2024ರ ಲೋಕಸಭಾ ಚುನಾವಣೆ ಮುಗಿದ ನಂತರ ಕಾಂಗ್ರೆಸ್ ಪಕ್ಷ ದೀಪಕ್ಕೆ ದಿಕ್ಕಿಲ್ಲದ ಮನೆಯಂತಾಗುತ್ತದೆ. ಕಾಂಗ್ರೆಸ್ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಸಚಿವ ಗೋವಿಂದ ಕಾರಜೋಳ ವ್ಯಂಗ್ಯವಾಡಿದರು.
ಬಾಗಲಕೋಟೆ (ಸೆ.25): 2024ರ ಲೋಕಸಭಾ ಚುನಾವಣೆ ಮುಗಿದ ನಂತರ ಕಾಂಗ್ರೆಸ್ ಪಕ್ಷ ದೀಪಕ್ಕೆ ದಿಕ್ಕಿಲ್ಲದ ಮನೆಯಂತಾಗುತ್ತದೆ. ಕಾಂಗ್ರೆಸ್ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಸಚಿವ ಗೋವಿಂದ ಕಾರಜೋಳ ವ್ಯಂಗ್ಯವಾಡಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಮುಳಗುವ ಹಡಗು. ಅಂತಹ ಹಡಗಿನಲ್ಲಿ ಜನ ಕೂರುವುದಿಲ್ಲ. ಗಾಂಧಿ ಕುಟುಂಬ 2024ರ ನಂತರ ನಿವೃತ್ತ ನೌಕರರಂತೆ ಮನೆಯೊಳಗೆ ಕೂರುತ್ತಾರೆ ಎಂದರು.
ಮೋದಿ ಇಲ್ಲದೆ ವಿಶ್ವದ ಸಮಸ್ಯೆ ಬಗೆಯರಿಯಲ್ಲ: ದೇಶದಲ್ಲಿ ಮೋದಿ ಆಡಳಿತ ಮಾಡುವುದನ್ನು ನೋಡಿ ಈಗ ದೇಶ ಅಷ್ಟೇ ಅಲ್ಲ, ಇಡೀ ವಿಶ್ವಕ್ಕೆ ಬೇಕಾಗಿರುವಂತಹ ವ್ಯಕ್ತಿಯಾಗಿದ್ದಾರೆ. ಮೋದಿ ಇಲ್ಲ ಅಂದರೆ, ರಾಜ್ಯ, ದೇಶದಲ್ಲಿ ಅಷ್ಟೇ ಅಲ್ಲ, ವಿಶ್ವದಲ್ಲಿಯೂ ಯಾವುದೇ ಸಮಸ್ಯೆ ಬಗೆಹರಿಯಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ಸಿಗರು ಆಲಿಬಾಬಾ ಚಾಲೀಸ್ ಪರ್ ಚಾರ್ ಚೋರ್‌ಗಳಿದ್ದಂತೆ: ಸಚಿವ ಶ್ರೀರಾಮುಲು ವ್ಯಂಗ್ಯ
ಕೆಂಪಣ್ಣನ ಅರೋಪ ಸುಳ್ಳು: ಗುತ್ತಿಗೆದಾರರ ಅಧ್ಯಕ್ಷ ಕೆಂಪಣ್ಣನನ್ನು ಮಾಡುತ್ತಿರುವ ಶೇ.40 ಕಮೀಷನ್ ಆರೋಪ ಸುಳ್ಳು ಹೇಳಿಕೆಯಾಗಿದೆ. ಕೆಂಪಣ್ಣನನ್ನು ಕಾಂಗ್ರೆಸ್ ನಾಯಕರು ಟೂಲ್ ಆಗಿ ಉಪಯೋಗ ಮಾಡಿಕೊಳ್ಳುತ್ತಿದ್ದಾರೆ. ಅವರ ಆರೋಪಗಳು ರಾಜಕೀಯ ಪ್ರೇರಿತ ಆರೋಪಗಳಾಗಿವೆ. ಯಾವುದೂ ನಿಜವಾದ ಆರೋಪಗಳಲ್ಲ. 20 ವರ್ಷದಿಂದ ಆತ ಯಾವುದಾದ್ರೂ ಕೆಲಸ ತಗೊಂಡಿದ್ದರೆ ತೋರಿಸಿ. ಇಂತಹ ಕೆಲಸ ಮಾಡಿದೆ, ಇಂತಹ ವ್ಯಕ್ತಿಗೆ ಇಷ್ಟುಕಮೀಷನ್ ಕೊಟ್ಟೆಅಂತ ಹೇಳಲಿ. ಕೆಂಪಣ್ಣನಿಗೆ ತನಿಖಾ ಸಂಸ್ಥೆಯವರು ನೋಟಿಸ್ ಕೊಟಿದ್ದರೂ ಬಂದು ಯಾವುದೇ ಹೇಳಿಕೆ ಕೊಡಲಿಲ್ಲ. ದೆಹಲಿಯಿಂದಲೂ ತನಿಖೆಗೆ ಕರೆದರೂ ಬರಲಿಲ್ಲ ಎಂದರು.
ಕಾಂಗ್ರೆಸ್ ಸುಳ್ಳು ಆರೋಪವನ್ನು ಸತ್ಯ ಮಾಡಲು ಹೊರಟಿದೆ. ಸಿಎಂ ವಿರುದ್ಧ ಪೇ ಸಿಎಂ ಅಂತ ಆರೋಪ ಮಾಡಿದರೆ ಗೌರವ ಬರುತ್ತಾ? ಕಾಂಗ್ರೆಸ್‌ನವರು ಬಿಜೆಪಿ ವಿರುದ್ಧ ಮಾಡುತ್ತಿರುವ ಆರೋಪಕ್ಕೆ ಕವಡೆಕಾಸಿನ ಕಿಮ್ಮತ್ತಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಜನ ಇನ್ನೂ ಬುದ್ದಿ ಕಲಿಸುತ್ತಾರೆ. ಕಾಂಗ್ರೆಸ್ ಇನ್ನೂ ಹೀನಾಯ ಸ್ಥಿತಿ ತಲುಪುತ್ತೆ. ಸಿಎಂ ವಿರುದ್ಧ ಕಾಂಗ್ರೆಸ್ ಅಷ್ಟೇ ಅಲ್ಲ ಬಿಜೆಪಿ ಸೇರಿದಂತೆ ಯಾವ ಪಕ್ಷದವರಾದರೂ ಈ ಮಟ್ಟಕ್ಕೆ ಇಳಿಯಬಾರದು. ಇದರಿಂದ ನೈತಿಕತೆಯ ಅಧಃಪತನ ಆಗುತ್ತೆ. ಆಡಳಿತ ಮಾಡುವವರ ವಿರುದ್ಧ ಸುಳ್ಳು ಆರೋಪ ಮಾಡುವುದು ಸಲ್ಲ. ಏನಾದರೂ ಆರೋಪ ಮಾಡುವುದಾದರೆ ದಾಖಲೆ ಸಮೇತ ಮಾಡಬೇಕು ಎಂದು ತಿಳಿಸಿದರು.
ಬೇರೆಲ್ಲೂ ಚುನಾವಣೆ ಎದುರಿಸಲ್ಲ: ಗೋವಿಂದ ಕಾರಜೋಳ ಅವರು ಮತಕ್ಷೇತ್ರ ಬದಲಾವಣೆ ಮಾಡುತ್ತಾರೆ ಎಂದು ಉಹಾಪೋಹ ಹುಟ್ಟಿಸುತ್ತಿದ್ದಾರೆ. ನಾನು ಮುಧೋಳ ಕ್ಷೇತ್ರ ಬಿಟ್ಟು ಎಲ್ಲಿಯೂ ಚುನಾವಣೆ ಎದುರಿಸಲ್ಲ. ನನ್ನ ಕೊನೆ ಉಸಿರಿರೋವರೆಗೂ ಮುಧೋಳ ನಂಟು ಇರುತ್ತದೆ. ನಾನು ಮುಧೋಳ ಬಿಟ್ಟು ಹೋಗಲ್ಲ. ನನ್ನ ರಾಜಕೀಯ ತೀರ್ಮಾನವನ್ನು ನಮ್ಮ ಪಕ್ಷ ತೀರ್ಮಾನ ಮಾಡುತ್ತದೆ. ಪಕ್ಷ ನನ್ನನ್ನ ಎಲ್ಲಿ ಕೆಲಸಕ್ಕೆ ಹಚ್ಚಬೇಕು ಅನ್ನೋ ತೀರ್ಮಾನ ಮಾಡುತ್ತದೆ ಎಂದರು.
ಎಲ್ಲ ಜಾತಿ ಜನಾಂಗಕ್ಕೂ ಸಮಾನ ಆದ್ಯತೆ: ಸಮುದಾಯ ಭವನವನ್ನು ಪಟ್ಟಣದ ಧಾರ್ಮಿಕ, ಸಾಮಾಜಿಕ ಕಾರ್ಯಗಳಿಗೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ ಹೇಳಿದರು. ಪಟ್ಟಣದ ಹಡಪದ ಅಪ್ಪಣ್ಣ ಸಮುದಾಯ ಭವನ, ವೆಂಕಟೇಶ್ವರ ಸಾಂಸ್ಕೃತಿಕ ಸಮುದಾಯ ಭವನ, ಶಿವಶರಣ ನೂಲಿ ಚಂದಯ್ಯ ಕೊರಮ್ಮ ಭಜಂತ್ರಿ ಸಮುದಾಯ ಭವನ ಹಾಗೂ .809 ಲಕ್ಷಗಳಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಸಮುದಾಯ ಭವನ ಅನಗತ್ಯ ಚಟುವಟಿಕೆಗಳಿಗೆ ಬಳಕೆಯಾಗಬಾರದು.
ಬಾಗಲಕೋಟೆ ಜಿಲ್ಲೆಯಲ್ಲಿ ಮಳೆ ಪ್ರವಾಹದಿಂದ ಉಂಟಾದ ಹಾನಿ ವೀಕ್ಷಿಸಿದ ಸಚಿವ ಸಿ.ಸಿ.ಪಾಟೀಲ್
ಹಾಗಾದರೆ ಮಾತ್ರ ಅರ್ಥ ಬರುತ್ತದೆ. ಗ್ರಾಮಸ್ಥರು ಗುತ್ತಿಗೆದಾರರು ಸಹಕಾರ ನೀಡಿ, ಗುಣಮಟ್ಟದ ಕಟ್ಟಡ ನಿರ್ಮಾಣಕ್ಕೆ ಸಹಕರಿಸಬೇಕು ಕಾಮಗಾರಿಯನ್ನು ತ್ವರಿತವಾಗಿ ಮುಗಿಸಬೇಕು ಎಂದರು. ಶಾಲೆಗಳ ಅಭಿವೃದ್ಧಿ ಬಡ ಜನರ ಆರೋಗ್ಯಕ್ಕೆ ವಿಶೇಷ ಒತ್ತು ನೀಡಿದ್ದು, ಗುಡಿ, ಮಸೀದಿ, ವಿವಿಧ ಜನಾಂಗದ ಸಮುದಾಯ ಭವನಕ್ಕೆ ಕೋಟ್ಯಂತರ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿ ಎಲ್ಲ ಜಾತಿ ಜನಾಂಗಕ್ಕೂ ಸಮಾನ ಆದ್ಯತೆ ನೀಡಲಾಗಿದೆ ಎಂದರು.