* ಸಚಿವ ಶ್ರೀರಾಮುಲು ರಾಜಕೀಯ ವಿರಕ್ತಿಯ ನುಡಿ
* ರಾಜಕಾರಣಕ್ಕಿಂತ ನಾವು ಮಾಡುವ ಕೆಲಸ ಸಾರ್ಥಕತೆ ಪಡೆಯಬೇಕು
* ಅಧಿಕಾರ ಇಲ್ಲದಿದ್ದರೂ ನಾವು ಮಾಡಿದ ಉತ್ತಮ ಕಾರ್ಯಗಳು ಜನರ ಮನಸ್ಸಿನಲ್ಲಿ ಉಳಿಯಬೇಕು
ಬಳ್ಳಾರಿ(ಮಾ.04): ಮುಂದಿನ ಹತ್ತು ವರ್ಷಗಳಲ್ಲಿ ನಾನು ರಾಜಕೀಯದಲ್ಲಿ(Politics) ಇರುತ್ತೇನೋ ಇಲ್ಲವೋ ಗೊತ್ತಿಲ್ಲ. ನಾವು ಮಾಡುವ ಕೆಲಸ ಶಾಶ್ವತವೇ ಹೊರತು, ರಾಜಕಾರಣ ಅಥವಾ ಅಧಿಕಾರವಲ್ಲ ಎನ್ನುವ ಮೂಲಕ ಜಿಲ್ಲಾ ಸಚಿವ ಬಿ. ಶ್ರೀರಾಮುಲು(B Sriramulu) ರಾಜಕೀಯ ವಿರಕ್ತಿಯ ಮಾತುಗಳನ್ನಾಡಿದ್ದಾರೆ.
ನಗರದ ಮುಂಡ್ರಗಿಯಲ್ಲಿ ಫಲಾನುಭವಿಗಳಿಗೆ ಮನೆಗಳ ಹಂಚಿಕೆ ಮಾಡಿ ಮಾತನಾಡಿದ ಸಚಿವ ಶ್ರೀರಾಮುಲು, ರಾಜಕಾರಣಕ್ಕಿಂತ ನಾವು ಮಾಡುವ ಕೆಲಸ ಸಾರ್ಥಕತೆ ಪಡೆಯಬೇಕು. ಅಧಿಕಾರ ಇಲ್ಲದಿದ್ದರೂ ನಾವು ಮಾಡಿದ ಉತ್ತಮ ಕಾರ್ಯಗಳು ಜನರ ಮನಸ್ಸಿನಲ್ಲಿ ಉಳಿಯಬೇಕು. ಸೇವಾ ಮನೋಭಾವದಿಂದ ಕೆಲಸ ಮಾಡಬೇಕು ಎಂದರು.
Koppal: ದೇಣಿಗೆಯಿಂದ ಕಿಷ್ಕಿಂಧೆ ಪೌರಾಣಿಕ ದೇಗುಲಗಳ ಜೀರ್ಣೋದ್ಧಾರ: ಸಚಿವ ರಾಮುಲು
ಮುಂಡ್ರಗಿಯಲ್ಲಿ ಹತ್ತು ಸಾವಿರ ಮನೆಗಳ(Houses) ನಿರ್ಮಾಣದ ಉದ್ದೇಶ ಹೊಂದಲಾಗಿದೆ. ಸೂರಿಲ್ಲದ ಪ್ರತಿಯೊಬ್ಬರಿಗೂ ಸೂರು ಕಲ್ಪಿಸಿಕೊಡುವುದು ನಮ್ಮ ಜವಾಬ್ದಾರಿ. ಆ ಜವಾಬ್ದಾರಿಯನ್ನು ಖಂಡಿತ ನಿಭಾಯಿಸುತ್ತೇವೆ ಎಂದು ತಿಳಿಸಿದರು. 2009ರಲ್ಲಿ ನನ್ನ ಸ್ನೇಹಿತ ಜನಾರ್ದನ ರೆಡ್ಡಿ(Janardhana Reddy) ಬಡವರಿಗೆ ಮನೆಗಳನ್ನು ನಿರ್ಮಿಸುವ ಭರವಸೆ ನೀಡಿದ್ದರು. ನಾವು ನೀಡಿದ ಭರವಸೆ ಈಡೇರಿಸಿದ್ದೇವೆ ಎಂದು ಸಚಿವ ಶ್ರೀರಾಮುಲು ತಿಳಿಸಿದರು. ಶಾಸಕ ಜಿ. ಸೋಮಶೇಖರ ರೆಡ್ಡಿ ಇತರರು ಇದ್ದರು.
ಕೊಳಗೇರಿ ಅಭಿವೃದ್ಧಿ ಮಂಡಳಿಯ 1260 ಮನೆಗಳ ನಿರ್ಮಾಣಕ್ಕೆ ಭೂಮಿಪೂಜೆ
ಈ ಸಾಲಿನಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ-ಸರ್ವರಿಗೂ ಸೂರು(ನಗರ) ಯೋಜನೆಯಡಿ ಬಳ್ಳಾರಿ ನಗರದ ವಿವಿಧ ಕೊಳಚೆ ಪ್ರದೇಶಗಳಲ್ಲಿ 1260 ಮನೆಗಳ ನಿರ್ಮಾಣಕ್ಕೆ ಮಂಗಳವಾರ ನಗರದ ಬಸವನಕುಂಟೆ ಪ್ರದೇಶದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಭೂಮಿಪೂಜೆ ನೆರವೇರಿಸಿದರು.
ಪ್ರತಿ ಮನೆಗೆ ತಗಲುವ ವೆಚ್ಚ . 6.97 ಲಕ್ಷಗಳಾಗಲಿದ್ದು, ಎಸ್ಸಿ/ಎಸ್ಟಿಫಲಾನುಭವಿಗಳಿಗೆ ಕೇಂದ್ರ ಸರ್ಕಾರ . 1.50 ಲಕ್ಷ, ರಾಜ್ಯ ಸರ್ಕಾರ . 2 ಲಕ್ಷ ಎಸ್ಸಿಪಿ/ಟಿಎಸ್ಪಿ ಸಹಾಯಧನ . 75 ಸಾವಿರ ಒದಗಿಸಲಿದ್ದು, ಫಲಾನುಭವಿ ವಂತಿಗೆ (ಶೇ. 10) . 69,700 ಭರಿಸಲಿದ್ದಾರೆ. ಬ್ಯಾಂಕ್ ಸಾಲ . 2.02 ಲಕ್ಷ ಒದಗಿಸಲಾಗುತ್ತದೆ. ಅದೇ ರೀತಿ ಅಲ್ಪಸಂಖ್ಯಾತರು ಹಾಗೂ ಇತರೇ ವರ್ಗದವರಿಗೆ ಕೇಂದ್ರ . 1.50 ಲಕ್ಷ, ರಾಜ್ಯ ಸರ್ಕಾರ . 1.20 ಲಕ್ಷ ಸಹಾಯಧನ ಒದಗಿಸಲಿದ್ದು, ಫಲಾನುಭವಿ ವಂತಿಗೆ (ಶೇ. 15) . 1.04 ಲಕ್ಷ ಭರಿಸಲಿದ್ದಾರೆ. ಬ್ಯಾಂಕ್ ಸಾಲ . 3.22 ಲಕ್ಷ ಒದಗಿಸಲಾಗುತ್ತದೆ.
2017-18ನೇ ಸಾಲಿನಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ(Karnataka Slum Development Board) ವತಿಯಿಂದ ಬಳ್ಳಾರಿ(Ballari) ನಗರದಲ್ಲಿ . 14688 ಲಕ್ಷ ವೆಚ್ಚದಲ್ಲಿ 2801 ಮನೆಗಳನ್ನು ಈಗಾಗಲೇ ನಿರ್ಮಿಸಲಾಗಿದೆ. ಈ ಸಾಲಿನಲ್ಲಿ ಬಳ್ಳಾರಿ ನಗರದಲ್ಲಿ . 23086 ಲಕ್ಷ ವೆಚ್ಚದಲ್ಲಿ 3511 ಮನೆಗಳು ನಿರ್ಮಿಸಲು ಉದ್ದೇಶಿಸಲಾಗಿದೆ.
ಭೂಮಿಪೂಜೆ ನೆರವೇರಿಸಿದ ನಂತರ ಮಾತನಾಡಿದ ಸಚಿವ ಶ್ರೀರಾಮುಲು, ರಾಜ್ಯದಲ್ಲಿ(Karnataka) 2021-22ನೇ ಸಾಲಿನಲ್ಲಿ . 10,194 ಕೋಟಿ ವೆಚ್ಚದಲ್ಲಿ 9.74 ಲಕ್ಷ ಮನೆಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಇವುಗಳನ್ನು 3 ವರ್ಷದೊಳಗೆ ನಿರ್ಮಿಸುವ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ ಎಂದರು.
Road Accidents: ಬೆಂಗ್ಳೂರಲ್ಲಿ ಅಪಘಾತ ತಗ್ಗಿಸಲು ಅಭಿಯಾನ: ಸಚಿವ ಶ್ರೀರಾಮುಲು
ಬಳ್ಳಾರಿ ನಗರದಲ್ಲಿ 1264 ಮನೆಗಳಿಗೆ ಭೂಮಿಪೂಜೆ ನೆರವೇರಿಸಲಾಗಿದ್ದು, ಉಳಿದ ಮನೆಗಳ ಕಾಮಗಾರಿಯೂ ಶೀಘ್ರ ಆರಂಭಿಸಲಾಗುವುದು ಎಂದು ಹೇಳಿದ ಸಚಿವರು, ಬಳ್ಳಾರಿ ನಗರದ 60 ಸ್ಲಂಗಳ 50 ಸಾವಿರ ಜನರಿಗೆ ಹಕ್ಕುಪತ್ರಗಳನ್ನು ಅದಷ್ಟುಶೀಘ್ರ ವಿತರಿಸಲಾಗುವುದು ಎಂದರು.
ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರರೆಡ್ಡಿ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ಅವರು 2022-23ರೊಳಗೆ ಗುಡಿಸಲು ಮುಕ್ತ ಭಾರತ ಕನಸು ಕಂಡಿದ್ದು, ಅದರಂತೆ ಬಳ್ಳಾರಿ ನಗರದಲ್ಲಿ ಗುಡಿಸಲಿನಲ್ಲಿ ವಾಸಿಸುತ್ತಿರುವ ಬಡ ಜನರಿಗೆ ವಿವಿಧ ಯೋಜನೆಗಳಡಿ ಮನೆಗಳನ್ನು ಒದಗಿಸುವುದಕ್ಕೆ ನಮ್ಮ ಸರ್ಕಾರ ಆದ್ಯತೆ ನೀಡಿದೆ ಎಂದರು. ಈ ಸಂದರ್ಭದಲ್ಲಿ ಬುಡಾ ಅಧ್ಯಕ್ಷ ಪಾಲನ್ನ, ಮಹಾನಗರ ಪಾಲಿಕೆ ಸದಸ್ಯರು ಹಾಗೂ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಮತ್ತಿತರರು ಇದ್ದರು.