ನನ್ನ ಬಗ್ಗೆ ಮಾತನಾಡೋವಾಗ ನಾಲಿಗೆ ಮೇಲೆ ಹಿಡಿತ ಇರಲಿ: ಪಾಟೀಲ್‌ ವಿರುದ್ಧ ಕಾರಜೋಳ ಗರಂ

By Suvarna News  |  First Published Jan 10, 2022, 12:58 PM IST

*  ನಾನು ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ವಿಧಾನಸೌಧ ಮೆಟ್ಟಿಲೇರಿದ್ದೇನೆ
*  ಕಾಂಗ್ರೆಸ್‌ ನಾಯಕರನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಕಾರಜೋಳ 
*  ಕಾಂಗ್ರೆಸ್‌ ನಾಯಕರಿಂದ ಮೇಕೆದಾಟು ಗಿಮಿಕ್
 


ಬಾಗಲಕೋಟೆ(ಜ.10):  ನನ್ನ ಬಗ್ಗೆ ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ಮಾತನಾಡಿ. ನೀವು ನನ್ನ ಬಗ್ಗೆ ಮಾತನಾಡೋವಾಗ ನಾಲಿಗೆ ಮೇಲೆ ಹಿಡಿತ ಇರಲಿ. ಎಂ.ಬಿ.ಪಾಟೀಲ್‌ಗೆ(MB Patil) ಕಾರಜೋಳ ಜಲಸಂಪನ್ಮೂಲ ಸಚಿವರಾಗಿದ್ದೇ ಹೊಟ್ಟೆ ಉರಿಯಾಗಿದೆ. ನಾನು ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ವಿಧಾನಸೌಧ ಮೆಟ್ಟಿಲೇರಿದವನಾಗಿದ್ದೇನೆ. ನಿಮಗೆ ನಾವು ಹೋಲಿಕೆ ಮಾಡಿಕೊಂಡಿಲ್ಲ. ನಾನು ಸಾಮಾನ್ಯರಲ್ಲಿ ಸಾಮಾನ್ಯರಾದ ಜನರಾಗಿದ್ದೇವೆ. ನೀವು ಅಪಾರ ಪಾಂಡಿತ್ಯ ಜ್ಞಾನ ಇರತಕ್ಕಂತವರು. ನೀವು ವಿಶ್ವ ಮಾನವರು, ವಿಶ್ವರೂಪಿ ನೀವು, ಬ್ರಹ್ಮಾಂಡ ಜ್ಞಾನ ಸಂಪಾದನೆ ಮಾಡಿದಂತವರು ನೀವು ನಿಮಗೆ ಹೋಲಿಕೆ ನಾನು ಮಾಡೋದಿಲ್ಲ ಎಂದು ಪಾಟೀಲಗೆ ಸಚಿವ ಗೋವಿಂದ ಕಾರಜೋಳ(Govind Karjol) ವ್ಯಂಗ್ಯವಾಡಿದ್ದಾರೆ. 

ಇಂದು(ಭಾನುವಾರ) ನವನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ನಡೆದ ಬೂಸ್ಟರ್‌ ಡೋಸ್‌(Booster Dose) ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.  ಕಾರಜೋಳ ಜಲಸಂಪನ್ಮೂಲ ಸಚಿವರಾಗಲು ಅಯೋಗ್ಯ ಎಂದ ಮಾಜಿ ಸಚಿವ ಎಂ.ಬಿ.ಪಾಟೀಲಗೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕಾರಜೋಳ, ಅಖಂಡ ವಿಜಯಪುರ(Vijayapura) ಜಿಲ್ಲೆಯಲ್ಲಿ ಸ್ವಾತಂತ್ರ್ಯದ ನಂತರ ಇವರೊಬ್ಬರೇ ಜಲಸಂಪನ್ಮೂಲ ಸಚಿವರಾಗಿದ್ದರು. ಈಗ ಕಾರಜೋಳನಂತಹ ಸಾಮಾನ್ಯ ಮನುಷ್ಯ ಆಗಿದ್ದು ಹೊಟ್ಟೆ ಇರಿ ತಂದಿದೆ ಅನಿಸುತ್ತೇ ಅವರಿಗೆ ಅಂತ ಹೇಳಿದ್ದಾರೆ. 

Tap to resize

Latest Videos

Mekedatu Politics: ಸಿದ್ದು ಸರ್ಕಾರ ಮೇಕೆದಾಟು ಮರೆತಿತ್ತು: ಕಾರಜೋಳ

ಪ್ರಾಮಾಣಿಕ ಪಾದಯಾತ್ರೆ ಅಲ್ಲ

ಕಾಂಗ್ರೆಸ್‌ ಪಾದಯಾತ್ರೆ(Congress Padayatra) ವೇಳೆ ಮಾಜಿ ಸಿಎಂ ಸಿದ್ದರಾಮಯ್ಯಗೆ(Siddaramaiah) ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಳವಳ ವ್ಯಕ್ತಪಡಿಸಿದ ಸಚಿವ ಗೋವಿಂದ ಕಾರಜೋಳ ಅವರು,  ರಾಜ್ಯದಲ್ಲಿ ದಿನೇ ದಿನೇ ಕೋವಿಡ್(Covid19) ಹೆಚ್ಚುತ್ತಿದೆ. ನಿನ್ನೆ ಒಂದೇ ದಿನ ಹನ್ನೆರಡು ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್‌ನವರು(Congress) ರಾಜಕೀಯ(Politics) ಹೋರಾಟಕ್ಕಾಗಿ, ತಮ್ಮೊಳಗಿನ ನಾಯಕತ್ವದ ಪೈಪೋಟಿಗಾಗಿ ಪಾದಯಾತ್ರೆ ಮಾಡುತ್ತಿದ್ದಾರೆ.  ಇದು ರಾಜ್ಯದ ಜನರ ಹಿತದೃಷ್ಟಿಯಿಂದ ಮಾಡುವ ಪ್ರಾಮಾಣಿಕ ಪಾದಯಾತ್ರೆ ಅಲ್ಲ.  ನಾನು ಇವತ್ತು ಕೂಡ ಕಾಂಗ್ರೆಸ್‌ ನಾಯಕರಿಗೆ ವಿನಂತಿ ಮಾಡುತ್ತೇನೆ. ಸಾಮಾಜಿಕ (Social Distance) ಕಾಯ್ದುಕೊಳ್ಳಬೇಕು, ಹೆಚ್ಚು ಜನ ಸೇರಬಾರದು ಎಲ್ಲರೂ ಮಾಸ್ಕ್(Mask) ಧರಿಸಬೇಕು. ಪ್ರಜಾಪ್ರಭುತ್ವದಲ್ಲಿ(Democracy) ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಆ ಹಕ್ಕನ್ನು ಮೊಟಕುಗೊಳಿಸಬಾರದು ಎಂದು ನಮ್ಮ ಸರ್ಕಾರ ಅವರಿಗೆ ಯಾವುದೇ ತೊಂದರೆ ಕೊಟ್ಟಿಲ್ಲ ಅಂತ ತಿಳಿಸಿದ್ದಾರೆ. 

ಸಿದ್ದು ಆರೋಗ್ಯದ ಕಡೆ ಗಮನ ಕೊಡಲು ಕಾರಜೋಳ ಸಲಹೆ

ನಿನ್ನೆ ನನಗೆ ಬಹಳ ಆತಂಕವಾಗಿತ್ತು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ, ಹಿಂದುಳಿದ ವರ್ಗದ ನಾಯಕರಾಗಿರುವ ಸಿದ್ದರಾಮಯ್ಯನವರಿಗೆ ತೀವ್ರ ಜ್ವರ ಕಾಣಿಸಿಕೊಂಡು ವಾಪಸ್ಸಾದರು. ನಾನು ಸಿದ್ದರಾಮಯ್ಯನವರಿಗೆ ಮನವಿ ಮಾಡುತ್ತೇನೆ. ಅವರು ಆರೋಗ್ಯದ ಕಡೆ ಗಮನ ಕೊಡಬೇಕು ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದು ಸಿದ್ದರಾಮಯ್ಯನವರಿಗೆ ಕಾರಜೋಳ ಮನವಿ ಮಾಡಿಕೊಂಡಿದ್ದಾರೆ. 

Karnataka Politics: 'ಎಂ.ಬಿ. ಪಾಟೀಲ್‌ ರಾಜಕಾರಣಿಯಾಗಿರಲು ನಾಲಾಯಕ್‌'

ಮೇಕೆದಾಟು(Mekedatu) ಮಾದರಿಯಲ್ಲೇ 2013ರಲ್ಲಿಯೂ ಪಾದಯಾತ್ರೆ ಮಾಡಿದ್ರಿ, ಕೂಡಲಸಂಗಮನಾಥನ(Kudalasangama) ಸಾಕ್ಷಿಯಾಗಿ ಕಾಯಿಕಟ್ಟಿ ಪ್ರತಿವರ್ಷ 10 ಸಾವಿರ ಕೋಟಿ ಕೊಡ್ತಿವಿ ಅಂದಿದ್ರಿ, ಪಾದಯಾತ್ರೆ ಮಾಡಿ ಬಂದು 5 ವರ್ಷ ಅಧಿಕಾರ ಇದ್ರೂ ಏನು ಮಾಡಲಿಲ್ಲ. ಅನುದಾನ ಕೊಡಲಿಲ್ಲ. ಹೀಗಾಗಿ 2018ರಲ್ಲಿ ಜನ ನಿಮಗೆ ಬುದ್ದಿ ಸಹ ಕಲಿಸಿದ್ದಾರೆ. ಅಂದಿನ ನಿಮ್ಮ ಸರ್ಕಾರಕ್ಕೆ ನಾಚಿಕೆ ಆಗಬೇಕು. ವೀರಾವೇಶದಿಂದ ಮಾತನಾಡೋ ಎಂ.ಬಿ.ಪಾಟೀಲರೇ ಈಗ ಉತ್ತರ ಕೊಡಿ, ಈಗ ಮೇಕೆದಾಟು ಗಿಮಿಕ್ ಮಾಡ್ತಿದಿರಿ, ಈಗಲೂ ಸಹ ಮೇಕೆದಾಟು ಬಗ್ಗೆ ದಾಖಲೆ ಸಮೇತ ಉತ್ತರ ಕೊಟ್ಟಿದ್ದೇನೆ ಅಂತ ಎಂ.ಬಿ. ಪಾಟೀಲ್‌ ವಿರುದ್ಧ ಕಾರಜೋಳ ಹರಿಹಾಯ್ದಿದ್ದಾರೆ. 

ಕಾಂಗ್ರೆಸ್‌ ನಾಯಕರಿಂದ ಮೇಕೆದಾಟು ಗಿಮಿಕ್‌

ರಾಜ್ಯದಲ್ಲಿ(Karnataka) ಮತ್ತೆ ಅಧಿಕಾರಕ್ಕೆ ಬರಲು ಮೇಕೆದಾಟು ಗಿಮಿಕ್ ಮಾಡುತ್ತಿದ್ದೀರಿ. ಮೇಕೆದಾಟು ಬಗ್ಗೆ ಬೆಂಗಳೂರಿನಲ್ಲಿ ದಾಖಲೆ ಬಿಡುಗಡೆ ಮಾದಿದ್ದೇನೆ. ಇವತ್ತೂ ಕೂಡ ಒಂದು ವಿಷಯ ಹೇಳ್ತೀನಿ, ಪೂರ್ಣ ಹೇಳೋದಿಲ್ಲ ಅವರು ಏನೇನು ಮಾಡ್ತಾರೋ ಮಾಡಲಿ. 2014ರಲ್ಲೇ ಮೇಕೆದಾಟು ಯೋಜನೆಗೆ ಅನುಮೋದನೆ ನೀಡಲಾಗಿದೆ. ಕಾನೂನು ಸಲಹೆ ಪಡೆದು ಮುಖ್ಯಮಂತ್ರಿಗಳು ಅನುಮೋದನೆ ಮಾಡಿದ್ದಾರೆ. ದಾಖಲೆ ಓದಿ ಹೇಳುತ್ತೇನೆ. 12/11/2014ರಂದು ಅನುಮೋದನೆ ನೀಡಿದರು ಯೋಜನೆ ಯಾಕೆ ಪ್ರಾರಂಭ ಮಾಡಲಿಲ್ಲ. ಬರೀ ಡಿಪಿಆರ್(DPR) ಮಾಡಲಿಕ್ಕೆ ನಾಲ್ಕು ವರ್ಷ ತಗೊಂಡಿದ್ದೀರಿ. ಇವತ್ತು ನೋಡಿದ್ದೇನೆ ಜಾಹೀರಾತು ಕೊಟ್ಟಿದ್ದಾರೆ. ಅವರಿಗೆ ಅದೇ ರೀತಿ ಉತ್ತರ ಕೊಡ್ತೇನೆ. ಈಗ ಟೂರ್‌ನಲ್ಲಿ ಇದ್ದೇನೆ ಮುಗಿದ ಬಳಿಕ ಉತ್ತರ ಕೊಡ್ತೇನೆ. ಆಡಳಿತ ಮಾಡುವವರಿಗೆ ಕನಿಷ್ಠ ಜ್ಞಾನ ಇರಬೇಕಾಗುತ್ತೆ. ಪಿಎಫ್‌ಆರ್(FR) ಕಳಿಸಬೇಕೋ? ಡಿಪಿಆರ್ ಮೊದಲು ಕಳಿಸಬೇಕೋ? ಅನ್ನೋದು ಜ್ಞಾನ ಇರಬೇಕು. ಇವರು ಡಿಪಿಆರ್ ಕಳಿಸಿಕೊಡ್ತಾರೆ. ಕೇಂದ್ರದವರು ಡಿಪಿಆರ್ ಅನ್ನ ವಾಪಸ್ ಕಳಿಸುತ್ತಾರೆ. ನೀವು ಕಳಿಸಬೇಕಿರುವುದು ಡಿಪಿಆರ್ ಅಲ್ಲ. ಪಿಎಫ್‌ಆರ್ ಎಂದು ಕೇಂದ್ರ ಸರ್ಕಾರ(Central Government) ಹೇಳುತ್ತೆ. ಪೂರ್ವ ಸಿದ್ಧತಾ ವರದಿ ಸಲ್ಲಿಸಬೇಕು. ಯಾವುದೇ ಪ್ರಾಜೆಕ್ಟ್ ತೆಗೆದುಕೊಳ್ಳಬೇಕಾದರೆ ಇದು ಯೋಗ್ಯ ಇದೆ ಅಂತ ಪರಿಶೀಲನೆ ಆಗಬೇಕಾಗುತ್ತದೆ. ಅದಕ್ಕೆ ಒಂದು ವರದಿ ಕೊಡಬೇಕು. ಆದ್ರೆ, ಇವರು ಅದನ್ನೇ ಕೊಡದೇ ಡ್ರಾಮಾ ಮಾಡಿ, ಡಿಪಿಆರ್ ಕಳಿಸಿದರೆ, ನಿಮಗೆ ಆಡಳಿತ ಮಾಡುವವರಿಗೆ ಏನು ಎನ್ನಬೇಕು ನಾವು? ಅಂತ ಸಚಿವ ಗೋವಿಂದ ಕಾರಜೋಳ ಕಾಂಗ್ರೆಸ್‌ ನಾಯಕರನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. 
 

click me!