ಅಕ್ಕಿ ವಿಚಾರದಲ್ಲಿ ಸಿ.ಟಿ.ರವಿ ಯಾಕೆ ಮೈ ಪರಿಚಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ: ಸಚಿವ ಎಂ.ಸಿ.ಸುಧಾಕರ್‌

By Kannadaprabha News  |  First Published Jun 28, 2023, 10:03 PM IST

ಗ್ಯಾರಂಟಿಗಳಲ್ಲಿ ಒಂದಾದ ಅಕ್ಕಿ ಭಾಗ್ಯವನ್ನು ನೀಡುವುದಿಲ್ಲವೆಂದು ಯಾರೂ ಹೇಳಿಲ್ಲ. ಆದರೆ ಕೇಂದ್ರ ಸರ್ಕಾರ ಅಕ್ಕಿ ನೀಡದೆ ಎಷ್ಟುತೊಂದೆರೆ ನೀಡುತ್ತಿದೆ ಎಂಬುದು ಎಲ್ಲರಿಗೂ ಗೊತ್ತದೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಯಾಕೆ ಮೈ ಪರಿಚಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ.


ಚಿಕ್ಕಬಳ್ಳಾಪುರ (ಜೂ.28): ಗ್ಯಾರಂಟಿಗಳಲ್ಲಿ ಒಂದಾದ ಅಕ್ಕಿ ಭಾಗ್ಯವನ್ನು ನೀಡುವುದಿಲ್ಲವೆಂದು ಯಾರೂ ಹೇಳಿಲ್ಲ. ಆದರೆ ಕೇಂದ್ರ ಸರ್ಕಾರ ಅಕ್ಕಿ ನೀಡದೆ ಎಷ್ಟುತೊಂದೆರೆ ನೀಡುತ್ತಿದೆ ಎಂಬುದು ಎಲ್ಲರಿಗೂ ಗೊತ್ತದೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಯಾಕೆ ಮೈ ಪರಿಚಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ. ಅವರು ಈಗ ಬಿಡುವಾಗಿರುವ ಕಾರಣ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವ ಉದ್ದೇಶದಿಂದ ಏನೇನೇ ಮಾತುನಾಡುತ್ತಾರೆ ಎಂದು ಸಿ.ಟಿ.ರವಿ ಅಕ್ಕಿ ಭಾಗ್ಯ ಯೋಜನೆ ಜಾರಿಗೆ ಡೆಡ್‌ಲೈನ್‌ ನೀಡುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್‌ ತಿರುಗೇಟು ನೀಡಿದರು. ಬೆಳೆ ವಿಮೆ ಕುರಿತು ಜಾಗೃತಿ ಮೂಡಿಸುವ ಪ್ರಚಾರ ವಾಹನಕ್ಕೆ ಮಂಗಳವಾರ ಚಾಲನೆ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಸಚಿವರು, ತಾಳ್ಮೆ ಇದ್ರೆ ಎಲ್ಲರಿಗೂ ಒಳ್ಳೆಯದಾಗುತ್ತದೆ. ಜನ ಯಾರು ಆತುರದಲ್ಲಿ ಇಲ್ಲ. ಬಿಜೆಪಿಯವರು ಹೋರಾಟ ಮಾಡಲಿ. ಜನ ಮಾತ್ರ ಕಾಂಗ್ರೆಸ್‌ ಜೊತೆಗಿದ್ದಾರೆ ಎಂದು ಹೇಳಿದರು.

ಬಿಜೆಪಿ ಭರವಸೆ ಈಡೇರಿಸಿತೆ?: 2014 ರಲ್ಲಿ ಗ್ಯಾಸ್‌ ಪೆಟ್ರೋಲ್‌ ಡೀಸಲ್‌ ಬೆಲೆ ಕಡಿಮೆ ಮಾಡ್ತೀವಿ ಅಂತ ಹೆಳಿದ್ದು ಯಾರು, ಖಾದ್ಯ ತೈಲದ ಬೆಲೆ ಎಷ್ಟಾಯಿತು, ಇವತ್ತಿಗೇನಾದ್ರು ಕಮ್ಮಿ ಆಯಿತಾ. ಆ ಸಮಯದಲ್ಲಿ ಯಾರೂ ಮಾತಾಡಲಿಲ್ಲ. ಈಗ ಬೆಲೆ ಹೆಚ್ಚಾಗಿರುವುದಕ್ಕೆ ಸುಂಕ ಏನಾದ್ರು ಜಾಸ್ತಿ ಮಾಡಿದ್ದಾರಾ. ಇದು ನಿರಂತರವಾಗಿ ಆಗುಗ ಏರುಪೇರು ಪ್ರಕ್ರಿಯೆ. ಬೆಲೆ ಏರಿಕೆಗೂ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ. ಬಿಜೆಪಿ ಅವಧಿಯಲ್ಲಿ ನಡೆದ ಭ್ರಷ್ಟಾಚಾರಕ್ಕೆ ಇಲಾಖೆವಾರು ತನಿಖೆ ಆಗುತ್ತದೆ. ಶೇ.40 ಕಮಿಷನ್‌, ಪಿಎಸ್‌ಐ ಹಗರಣದ ಬಗ್ಗೆ ತನಿಖೆ ಆಗೇ ಆಗುತ್ತದೆ ಎಂದರು. ಬಿಟ್‌ ಕಾಯಿನ್‌ ಹಗರಣದ ಕುರಿತು ಕೇಳಿದ ಪ್ರಶ್ನೆಗೆ, ಬಿಟ್‌ ಕಾಯಿನ್‌ ಕೇವಲ ರಾಜಕೀಯಕ್ಕೆ ಸೀಮಿತವಾಗಿಲ್ಲ. ಈ ಹಗರಣದಲ್ಲಿ ಅಂತರಾಷ್ಟ್ರೀಯ ಜಾಲ ಇದೆ. ಬಿಟ್‌ ಕಾಯಿನ್‌ ಹಗರಣದ ತನಿಖೆಗೆ ಕೇಂದ್ರ ಸರ್ಕಾರದ ಸಹಕಾರ ಬೇಕು ಎಂದು ಹೇಳಿದರು.

Tap to resize

Latest Videos

Ramanagara: ಮಾಗಡಿಯನ್ನು ಪ್ರವಾಸಿಗರ ತಾಣವಾಗಿ ಪರಿವರ್ತಿಸುವೆ: ಶಾಸಕ ಬಾಲಕೃಷ್ಣ

ಬೆಳೆ ವಿಮೆ ಮಾಡಿಸಲು ಮನವಿ: 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್‌ ಬೀಮಾ ಯೋಜನೆಯನ್ನು ರಾಜ್ಯದಲ್ಲಿ ಒಟ್ಟು 36 ಬೆಳೆಗಳಿಗೆ ಮಳೆಯಾಶ್ರಿತ ಮತ್ತು ನೀರಾವರಿ ಅನ್ವಯಿಸುವಂತೆ ವಿಮಾ ವ್ಯಾಪ್ತಿಗೆ ತರಲಾಗಿದೆ. ರೈತರು ಬೆಳೆದ ಬೆಳೆಗಳಿಗೆ ಪ್ರಕೃತಿಯ ವಿಕೋಪಗಳಾದ ಆಲಿಕಲ್ಲು ಮಳೆ, ಭೂ ಕುಸಿತ, ಬೆಳೆ ಮುಳುಗಡೆ, ಮೇಘಸೊ​ೕಟ, ಗುಡುಗು ಮಿಂಚುಗಳಿಂದ ಉಂಟಾಗುವ ಬೆಳೆ ನಷ್ಟಕ್ಕೆ ಪರಿಹಾರವನ್ನು ನೀಡಲು ಈ ಯೋಜನೆಯಡಿ ಅವಕಾಶ ನೀಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್‌ ತಿಳಿಸಿದರು. 2023 ನೇ ಸಾಲಿನ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯ ಸಂಬಂಧ ರೈತರಿಗೆ ಯೋಜನೆಯ ಬಗ್ಗೆ ಅರಿವು ಮೂಡಿಸಲು ಬೆಳೆ ವಿಮೆ ಕುರಿತು ಜಾಗೃತಿ ಮೂಡಿಸುವ ಪ್ರಚಾರ ವಾಹನಕ್ಕೆ ಮಂಗಳವಾರ ಜಿಲ್ಲಾಡಳಿತ ಭವನದ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದರು.

ನಾಡಪ್ರಭು ಕೆಂಪೇಗೌಡರು ಎಲ್ಲ ಜನಾಂಗದ ಅಭಿವೃದ್ಧಿ ಹರಿಕಾರರು: ಸಚಿವ ಮುನಿಯಪ್ಪ

ಕಷ್ಟ ಕಾಲದಲ್ಲಿ ಸಹಾಯ: ಈ ಕುರಿತು ಜಿಲ್ಲೆಯ ಸಮಸ್ತ ರೈತರು ಜಾಗೃತಿ ಹೊಂದಿ ಬೆಳೆ ವಿಮೆಯನ್ನು ಮಾಡಿಸುವುದು. ಆರೋಗ್ಯ ಮತ್ತು ಇತರೆ ವಿಮೆಗಳಂತೆ ಬೆಳೆ ವಿಮೆಯಲ್ಲಿಯೂ ಸಹ ಬೆಳೆ ನಷ್ಟಗಳನ್ನು ಅನುಭವಿಸತಕ್ಕಂತ ಸಂದರ್ಭದಲ್ಲಿ ರೈತರು ಮುಂಜಾಗ್ರತೆ ಕ್ರಮವಹಿಸುವುದು ಒಳಿತು. ಕಳೆದ ಸಾಲಿನಲ್ಲಿ ಈ ರೀತಿ ಸಂಕಷ್ಟಗೊಳಗಾದ ರೈತರಿಗೆ ಹದಿಮೂರು ಕೋಟಿ ರೂ ಬೆಳೆ ವಿಮೆಯ ಪರಿಹಾರ ನೀಡಲಾಗಿದೆ. ಈ ಸಂದರ್ಭದಲ್ಲಿ ಶಾಸಕ ಪ್ರದೀಪ್‌ ಈಶ್ವರ್‌, ಜಿಲ್ಲಾಧಿಕಾರಿ ಪಿ.ಎನ್‌.ರವೀಂದ್ರ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್‌ ಜಿ.ಟಿ.ನಿಟ್ಟಾಲಿ, ಅಪರ ಜಿಲ್ಲಾಧಿಕಾರಿ ಡಾ.ಎನ್‌.ತಿಪ್ಪೇಸ್ವಾಮಿ, ಕೃಷಿ ಜಂಟಿ ನಿರ್ದೇಶಕಿ ಜಾವಿದಾ ನಸೀಮ್‌ ಖಾನಂ, ತೋಟಗಾರಿಕೆ ಉಪನಿರ್ದೇಶಕಿ ಗಾಯತ್ರಿ ಸೇರಿದಂತೆ ವಿವಿಧ ಇಲಾಖೆಯ ಅದಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

click me!