ಪಕ್ಷದಲ್ಲಿ ಬಿಎಸ್‌ವೈ ಸೈಡ್‌ಲೈನ್‌ ಆದ್ರಾ?: ರಾಮುಲು ಹೇಳಿದ್ದಿಷ್ಟು

By Kannadaprabha NewsFirst Published May 26, 2022, 6:13 AM IST
Highlights

*  ಬಿ.ಎಸ್‌. ಯಡಿಯೂರಪ್ಪ ಸೈಡ್‌ಲೈನ್‌ ಮಾಡಿಲ್ಲ
*  ವಿಜಯೇಂದ್ರ ಪರಿಷತ್‌ಗೆ ಬೇಡ, ಜನರಿಂದ ಆಯ್ಕೆಯಾಗಲಿ ಎನ್ನುವುದು ಪಕ್ಷದ ಉದ್ದೇಶ
*  ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅಭಿಮತ
 

ಬಳ್ಳಾರಿ(ಮೇ.26): ಬಿಜೆಪಿ ಪಕ್ಷದ ದೊಡ್ಡ ಶಕ್ತಿಯಾದ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರನ್ನು ಪಕ್ಷದಿಂದ ಸೈಡ್‌ಲೈನ್‌ ಮಾಡುವ ಮಾತೇ ಇಲ್ಲ ಎಂದು ಸಾರಿಗೆ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಸ್ಪಷ್ಟಪಡಿಸಿದರು.

ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ಕೆಡಿಪಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಎಸ್‌. ಯಡಿಯೂರಪ್ಪನವರು ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಅವರು ಪಕ್ಷದ ದೊಡ್ಡ ಶಕ್ತಿ. ಅವರ ಶಕ್ತಿ ಕುಗ್ಗಿಸುವ ಕೆಲಸ ಪಕ್ಷದಲ್ಲಿ ಎಂದೂ ನಡೆಯುವುದಿಲ್ಲ. ಎಂಥ ಪರಿಸ್ಥಿತಿಯಲ್ಲೂ ಬಿಎಸ್‌ ವೈ ಅವರನ್ನು ಕೈ ಬಿಡಲ್ಲ. ಅವರನ್ನು ಸೈಡ್‌ ಲೈನ್‌ ಮಾಡುವ ಮಾತೇ ಇಲ್ಲ. ಮುಂದೆಯೂ ಅವರು ಪಕ್ಷದಲ್ಲಿ ಇರುತ್ತಾರೆ. ಅವರ ಶಕ್ತಿ ಕುಗ್ಗಿಸುವ ಕೆಲಸ ಬಿಜೆಪಿ ಯಾವತ್ತೂ ಮಾಡಲ್ಲ ಎಂದು ರಾಮುಲು ಹೇಳಿದರು.

MLC Election ವಿಜಯೇಂದ್ರಗೆ ಅವಕಾಶ ನೀಡೊದು ಮೋದಿ,ನಡ್ಡಾಗೆ ಬಿಟ್ಟ ವಿಚಾರ, ಯಡಿಯೂರಪ್ಪ!

ವಿಧಾನಸಭೆ ಚುನಾವಣೆ ಹತ್ತಿರ ಇರುವ ಕಾರಣ ಬಿಎಸ್‌ ವೈ ಪುತ್ರ ವಿಜಯೇಂದ್ರರಿಗೆ ಎಂಎಲ್‌ಸಿ ಟಿಕೆಟ್‌ ಕೊಟ್ಟಿಲ್ಲ. ಬಿಜೆಪಿ ಸಾಮಾಜಿಕ ನ್ಯಾಯಕ್ಕೆ ಬದ್ಧವಾದ ಪಕ್ಷ. ವಿಜಯೇಂದ್ರ ಅವರನ್ನು ಗುರುತಿಸುವ ಕೆಲಸ ಪಕ್ಷ ಮಾಡಲಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ವಿಜಯೇಂದ್ರರಿಗೆ ಅವಕಾಶ ಕಲ್ಪಿಸಬೇಕೆಂದು ಪಕ್ಷದ ಚಿಂತನೆಯಾಗಿದೆ ಎಂದ ಸಚಿವ ಶ್ರೀರಾಮುಲು, ವಿಜಯೇಂದ್ರ ಕೇವಲ ವಿಧಾನಪರಿಷತ್‌ಗೆ ಇರಬೇಕೆಂದು ಆಸೆ ಪಟ್ಟಿಲ್ಲ. ಅವರು ಜನರ ಮಧ್ಯದಿಂದ ಆಯ್ಕೆಯಾಗಬೇಕು. ಬಿಎಸ್‌ವೈ ಹೋರಾಟವನ್ನು ಪಕ್ಷ ಮರೆಯೋದಿಲ್ಲ ಎಂದರು.

ಪಕ್ಷದಲ್ಲಿ ಯಡಿಯೂರಪ್ಪ ಅವರ ಬಗ್ಗೆ ಉನ್ನತ ಗೌರವವಿದೆ. ವಿಜಯೇಂದ್ರ ಭವಿಷ್ಯದಲ್ಲಿ ಬಿಜೆಪಿಗೆ ಉತ್ತಮ ನಾಯಕರಾಗಲಿದ್ದು, ಜನರಿಂದ ಆಯ್ಕೆಯಾಗಿ ಪಕ್ಷಕ್ಕೆ ದೊಡ್ಡ ಶಕ್ತಿಯಾಗಿ ಹೊರಹೊಮ್ಮಲಿದ್ದಾರೆ. ಅವರು ವಿಧಾನಸಭೆಗೆ ಬಂದರೆ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಅನುಕೂಲವಾಗಲಿದೆ. ಹಾಗಾಗಿ, ಅವರನ್ನು ವಿಧಾನಪರಿಷತ್‌ ಬದಲಿಗೆ, ವಿಧಾನಸಭೆಗೆ ಅಂತ ಪಕ್ಷ ಯೋಚನೆ ನಡೆಸುತ್ತಿದೆ ಎಂದವರು ತಿಳಿಸಿದರು.
 

click me!