ಜೆಡಿಎಸ್ ಜೋಕರ್ ಇದ್ದಂತೆ. ಇಸ್ಪೀಟ್ ಆಟದಲ್ಲಿರುವಂತೆ ಜೆಡಿಎಸ್ ಅನ್ನು ಹೇಗಾದರೂ ಹೊಂದಿಸಿಕೊಳ್ಳಬಹುದು. ಇತ್ತ ರಮ್ಮಿ ಆಡುವುದಕ್ಕೆ, ಅತ್ತ ಸೆಟ್ ಆಟಕ್ಕೂ ಸೇರಿಸಿಕೊಳ್ಳಬಹುದು ಎಂದು ವ್ಯಂಗ್ಯವಾಡಿದ ಸಹಕಾರ ಸಚಿವ ಕೆ.ಎನ್.ರಾಜಣ್ಣ
ಮದ್ದೂರು(ಆ.06): ಜೆಡಿಎಸ್ ಜೋಕರ್ ಇದ್ದಂತೆ. ಇಸ್ಪೀಟ್ ಆಟದಲ್ಲಿರುವಂತೆ ಜೆಡಿಎಸ್ ಅನ್ನು ಹೇಗಾದರೂ ಹೊಂದಿಸಿಕೊಳ್ಳಬಹುದು. ಇತ್ತ ರಮ್ಮಿ ಆಡುವುದಕ್ಕೆ, ಅತ್ತ ಸೆಟ್ ಆಟಕ್ಕೂ ಸೇರಿಸಿಕೊಳ್ಳಬಹುದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ವ್ಯಂಗ್ಯವಾಡಿದ್ದಾರೆ.
ಸೋಮವಾರ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈ ಹಿಂದೆ ಯಡಿಯೂರಪ್ಪನವರು ಸಿಎಂ ಆಗಿದ್ದಾಗ, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಮೇಲೆ ನನಗೇನೂ ದ್ವೇಷವಿಲ್ಲ. ಆದರೆ, ಜೆಡಿಎಸ್‌ನಲ್ಲಿರುವ ಅಪ್ಪ-ಮಗನೇ ನನ್ನ ಟಾರ್ಗೆಟ್ ಎಂದು ಹೇಳಿದ್ದರು.
ಅಪೆಕ್ಸ್ ಬ್ಯಾಂಕ್‌ನಲ್ಲಿ ಸಾಲ ನೀಡುವಲ್ಲಿ ಗೋಲ್‌ಮಾಲ್..? ಸಿದ್ದರಾಮಯ್ಯ ಸರ್ಕಾರದ ಮತ್ತೊಬ್ಬ ಸಚಿವನಿಗೆ ಸಂಕಷ್ಟ !
ಆ ಮಾತನ್ನು ಜೆಡಿಎಸ್‌ನವರು ಈಗ ಮರೆತಿದ್ದಾರೆ. ಬಿಜೆಪಿ-ಜೆಡಿಎಸ್‌ನವರು ಮೈತ್ರಿಯೋ, ಮದುವೆಯೋ ಏನೋ ಆಗಿದ್ದಾರೆ. ಈ ಮೈತ್ರಿ ಅದೆಷ್ಟು ದಿನ ಉಳಿಯುವುದೋ ನೋಡೋಣ ಎಂದು ಕುಟುಕಿದರು.