ಟಿಕೆಟ್‌ ಹಂಚಿಕೆ ಬಿಜೆಪಿಗೆ ದೊಡ್ಡ ಸವಾಲ್ : ಬಿಜೆಪಿಯಲ್ಲಿ ಭರ್ಜರಿ ಲಾಬಿ

By Kannadaprabha News  |  First Published Oct 1, 2021, 7:34 AM IST
  •  ಅ.30ರಂದು ಉಪಚುನಾವಣೆ ನಡೆಯಲಿರುವ ಸಿಂದಗಿ ಮತ್ತು ಹಾನಗಲ್‌  ಉಪ ಚುನಾವಣೆ
  • ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿಯಲ್ಲಿ ಭರ್ಜರಿ ಲಾಬಿ 

ಬೆಂಗಳೂರು (ಅ.01):  ಅ.30ರಂದು ಉಪಚುನಾವಣೆ (Karnataka By Election) ನಡೆಯಲಿರುವ ಸಿಂದಗಿ ಮತ್ತು ಹಾನಗಲ್‌ (Sindagi and Hanagal) ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿಯಲ್ಲಿ (BJP) ಭರ್ಜರಿ ಲಾಬಿ ನಡೆದಿದೆ. ಪಕ್ಷದ ಪ್ರಮುಖ ಮುಖಂಡರ ಮೂಲಕ ಒತ್ತಡ ಹೇರುವ ಪ್ರಯತ್ನಗಳು ಸಹ ನಡೆದಿವೆ.

ಹಾನಗಲ್‌ ಕ್ಷೇತ್ರದಲ್ಲಿ ದಿವಂಗತ ಸಿ.ಎಂ.ಉದಾಸಿ ಸೊಸೆ ರೇವತಿ ಅವರಿಗೆ ಟಿಕೆಟ್‌ ನೀಡಬೇಕು ಎನ್ನುವ ಬೇಡಿಕೆ ಇದೆ. ಒಂದು ವೇಳೆ ಪತ್ನಿ ರೇವತಿಗೆ ಟಿಕೆಟ್‌ ನೀಡದಿದ್ದರೆ ತಮಗೆ ಟಿಕೆಟ್‌ ನೀಡಬೇಕು ಎಂದು ಸಂಸದ ಶಿವಕುಮಾರ್‌ ಉದಾಸಿ (Shivakumar Udasi) ಬೇಡಿಕೆಯನ್ನಿಟ್ಟಿದ್ದಾರೆ ಎಂದು ಹೇಳಲಾಗಿದೆ. ಈ ನಡುವೆ, ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಸಿ.ಆರ್‌.ಬಳ್ಳಾರಿ, ಬೋಜರಾಜ ಕರೂದಿ ಸೇರಿದಂತೆ ಇತರರು ಲಾಬಿ ನಡೆಸಿದ್ದಾರೆ.

Tap to resize

Latest Videos

ಸಿಂದಗಿಯಲ್ಲಿ ವಲಸೆ ರಾಜಕಾರಣ: ಬಿಜೆಪಿ ಸೇರಲಿರುವ ಜೆಡಿಎಸ್ ನಾಯಕ

ಸಿಂದಗಿ ಕ್ಷೇತ್ರದಲ್ಲಿಯೂ ಟಿಕೆಟ್‌ ಹಂಚಿಕೆಯು ಬಿಜೆಪಿಗೆ ದೊಡ್ಡ ಸವಾಲಾಗಿದೆ. ಮಾಜಿ ಶಾಸಕ ರಮೇಶ್‌ ಭೂಸನೂರು (Ramesh Bhusanur) ಟಿಕೆಟ್‌ಗಾಗಿ ತೀವ್ರ ಲಾಬಿ ನಡೆಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಸಹ ಭೇಟಿಯಾಗಿ ಒತ್ತಡ ಹಾಕುವ ತಂತ್ರಗಾರಿಕೆ ಮಾಡಿದ್ದಾರೆ. ಇವರೊಂದಿಗೆ ಶಿವಾನಂದ ಪಾಟೀಲ ಸೋಮಜಾಳ, ಅಶೋಕ ಅಲ್ಲಾಪುರ, ಶಂಭು ಕಕ್ಕಳಮೇಲಿ, ಡಾ. ಗೌತಮ್‌ ಚೌಧರಿ ಪ್ರಮುಖ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಇವರಲ್ಲಿ ಯಾರಿಗೆ ಟಿಕೆಟ್‌ ಸಿಗಲಿದೆ ಎಂಬುದನ್ನು ಕಾದುನೋಡಬೇಕಾಗಿದೆ. ಒಂದು ವೇಳೆ ಇವರಲ್ಲಿ ಯಾರಿಗೂ ಟಿಕೆಟ್‌ ನೀಡದೆ ಹೊಸ ಮುಖಗಳಿಗೆ ಮಣೆ ಹಾಕುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ನಾವು ಸ್ಪರ್ಧಿಸಲ್ಲ

ವಿಜಯಪುರ (Vijayapura) ಜಿಲ್ಲೆಯ ಸಿಂದಗಿ ವಿಧಾನ ಸಭೆ ಉಪಚುನಾವಣೆಯಲ್ಲಿ (Assembly Election) ನಾನಾಗಲಿ ಅಥವಾ ನನ್ನ ಮಗನಾಗಲಿ ಸ್ಪರ್ಧಿಸುವುದಿಲ್ಲ. ಸ್ಪರ್ಧೆ ಮಾಡುತ್ತಾರೆಂಬುದು ಸತ್ಯಕ್ಕೆ ದೂರವಾದ ಮಾತು. ಆ ಕ್ಷೇತ್ರದ ಚುನಾವಣೆ ಉಸ್ತುವಾರಿಯನ್ನು ನನಗೆ ವಹಿಸಲಾಗಿದ್ದು, ಅಲ್ಲಿ ಸ್ಪರ್ಧಿಸಿದ ಅಭ್ಯರ್ಥಿಯನ್ನು ಗೆಲ್ಲಿಸುವುದೇ ನನ್ನ ಗುರಿ ಎಂದು ಮಾಜಿ ಡಿಸಿಎಂ, ವಿಧಾನ ಪರಿಷತ ಸದಸ್ಯ ಲಕ್ಷ್ಮಣ ಸಂಗಪ್ಪ ಸವದಿ (Laxman Savadi) ಹೇಳಿದ್ದಾರೆ.

ಬಿಜೆಪಿಗೆ ಬರಲು ಹಣದ ಆಮಿಷ: ಶಾಸಕರ ಬಳಿಯೇ ಕೇಳ್ತೇನೆ ಎಂದ ಲಕ್ಷ್ಮಣ ಸವದಿ

ಸಿಂದಗಿ ಕ್ಷೇತ್ರಕ್ಕೆ ತೆರಳಿ ಅಲ್ಲಿರುವ ಮುಖಂಡರು, ಸ್ಥಳೀಯ ನಾಯಕರು, ಸಮುದಾಯದ ಮುಖಂಡರನ್ನು ಜತೆ ಸಭೆ ನಡೆಸುತ್ತೇನೆ. ಅಭ್ಯರ್ಥಿ ಯಾರೆಂಬುವುದನ್ನು ಇನ್ನೂ ಘೋಷಣೆ ಮಾಡಿಲ್ಲ. ಸ್ಥಳೀಯರ ಭಾವನೆ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇವೆ ಎಂದು ಹೇಳಿದರು.

click me!