ಡಿನೋಟಿಫೈನಲ್ಲಿ ರಿ ಡ್ಯೂವ್ ಹುಟ್ಟು ಹಾಕಿ 600 ಎಕರೆ ಡಿನೋಟಿಫೈ ಮಾಡಿದ್ದು ಸಿದ್ದರಾಮಯ್ಯನವರೇ, ಇದಕ್ಕೆ ಉತ್ತರ ಸಿಗಲೇ ಇಲ್ಲ, ಉತ್ತರ ಹೇಳುವವರು ಯಾರು ಎಂದು ಪ್ರಶ್ನಿಸಿದ ಸಚಿವ ಸಿ. ಟಿ. ರವಿ| ರಾಜ್ಯ ಸರ್ಕಾರಕ್ಕೆ ಸಿದ್ದಾರಮಯ್ಯ ಪ್ರಶ್ನೆಗಳನ್ನ ಕೇಳುತ್ತಿದ್ದಾರೆ. ಉತ್ತರ ನೀಡಬೇಕಾದವರು ಅವರೇ| ಕೋವಿಡ್ ವಿಚಾರದಲ್ಲಿ ಭ್ರಷ್ಟಾಚಾರದ ಆಲೋಚನೆಯೂ ತಪ್ಪು, ಆಧಾರ ಇದ್ದರೆ ಕಂಪ್ಲೆಂಟ್ ಮಾಡಲಿ|
ಚಿಕ್ಕಮಗಳೂರು(ಆ.01): ಭ್ರಷ್ಟಾಚಾರದ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡ್ತಾರೆ. ರಿ ಡ್ಯೂವ್ ಎಂಬ ಹೊಸ ಪರಿಭಾಷೆ ಜನಕ ಯಾರು ಸಿದ್ದರಾಮಯ್ಯನವರೇ ಎಂದು ಕನ್ನಡ ಸಂಸ್ಕೃತಿ ಸಚಿವ ಸಿ. ಟಿ. ರವಿ ಅವರು ಆರೋಪಿಸಿದ್ದಾರೆ.
ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿನೋಟಿಫೈನಲ್ಲಿ ರಿ ಡ್ಯೂವ್ ಹುಟ್ಟು ಹಾಕಿ 600 ಎಕರೆ ಡಿನೋಟಿಫೈ ಮಾಡಿದವರು ಸಿದ್ದರಾಮಯ್ಯನವರೇ, ಇದಕ್ಕೆ ಉತ್ತರ ಸಿಗಲೇ ಇಲ್ಲ, ಉತ್ತರ ಹೇಳುವವರು ಯಾರು ಎಂದು ಪ್ರಶ್ನಿಸಿದ್ದಾರೆ.
ನಾನೇನು ಹೆದರಿಕೊಳ್ತಿನಾ? ನೋಟಿಸ್ ಬಂಡವಾಳ ಏನು ನನಗೆ ಗೊತ್ತಿಲ್ವಾ..? ಗುಡುಗಿದ ಸಿದ್ದು
ಇವತ್ತು ರಾಜ್ಯ ಸರ್ಕಾರಕ್ಕೆ ಸಿದ್ದಾರಮಯ್ಯ ಪ್ರಶ್ನೆಗಳನ್ನ ಕೇಳುತ್ತಿದ್ದಾರೆ. ಉತ್ತರ ನೀಡಬೇಕಾದವರು ಅವರೇ. ಕೋವಿಡ್ ವಿಚಾರದಲ್ಲಿ ಭ್ರಷ್ಟಾಚಾರದ ಆಲೋಚನೆಯೂ ತಪ್ಪು. ಆಧಾರಗಳು ಇದ್ದರೆ ಕಂಪ್ಲೆಂಟ್ ಮಾಡಲಿ. ಅದು ಬಿಟ್ಟು ಸುಮ್ಮನೆ ಆರೋಪ ಮಾಡಬಾರದು ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.