
ಬೆಂಗಳೂರು, [ಫೆ.23]: ಉಪಮುಖ್ಯಂತ್ರಿ ಹುದ್ದೆ ಸಿಕ್ಕಿಲ್ಲವೆಂದು ಸಚಿವ ಶ್ರೀರಾಮುಲು ಬಿಜೆಪಿ ನಾಯಕರ ಮೇಲೆ ಮುನಿಸಿಕೊಂಡಿದ್ದಾರೆ. ಇದರ ಮಧ್ಯೆ ರಾಮುಲು, ಎಚ್.ಡಿ.ದೇವೇಗೌಡರನ್ನ ಭೇಟಿ ಮಾಡಿದ್ದು, ಹಲವರಲ್ಲಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಮೊದಲೇ ಯಡಿಯೂರಪ್ಪನವರಿಂದ ಅಂತರ ಕಾಯ್ದುಕೊಳ್ಳುತ್ತಿರುವ ಶ್ರೀರಾಮುಲು ಇಂದು [ಭಾನುವಾರ] ದೇವೇಗೌಡ್ರ ನಿವಾಸಕ್ಕೆ ಹೋಗಿರುವುದು ಬೇರೆ ಮಾತುಗಳು ಹರಿದಾಡುತ್ತಿವೆ.
ಶ್ರೀರಾಮುಲು ಮಗಳ ಮದುವೆ: ವಧು, ವರರಿಗೆ ಶುಭ ಕೋರಿದ ಮೋದಿ
ಪುತ್ರಿ ಮದುವೆಗ ಆಹ್ವಾನಿಸಿದ ರಾಮುಲು
ಅಷ್ಟಕ್ಕೂ ಶ್ರೀರಾಮುಲು, ದೇವೇಗೌಡರ ಮನೆಗೆ ಹೋಗಿದ್ದು ಯಾವುದೇ ರಾಜಕೀಯ ಉದ್ದೇಶಕ್ಕಲ್ಲ. ಬದಲಾಗಿ ಅವರ ಪುತ್ರಿಯ ಮದುವೆಯ ಆಹ್ವಾನ ಪತ್ರಿಕೆ ನೀಡಲು ದೊಡ್ಡಗೌಡ ನಿವಾಸಕ್ಕೆ ಹೋಗಿದ್ದಾರೆ.
ಪದ್ಮನಾಭನಗರದಲ್ಲಿ ಗೌಡ್ರ ಮನೆಗೆ ಹೋಗಿರುವ ಶ್ರೀರಾಮುಲು ತಮ್ಮ ಮಗಳ ಮದುವೆಗೆ ಬರುವಂತೆ ಆಹ್ವಾನಿಸಿದರು. ಮಾರ್ಚ್ 5ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಮುಲು ಪುತ್ರಿ ರಕ್ಷಿತಾಳ ಮದುವೆ ನಡೆಯಲಿದ್ದು, ಈಗಾಗಲೇ ಹಲವು ಗಣ್ಯರನ್ನು ಆಹ್ವಾನಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹೈ ಕಮಾಂಡ್ನ ಹಲವು ರಾಜಕೀಯ ನಾಯಕರಿಗೆ ಆಮಂತ್ರಣ ನೀಡಿದ್ದಾರೆ. ಕಳೆದ ಡಿಸೆಂಬರ್ನಲ್ಲಿ ಬೆಂಗಳೂರಿನ ತಾಜ್ ಹೋಟೆಲ್ನಲ್ಲಿ ರಕ್ಷಿತಾ ಹಾಗೂ ಲಲಿತ್ ಕುಮಾರ್ ನಿಶ್ಚಿತಾರ್ಥ ನಡೆದಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.