* ಮತ್ತೆ ರಾಜ್ಯ ಬಿಜೆಪಿಯಲ್ಲಿ ಶುರುವಾಯ್ತಾ ವಲಸಿಗ, ಮೂಲ
* * ಸ್ಫೋಟಕ ಹೇಳಿಕೆ ಕೊಟ್ಟ ಸಚಿವ ಕೆಎಸ್ ಈಶ್ವರಪ್ಪ
* ಹೊರಗಿನಿಂದ ಬಂದವರು ಬಿಜೆಪಿ ತೊರೆಯುತ್ತಾರಾ?
ಬೆಳಗಾವಿ, (ಡಿ.16): ರಾಜ್ಯ ಬಿಜೆಪಿಯಲ್ಲಿ (Karnataka BJP) ಮೂಲ ಹಾಗೂ ವಲಸಿಗ ಎನ್ನುವ ಕೋಲ್ಡ್ ವಾರ್ ಶುರುವಾಗಿರುವ ಲಕ್ಷಣಗಳು ಕಾಣಿಸುತ್ತಿವೆ. ಇದಕ್ಕೆ ಪೂರಕವೆಂಬಂತೆ ಸ್ವತಃ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ಪರೋಕ್ಷ ಸುಳಿವು ಕೊಟ್ಟಿದ್ದಾರೆ.
ಇಂದು (ಗುರುವಾರ) ಬೆಳಗಾವಿಯ (Belagavi ಸುವರ್ಣಸೌದಲ್ಲಿ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ, ಕೆಲವರು ಬಿಜೆಪಿಗೆ ಬಂದು ಉದ್ಯಮ ಮಾಡುತ್ತಿದ್ದಾರೆ. ಅಂತವರು ಬಹಳ ಕಾಲ ಪಕ್ಷದಲ್ಲಿ ಇರಲ್ಲ ಎಂದು ಅಚ್ಚರಿ ಹೇಳಿಕೆ ನೀಡಿದರು.
Council Election Karnataka : ಬಿಜೆಪಿಗರ ಕೆಂಗಣ್ಣಿಗೆ ಗುರಿಯಾದ ರಮೇಶ್ ಜಾರಕಿಹೊಳಿ ?
ಕೆಲವರು ಹೊರಗಿನಿಂದ ಬಂದು ಇನ್ನೂ ಪಕ್ಷಕ್ಕೆ ಹೊಂದಾಣಿಕೆ ಆಗಿಲ್ಲ. ಪರಿಷತ್ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಯತ್ನಿಸಿದ್ದಾರೆ. ಈ ಸಂಬಂಧ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು.
ಬಿಜೆಪಿಗೆ(BJP) ಬಂದ ಮೇಲೆ ಉದ್ಯಮ ಮಾಡುತ್ತಿದ್ದಾರೆ. ಹೊಂದಾಣಿಕೆ ಆಗದಿದ್ದರೆ ಪಕ್ಷದಿಂದ ಹಿಂದೆ ಸರಿಯುತ್ತಾರೆ. ಬಿಜೆಪಿ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಪಕ್ಷವಾಗಿದೆ. ಬಹಳಷ್ಟು ಜನರು ಬರುತ್ತಾರೆ ಎಂದು ಹೇಳಿದರು.
ಶಾಸಕ ಎಂ.ಪಿ. ರೇಣುಕಾಚಾರ್ಯ(MP Renukacharya) ಮಾತನಾಡಿ, ಸಚಿವರು ತಮ್ಮ ನಡಾವಳಿಕೆ ಬದಲಿಸಿಕೊಳ್ಳಲು ಶಾಸಕಾಂಗ ಸಭೆಯಲ್ಲಿ ಸೂಚಿಸಲಾಗಿದೆ. ಪಕ್ಷದಲ್ಲಿ ಅಧಿಕಾರ ಅನುವಿಸಿ, ಹೊರ ಹೋದರೆ ಬಿಜೆಪಿಗೆ ದ್ರೋಹ ಮಾಡಿದಂತೆ. ಶಾಸಕರಿಂದ ಸರ್ಕಾರವಿದೆ. ಸಚಿವರ ಬಗ್ಗೆ ಆರೋಪ ಮಾಡಿಲ್ಲ ಎಂದು ತಿಳಿಸಿದರು.
ಮೂಲ, ವಲಸಿಗರ ಎಂಬುದು ನಮ್ಮಲ್ಲಿ ಇಲ್ಲ. ಶಾಸಕಾಂಗ ಸಭೆಯಲ್ಲಿ ಮುಂದಿನ ಬಾರಿ ಅಕಾರಕ್ಕೆ ಬರುವ ಬಗ್ಗೆ ಹಾಗೂ ಇನ್ನಿತರೆ ವಿಷಯಗಳ ಚರ್ಚೆ ನಡೆಸಲಾಯಿತು ಎಂದರು.
ರಮೇಶ್ ಜಾರಕಿಹೊಳಿಗೆ ಸಂಕಷ್ಟ ?
ಬೆಳಗಾವಿ ವಿಧಾನ ಪರಿಷತ್ ದ್ವಿ ಸದಸ್ಯ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ (Belagavi MLC Election) ಸೋದರ ಲಖನ್ ಜಾರಕಿಹೊಳಿ ಗೆಲುವು ಸಾಧಿಸಿದ್ದರೂ, ಬಿಜೆಪಿಯ (BJP) ಅಧಿಕೃತ ಅಭ್ಯರ್ಥಿ ಮಹಾಂತೇಶ ಕವಟಗಿ ಮಠ ಅವರ ಸೋಲು ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh jarkiholi) ಅವರಿಗೆ ಸಂಕಷ್ಟ ತಂದಿಟ್ಟಿದೆ. ಹೇಳಿ ಕೇಳಿ ಲಖನ್ ಜಾರಕಿಹೊಳಿ (Lakhan Jarkiholi) ಅವರನ್ನು ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲಿಸಿದ್ದೇ ರಮೇಶ್ ಜಾರಕಿಹೊಳಿ. ತನ್ನ ರಾಜಕೀಯ (Politics) ವೈರಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಸೋದರ, ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿ ಹೊಳಿಯನ್ನು ಸೋಲಿಸಿ ಬಿಜೆಪಿಯನ್ನು (BJP) ಗೆಲ್ಲಿಸುವುದು ಮತ್ತು ತನ್ನ ಸೋದರ ಲಖನ್ ಜಾರಕಿಹೊಳಿಯನ್ನೂ ಪರಿಷತ್ ಸದಸ್ಯನನ್ನಾಗಿ ಮಾಡುವ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವುದು ರಮೇಶ್ ಲೆಕ್ಕಾಚಾರ ಆಗಿತ್ತು. ಆದ್ರೆ, ಅದು ವಿಫಲವಾಗಿದೆ.
ಪರಿಷತ್ ಚುನಾವಣೆ ಪ್ರಚಾರಕ್ಕೆ ಬೆಳಗಾವಿಗೆ ಆಗಮಿಸಿದ್ದ ಸಿಎಂ ಬೊಮ್ಮಾಯಿ (CM basavaraja Bommai) ಕೂಡ ರಮೇಶ್ ಜಾರಕಿಹೊಳಿ ಸೇರಿ ಸ್ಥಳೀಯ ಮುಖಂಡರಿಗೆ ಕವಟಗಿ ಮಠ ಮೊದಲ ಪ್ರಾಶಸ್ತ್ಯದ ಮತಗಳಲ್ಲೇ ಗೆಲ್ಲುವಂತೆ ನೋಡಿಕೊಳ್ಳಿ ಎಂದು ಸ್ಪಷ್ಟವಾಗಿ ಸೂಚಿಸಿ ಹೋಗಿದ್ದರು. ರಮೇಶ್ ಜಾರಕಿಹೊಳಿ ಕೂಡ ಮೊದಲ ವೋಟು ಕವಟಗಿ ಮಠ ಅವರಿಗೆ, ಎರಡನೇ ವೋಟು ಕಾಂಗ್ರೆಸ್ (Congress) ಸೋಲಿಸಲು ಎಂದು ಪ್ರಚಾರವನ್ನೂ ನಡೆಸಿದ್ದರು. ಆದರೆ, ಇದೀಗ ಪಕ್ಷದ ಅಧಿಕೃತ ಅಭ್ಯರ್ಥಿ ಸೋತು ಲಖನ್ ಗೆದ್ದಿದ್ದಾರೆ. ಇದರಿಂದ ಬಿಜೆಪಿಗೆ ಮುಖಭಂಗವಾದಂತಾಗಿದ್ದು, ಇದರ ಹೊಣೆಯನ್ನು ರಮೇಶ್ ಜಾರಕಿಹೊಳಿ ಅವರೇ ಹೊರಬೇಕಿದೆ. ಹೀಗಾಗಿ ರಮೇಶ್ ಜಾರಕಿಹೊಳಿ ಅವರು ಬಿಜೆಪಿ ಹೈಕಮಾಂಡ್ ಅವಕೃಪೆಗೆ ಒಳಗಾಗಲಿದ್ದಾರೆಯೇ ಎನ್ನುವ ಕುತೂಹಲ ಮೂಡಿದೆ.