ಮಹಾರಾಷ್ಟ್ರದಲ್ಲಿ ಉದ್ಧವ್ ಸರ್ಕಾರ: ಮರಳಿ ಬಂದ ಅಜಿತ್ ಪವಾರ್‌ಗೆ ಈ ಸ್ಥಾನ?

By Web DeskFirst Published Nov 28, 2019, 7:39 AM IST
Highlights

ಅಜಿತ್‌ ಪವಾರ್‌ಗೆ ಯಾವ ಪಟ್ಟ?| ಎನ್‌ಸಿಪಿ ಶಾಸಕಾಂಗ ಸಭೆಗೆ ಅಜಿತ್‌ /ಡಿಸಿಎಂ ಹುದ್ದೆ ನೀಡಲು ಎನ್‌ಸಿಪಿ ಶಾಸಕರ ಆಗ್ರಹ| ನಾನು ಸಂಪುಟ ಸೇರಬೇಕೇ ಎಂಬ ಬಗ್ಗೆ ಉದ್ಧವ್‌ ನಿರ್ಧರಿಸುತ್ತಾರೆ: ಅಜಿತ್‌

ಮುಂಬೈ[ನ.28]: ಬಿಜೆಪಿ ಸಂಗ ತೊರೆದು ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಎನ್‌ಸಿಪಿ ಬಂಡಾಯ ನಾಯಕ ಅಜಿತ್‌ ಪವಾರ್‌ ಬುಧವಾರ ಎನ್‌ಸಿಪಿ ಶಾಸಕಾಂಗ ಪಕ್ಷದ ಸಭೆಗೆ ಹಾಜರಾದರು. ‘ಅಜಿತ್‌ ತಮ್ಮ ತಪ್ಪು ಒಪ್ಪಿಕೊಂಡಿದ್ದಾರೆ. ಹೀಗಾಗಿ ಪಕ್ಷದ ಅಧ್ಯಕ್ಷ ಶರದ್‌ ಪವಾರ್‌ ಅವರು ಅಜಿತ್‌ ಪವಾರ್‌ ಅವರನ್ನು ಕ್ಷಮಿಸಿದ್ದು, ಮತ್ತೆಂದೂ ಇಂತಹ ಪ್ರಮಾದ ಮಾಡದಂತೆ ಎಚ್ಚರಿಸಿದ್ದಾರೆ’ ಎಂದು ಎನ್‌ಸಿಪಿ ಮುಖಂಡರು ತಿಳಿಸಿದ್ದಾರೆ.

ಮೊದಲ ಬಾರಿಗೆ ಠಾಕ್ರೆ ಕುಟುಂಬಕ್ಕೆ ಸಿಎಂ ಹುದ್ದೆ, ಸೋನಿಯಾಗೆ ಧನ್ಯವಾದ ಎಂದ ಉದ್ಧವ್!

ಶಾಸಕಾಂಗ ಪಕ್ಷದ ಸಭೆಗೆ ಹಾಜರಾದ ಬೆನ್ನಲ್ಲೇ ಅಜಿತ್‌ ಅವರು ಪುನಃ ಎನ್‌ಸಿಪಿ ಶಾಸಕಾಂಗ ಪಕ್ಷದ ನಾಯಕರಾಗುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ಹೇಳಿವೆ. ಬಿಜೆಪಿ ಜತೆ ಸೇರಿಕೊಂಡಿದ್ದಕ್ಕೆ ಇತ್ತೀಚೆಗೆ ಅವರನ್ನು ಶಾಸಕಾಂಗ ಪಕ್ಷದ ನಾಯಕ ಹುದ್ದೆಯಿಂದ ವಜಾ ಮಾಡಲಾಗಿತ್ತು. ಇದರ ನಡುವೆ, ಅಜಿತ್‌ ಪವಾರ್‌ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂದು ಪಕ್ಷದಲ್ಲಿ ಹಲವು ಶಾಸಕರು ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.

ಅವ್ರೂ ಬರ್ಲಿ: ಪ್ರಮಾಣವಚನಕ್ಕೆ ಮೋದಿ, ಶಾಗೂ ಆಮಂತ್ರಣ ಇರ್ಲಿ!

ಈ ನಡುವೆ ಸುದ್ದಿಗಾರರ ಜತೆ ಮಾತನಾಡಿದ ಅಜಿತ್‌ ಪವಾರ್‌, ‘ನಾನು ಎನ್‌ಸಿಪಿಯಲ್ಲೇ ಇದ್ದೇನೆ. ಈಗ ಹೆಚ್ಚೇನೂ ಹೇಳುವುದಿಲ್ಲ. ಪ್ರಸಂಗ ಬಂದಾಗ ಎಲ್ಲ ಹೇಳುವೆ’ ಎಂದರು. ‘ನನ್ನನ್ನು ಸಂಪುಟಕ್ಕೆ ತೆಗೆದುಕೊಳ್ಳುವುದು ಉದ್ಧವ್‌ ಠಾಕ್ರೆ ಅವರ ವಿವೇಚನೆಗೆ ಬಿಟ್ಟಿದ್ದು’ ಎಂದು ಸ್ಪಷ್ಟಪಡಿಸಿದರು.

ಮಹಾರಾಷ್ಟ್ರ ರಾಜಕೀಯದಲ್ಲಿ ಕ್ಷಿಪ್ರ ಕ್ರಾಂತಿ: ಒಂದೇ ಕ್ಲಿಕ್‌ನಲ್ಲಿ ಎಲ್ಲಾ ಸುದ್ದಿಗಳು

click me!