ ವಿದ್ಯಾ ಮಂತ್ರಿಯಾಗಿ ಮಧು ಬಂಗಾರಪ್ಪ ಬಾಯಿಗೆ ಬಂದಂತೆ ಮಾತನಾಡಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣ ಮಧು ಬಂಗಾರಪ್ಪರನ್ನು ಸಚಿವ ಸಂಪುಟದಿಂದ ಕೈಬಿಡಬೇಕು. ಮಧು ಬಂಗಾರಪ್ಪ ಅಸಂಸ್ಕೃತ, ಅವಿದ್ಯಾವಂತ ಮಂತ್ರಿ ಎಂದು ಕಿಡಿಕಾರಿದರು.

ಮುಂದಿನ ದಿನಗಳಲ್ಲಿ ಸಚಿವ ಮಧು ಬಂಗಾರಪ್ಪ ಭ್ರಷ್ಟಾಚಾರ ತೆರೆದಿಡುವ ಕೆಲಸ ಮಾಡುತ್ತೇನೆ. ಸದ್ಯದಲ್ಲೇ ಚೆಕ್ ಬೌನ್ಸ್ ಪ್ರಕರಣದಲ್ಲಿ ಮಧು ಬಂಗಾರಪ್ಪ ಜೈಲಿಗೆ ಹೋಗುವ ಪರಿಸ್ಥಿತಿ ಬರುತ್ತದೆ. ಸಚಿವ ಸಂಪುಟದಲ್ಲಿಯೇ ದುರಂಹಕಾರಿ ಮಂತ್ರಿಯೆಂದರೆ ಅದು ಮಧು ಬಂಗಾರಪ್ಪ. ಸ್ವಾಮೀಜಿಗಳು, ಜನರಿಗೆ ಮರ್ಯಾದೆಯನ್ನೂ ಕೊಡದ ವ್ಯಕ್ತಿ ಮಂತ್ರಿಯಾಗಿದ್ದೂ ವ್ಯರ್ಥ ಎಂದು ಹೇಳಿದರು.

Latest Videos

undefined

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಚಿವ ಸಂಪುಟದಿಂದ ಮಧು ಬಂಗಾರಪ್ಪಗೆ ಕೈಬಿಟ್ಟು, ಈಡಿಗ ಸಮುದಾಯದ ಬೇರೆ ಯಾರಿಗಾದರೂ ಸಚಿವ ಸ್ಥಾನ ನೀಡಲಿ. ಐವರು ಸಚಿವರ ಬಳಿ ಮಧು ಬಂಗಾರರಪ್ಪ ಹಣ ಪಡೆದಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸಮಾವೇಶಕ್ಕಾಗಿ ಹೀಗೆ ಹಣ ಪಡೆಯಲಾಗಿದೆ ಎಂದು ಆರೋಪಿಸಿದರು. ಒಂದು ವೇಳೆ ನನ್ನ ಆರೋಪ ನಿರಾಕರಿಸುವುದಾದರೆ ಧರ್ಮಸ್ಥಳಕ್ಕೆ ಬಂದು, ಗಂಟೆ ಭಾರಿಸಿ ಹಣ ಪಡೆದಿಲ್ಲವೆಂದು ಮಧು ಬಂಗಾರಪ್ಪ ಹೇಳಲಿ. ನಾನು ಹಣ ಪಡೆದ ಬಗ್ಗೆ ಗಂಟೆ ಹೊಡೆದು ಹೇಳುತ್ತೇನೆ ಎಂದು ಸವಾಲು ಹಾಕಿದರು.

ಈಡಿಗ ಸಮಾಜಕ್ಕೆ ಮಧು ಬಂಗಾರಪ್ಪ ಕೊಡುಗೆ ಏನಿದೆ? ಇಂತಹ ದುರಹಂಕಾರಿ ವ್ಯಕ್ತಿಯು ಸಂವಿಧಾನಕ್ಕೆ ಅಗೌರವ ತೋರಿಸುತ್ತಿದ್ದಾರೆ. ಜ.6ರಂದು ದೆಹಲಿಗೆ ಹೋಗಲಿದ್ದೇನೆ. ಅಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಮುಖಂಡ ರಾಹುಲ್ ಗಾಂಧಿಗೆ ದಾಖಲೆ ಸಮೇತ ಮಧು ಬಂಗಾರಪ್ಪ ವಿರುದ್ಧ ದೂರು ನೀಡುತ್ತೇನೆ ಎಂದು ಎಚ್ಚರಿಸಿದರು.

ಸಂವಿಧಾನದ ಧ್ಯೇಯೋದ್ದೇಶದ ಜಾರಿ ಸರ್ಕಾರದ ಜವಾಬ್ದಾರಿ: ಸಿದ್ದರಾಮಯ್ಯ

ಗೀತಾ ಸ್ಪರ್ಧಿಸಿದರೆ ಈಡಿಗ ಸಮಾಜದ ಗಣ್ಯರು ಕಣಕ್ಕೆ: ಕನ್ನಡ ಚಿತ್ರರಂಗದ ಮೇರು ನಟ ಡಾ.ರಾಜಕುಮಾರ ಕುಟುಂಬ ಒಂದು ಪಕ್ಷಕ್ಕೆ ಎಂದಿಗೂ ಸೀಮಿತವಾಗಿರಲಿಲ್ಲ. ಆದರೆ, ಮೊನ್ನೆ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಶಿವರಾಜಕುಮಾರ ಭಾಗವಹಿಸಿದ್ದಾರೆ ಎಂದು ಈಡಿಗ ಸಮಾಜದ ಗುರುಗಳಾದ ಶ್ರೀ ಪ್ರಣವಾನಂದ ಸ್ವಾಮೀಜಿ ಬೇಸರ ಹೊರ ಹಾಕಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಬಹಿರಂಗವಾಗಿಯೇ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡುವ ಆಫರ್ ನೀಡಿದ್ದಾರೆ. ಶಿವಮೊಗ್ಗದಲ್ಲಿ ಗೀತಾ ಶಿವರಾಜಕುಮಾರ ನಿಲ್ಲಿಸಲು ಕಾಂಗ್ರೆಸ್ಸಿನ ನಾಯಕರು ತೀರ್ಮಾನಿಸಿದ್ದರು. ಶಿವಮೊಗ್ಗದಲ್ಲಿ ಅವರ ವಿರುದ್ಧ ನಾನೂ ಸೇರಿ ಈಡಿಗ ಸಮುದಾಯದ ಅನೇಕ ಗಣ್ಯರು ಸ್ಪರ್ಧಿಸಲಿದ್ದೇನೆ ಎಂದು ತಿಳಿಸಿದರು.

click me!