ಸಿಎಂ ಸೀಟು ಖಾಲಿ ಇದ್ದಿದ್ದರೆ ಟವಲ್ ಹಾಕಬಹುದಿತ್ತು. ಜಾಗವೇ ಖಾಲಿ ಇಲ್ಲ ಎಂದ ಮೇಲೆ ಟವಲ್ ಹಾಕುವ ಪ್ರಶ್ನೆಯೇ ಇಲ್ಲ. ಆಸೆ ಪಡುವುದು ತಪ್ಪಲ್ಲ. ದುರಾಸೆ ಪಡುವುದು ತಪ್ಪು. ಸದ್ಯಕ್ಕೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಇದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ಹಾಸನ (ಸೆ.13): ಸಿಎಂ ಸೀಟು ಖಾಲಿ ಇದ್ದಿದ್ದರೆ ಟವಲ್ ಹಾಕಬಹುದಿತ್ತು. ಜಾಗವೇ ಖಾಲಿ ಇಲ್ಲ ಎಂದ ಮೇಲೆ ಟವಲ್ ಹಾಕುವ ಪ್ರಶ್ನೆಯೇ ಇಲ್ಲ. ಆಸೆ ಪಡುವುದು ತಪ್ಪಲ್ಲ. ದುರಾಸೆ ಪಡುವುದು ತಪ್ಪು. ಸದ್ಯಕ್ಕೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಇದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಹೇಳಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಸಿಎಂ ತೀರ್ಮಾನ ಮಾಡೋದು ಶಾಸಕಾಂಗ ಪಕ್ಷ ಹಾಗೂ ಹೈ ಕಮಾಂಡ್. ಶಾಸಕರ ಬೆಂಬಲ ಇರುವವರೆಗೆ ಸಿಎಂ ಆಗಿರುತ್ತಾರೆ. ಇಂದು ಗಣಪತಿ ವಿಸರ್ಜನೆ ಇದ್ದು, ನಿನ್ನೆ ನಾಗಮಂಗಲದಲ್ಲಿ ಅಹಿತಕರ ಘಟನೆ ನಡೆದಿದೆ.
ಹಾಗಾಗಿ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ. ಹಾಸನ ಎಂದರೆ ಶಾಂತಿಗೆ ಹೆಸರಾದ ಜಿಲ್ಲೆ. ಸುಸಂಸ್ಕೃತರು ವಿದ್ಯಾವಂತರು ಇರುವ ಜಿಲ್ಲೆ ಹಾಸನ. ಹಾಗಾಗಿ ಶಾಂತಿ ಸುವ್ಯವಸ್ಥೆ ಕಾಪಾಡಲು ಮನವಿ ಮಾಡುತ್ತೇನೆ. ನಾಗಮಂಗಲ ಘಟನೆ ಬಗ್ಗೆ ಸಚಿವರು ವಿವರಣೆ ಮಾಡಿದ್ದಾರೆ. ಸದ್ಯ ಪರಿಸ್ಥಿತಿ ಶಾಂತವಾಗಿದೆ. ಯಾರು ಈ ಕೃತ್ಯ ಮಾಡಿದ್ದಾರೆ ಎನ್ನೋದನ್ನ ಈಗ ಪತ್ತೆ ಹಚ್ಚೋದು ಸುಲಭ. ಎಲ್ಲಾದರೂ ಒಂದು ಕಡೆ ಸಿಸಿ ಕ್ಯಾಮೆರಾದಲ್ಲಿ ದಾಖಲೆ ಸಿಕ್ಕೇ ಸಿಗುತ್ತದೆ. ಹಾಗಾಗಿ ಪೊಲೀಸರು ಈ ಬಗ್ಗೆ ದಾಖಲೆ ಸಮೇತ ಕಂಡುಹಿಡಿಯುತ್ತಾರೆ. ಯಾರೇ ತಪ್ಪಿತಸ್ಥರಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಅಸಹಾಯಕರು ಹಾಗೂ ದೌರ್ಜನ್ಯಕ್ಕೆ ಒಳಗಾದವರಿಗೆ ಸರ್ಕಾರ ರಕ್ಷಣೆ ಕೊಡಲಿದೆ. ವಿರೋಧ ಪಕ್ಷಗಳಿಗೆ ಟೀಕೆ ಮಾಡೋದೆ ಕೆಲಸ ಎಂದು ಹರಿಹಾಯ್ದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎನ್ನೋ ವಿಚಾರವಾಗಿ ಮಾತನಾಡಿ, ಈ ಹಿಂದೆ ಕೂಡ ಇಂತಹ ಘಟನೆ ನಡೆದಿದ್ದವು. ಆದರೆ ಅದು ದೊಡ್ಡದಾಗುತ್ತಿರಲಿಲ್ಲ. ಹಿಂದೆ ಕೂಡ ಇಂಥದ್ದೆಲ್ಲಾ ನಡೆದಿವೆ. ಆದರೆ ಮಾಧ್ಯಮ ಈಗ ಫುಲ್ ಅಕ್ಟೀವ್ ಆಗಿದೆ. ಹಾಗಾಗಿ ಸಣ್ಣ ಸಣ್ಣ ವಿಚಾರ ಕೂಡ ಪ್ರಚಾರ ಆಗುತ್ತಿದೆ ಎಂದರು. ರಾಜ್ಯದಲ್ಲಿ ಒಳ ಮೀಸಲಾತಿ ಜಾರಿ ವಿಚಾರವಾಗಿ ಪ್ರತಿಕ್ರಿಯಿಸಿ, ಮೊದಲು ಆಂಧ್ರದಲ್ಲಿ ಒಳ ಮೀಸಲಾತಿ ಜಾರಿ ಮಾಡಿದಾಗ ಸುಪ್ರಿಂ ಕೋರ್ಟ್ ರದ್ದು ಮಾಡಿತ್ತು. ಈಗ ಸುಪ್ರಿಂ ಕೋರ್ಟ್ ಜಾರಿ ಮಾಡುವಂತೆ ಹೇಳಿದೆ. ಆದರೆ ಏಕಾಏಕಿ ಮಾಡಲು ಆಗಲ್ಲ.
420 ರಾಜಕಾರಣ ಬಿಟ್ಟು ದೇಶದ್ರೋಹಿಗಳನ್ನು ಮಟ್ಟ ಹಾಕಿ: ಬಿ.ವೈ.ವಿಜಯೇಂದ್ರ
ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಕೊಡಬೇಕು ಎಂದು ಬಂದರೆ ತೀರ್ಮಾನ ಮಾಡಬೇಕಾಗುತ್ತದೆ. ಸದಾಶಿವ ಆಯೋಗದ ವರದಿಯಲ್ಲಿ ಸಮುದಾಯದ ಸಂಖ್ಯೆ ಆಧರಿಸಿ ಮೀಸಲಾತಿ ಕೊಡಬೇಕು ಎಂದಿದೆ. ಇದು ಸೂಕ್ಷ್ಮ ವಿಚಾರ. ನಾವು ಒಳ ಮೀಸಲಾತಿಗೆ ಬದ್ಧವಾಗಿದ್ದೇವೆ. ಯಾರಿಗೂ ಅನ್ಯಾಯ ಆಗದ ಹಾಗೇ ತೀರ್ಮಾನ ಮಾಡ್ತೇವೆ ಎಂದರು. ಮುಡಾ ವಿಚಾರಣೆ ಇವತ್ತೆ ಮುಗಿಯುತ್ತದೆ ಎಂದು ಹೇಳಲು ಆಗುವುದಿಲ್ಲ. ಮುಡಾ ಕೇಸಲ್ಲಿ ಎಲ್ಲಿಯಾದರು, ಸಿದ್ದರಾಮಯ್ಯ ಅವರ ಪಾತ್ರ ಇದೆಯಾ! ಪಾರ್ವತಿ ನನ್ನ ಪತ್ನಿ ಅವರಿಗೆ ಸೈಟ್ ಕೊಡಿ ಎಂದು ಬರೆದಿದ್ದರಾ. ದೇವೇಗೌಡರು ೧೯೮೨ರಲ್ಲಿ ತಮ್ಮ ಪತ್ನಿಗೆ ಸೈಟ್ ಕೊಡಿ ಎಂದು ಪತ್ರ ಬರೆದಿದ್ದಾರೆ. ಅವರಿಗೆ ನಾಲ್ಕು ಎಕರೆ ಭೂಮಿ ಕೊಟ್ಟಿದ್ದಾರೆ. ಈ ರೀತಿ ಏನಾದರು ಸಿದ್ದರಾಮಯ್ಯ ಮಾಡಿದ್ದಾರಾ ಎಂದು ಪ್ರಶ್ನೆ ಮಾಡಿದರು.