ಮುಖ್ಯಮಂತ್ರಿ ಬದಲಾವಣೆ ವಿಚಾರ: ಸಚಿವ ಗುಂಡೂರಾವ್‌ ಹೇಳಿದ್ದಿಷ್ಟು

Published : Jul 27, 2023, 01:20 PM ISTUpdated : Jul 27, 2023, 01:24 PM IST
ಮುಖ್ಯಮಂತ್ರಿ ಬದಲಾವಣೆ ವಿಚಾರ: ಸಚಿವ ಗುಂಡೂರಾವ್‌ ಹೇಳಿದ್ದಿಷ್ಟು

ಸಾರಾಂಶ

ಅಸಮಾಧಾನ ಸೃಷ್ಟಿಮಾಡುತ್ತಿರುವುದು ಮಾಧ್ಯಮಗಳು, ಸರ್ಕಾರ ರಚನೆಗೆ ಮೊದಲು ಕಾಂಗ್ರೆಸ್‌ನಲ್ಲಿ ಒಗ್ಗಟ್ಟು ಇಲ್ಲವೆಂದು ಬಿಂಬಿಸಿದಿರಿ. ಅದಕ್ಕೆ ತೆರೆಬಿದ್ದಿದ್ದು, ಈಗ ಅಸಮಾಧಾನವಿದೆ ಎಂಬುದಾಗಿ ಸೃಷ್ಟಿಸುತ್ತಿದ್ದೀರಿ. ಸಮಾಧಾನ, ಅಸಮಾಧಾನ ಸಹಜ. ಅದನ್ನು ಸಮರ್ಥವಾಗಿ ನಿಭಾಯಿಸುವ ಮುಖಂಡರು ಇದ್ದಾರೆ: ಸಚಿವ ದಿನೇಶ್‌ ಗುಂಡೂರಾವ್‌ 

ಕೋಲಾರ(ಜು.27): ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಈಗ ಏಕೆ ಚರ್ಚೆ ನಡೆಯುತ್ತಿದೆ ಎಂಬುದೇ ನನಗೆ ಅರ್ಥವಾಗುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಎಲ್ಲವೂ ಸುಗಮವಾಗಿ ನಡೆಯುತ್ತಿದೆ. ಬದಲಾವಣೆ ಬಗ್ಗೆ ಮಾತನಾಡುವ ಅವಶ್ಯಕತೆಯೇ ಇಲ್ಲ. ಮುಖ್ಯಮಂತ್ರಿ ಬದಲಾವಣೆ ಅಪ್ರಸ್ತುತ ವಿಚಾರ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಸಮಾಧಾನ ಸೃಷ್ಟಿಮಾಡುತ್ತಿರುವುದು ಮಾಧ್ಯಮಗಳು, ಸರ್ಕಾರ ರಚನೆಗೆ ಮೊದಲು ಕಾಂಗ್ರೆಸ್‌ನಲ್ಲಿ ಒಗ್ಗಟ್ಟು ಇಲ್ಲವೆಂದು ಬಿಂಬಿಸಿದಿರಿ. ಅದಕ್ಕೆ ತೆರೆಬಿದ್ದಿದ್ದು, ಈಗ ಅಸಮಾಧಾನವಿದೆ ಎಂಬುದಾಗಿ ಸೃಷ್ಟಿಸುತ್ತಿದ್ದೀರಿ. ಸಮಾಧಾನ, ಅಸಮಾಧಾನ ಸಹಜ. ಅದನ್ನು ಸಮರ್ಥವಾಗಿ ನಿಭಾಯಿಸುವ ಮುಖಂಡರು ಇದ್ದಾರೆ ಎಂದರು.

ಕೋವಿಡ್‌ ಉಪಕರಣ ಖರೀದಿ ಕುರಿತು ತನಿಖೆ: ಸಚಿವ ದಿನೇಶ್‌ ಗುಂಡೂರಾವ್‌

ಹಲವಾರು ವಿಚಾರಗಳ ಬಗ್ಗೆ ಚರ್ಚಿಸಲು ಶಾಸಕಾಂಗ ಸಭೆ ಕರೆಯಲಾಗಿದೆ. ಹಿಂದೆ ಸಭೆ ಕರೆದಾಗ ಚರ್ಚೆ ಮಾಡಲು ಶಾಸಕರಿಗೆ ಸಮಯ ಸಿಕ್ಕಿರಲಿಲ್ಲ. ಹೀಗಾಗಿ, ಮತ್ತೊಮ್ಮೆ ಸಭೆ ನಡೆಸಲು ತೀರ್ಮಾನಿಸಲಾಗಿತ್ತು. ನಿನ್ನೆ ಮೊನ್ನೆಯ ಘಟನೆಗಳಿಂದಾಗಿ ಸಭೆ ಕರೆದಿದ್ದಲ್ಲ. ಅವೆಲ್ಲಾ ಆಧಾರರಹಿತ ಸುದ್ದಿಗಳು. ಶಾಸಕಾಂಗ ಸಭೆ ಸಂಬಂಧ ಏಕಿಷ್ಟುಚರ್ಚೆ ನಡೆಯುತ್ತಿದೆ ಎಂಬುದೇ ನನಗೆ ಅರ್ಥವಾಗುತ್ತಿಲ್ಲ, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟವರು ನಾವು. ಇಂತಹ ಸಭೆ ನಡೆದಾಗ ಮುಕ್ತ ಚರ್ಚೆ ನಡೆಸಬಹುದು, ಈ ಸಭೆ ಹೊಸದೇನಲ್ಲ ಎಂದರು.

ಕೆ.ಜೆ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಘಟನೆಗೆ ಸಂಬಂಧಿಸಿದಂತೆ ಅಮಾಯಕರಿಗೆ ತೊಂದರೆಯಾಗಿದ್ದರೆ ಪರಿಶೀಲಿಸಬೇಕಾಗುತ್ತದೆ, ಶಾಸಕರು ಪತ್ರ ಮುಖೇನ ಗೃಹ ಸಚಿವರಿಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಘಟನೆ ಸಂಬಂಧ ಕಾನೂನಿನಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಹೀಗಾಗಿ, ಗೃಹ ಇಲಾಖೆಯು ಪರಿಶೀಲನೆ ನಡೆಸಿ ಕಾನೂನು ಪ್ರಕಾರವೇ ಕ್ರಮ ವಹಿಸಲಿದೆ. ಕೆಲವರು ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸ ಮಾಡುತ್ತಾರೆ. ಆದರೆ, ಅವರಿಗೆ ಯಶಸ್ಸು ಸಿಗುವುದಿಲ್ಲ ಎಂದು ತಿಳಿಸಿದರು.

ಮೈಸೂರು ಪಾಕ್‌ ಸವಿದ ಸಚಿವರು

ಮೈಸೂರು ಪಾಕ್‌ಗೆ ಪ್ರಖ್ಯಾತಿಯಾಗಿರುವ ಕೋಲಾರದ ಎಂಜಿ ರಸ್ತೆಯ ವೆಂಕಟೇಶ್ವರ ಸ್ವೀಟ್‌ ಸ್ಟಾಲ್‌ಗೆ ಭೇಟಿ ನೀಡಿದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಮೈಸೂರ್‌ ಪಾಕ್‌ ಸಿಹಿ ಸವಿದರು. ಸಚಿವರೊಂದಿಗೆ ಜಿಲ್ಲಾಧ್ಯಕ್ಷ ಲಕ್ಷ್ಮಿನಾರಾಯಣ, ನಗರಸಭೆ ಸದಸ್ಯ ಪ್ರಸಾದ್‌ಬಾಬು, ಸ್ಟೀಟ್‌ ಸ್ಟಾಲ್‌ನ ಮಾಲೀಕ ಶ್ರೀಧರ್‌, ಮುಖಂಡರಾದ ಕೆ.ಆರ್‌.ತ್ಯಾಗರಾಜ್‌, ಮಂಜುನಾಥ್‌ ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿದೇಶದಲ್ಲಿ ಇರುವವರಿಗೂ ಗ್ಯಾರಂಟಿ ಲಾಭ ಬಗ್ಗೆ ಸಿಎಲ್ಪೀಲಿ ಪ್ರಸ್ತಾಪ: ಸಚಿವ ಮಧು ಬಂಗಾರಪ್ಪ
ಸಾರಿಗೆ ಇಲಾಖೆಗೆ ನಕಲಿ ವ್ಯಾಸಂಗ ಪತ್ರ ದಾಖಲೆ ನೀಡಿದರೆ ತನಿಖೆ: ಸಚಿವ ರಾಮಲಿಂಗಾರೆಡ್ಡಿ