ರಾಜ್ಯದಲ್ಲಿ ಲವ್‌ ಜಿಹಾದ್ ತ‌ಡೆ ಕಾನೂನು ಜಾರಿ ಫಿಕ್ಸ್: ಖಚಿತಪಡಿಸಿದ ಬಿಜೆಪಿ ಸಾರಥಿ

By Suvarna News  |  First Published Jan 24, 2021, 4:08 PM IST

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯಂತೆ ಲವ್‌ ಜಿಹಾದ್‌ ಕಾನೂನು ಕೂಡ ಜಾರಿಗೆ ತರಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದ್ದಾರೆ.


ಹೊಸಪೇಟೆ, (ಜ.24): ಶೀಘ್ರವೇ ರಾಜ್ಯದಲ್ಲಿ ಲವ್‌ ಜಿಹಾದ್ ತಡೆ‌ ಕಾನೂನು ಜಾರಿಗೆ ತಂದು ಮಹಿಳೆಯರಿಗೆ ರಕ್ಷಣೆ ಒದಗಿಸಲಾಗುವುದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

ಭಾನುವಾರ ನಗರದಲ್ಲಿ ಇಂದು (ಭಾನುವಾರ) ಏರ್ಪಡಿಸಿದ್ದ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಈಗಾಗಲೇ ಜಾರಿಗೆ ಬಂದಿದೆ. ಅದೇ ರೀತಿ ಲವ್‌ ಜಿಹಾದ್‌ ಕಾನೂನು ಕೂಡ ಜಾರಿಗೆ ತರಲಾಗುವುದು ಎಂದು ಸ್ಪಷ್ಟಪಡಿಸಿದರು.

Tap to resize

Latest Videos

ಹನುಮಂತ ಗುಲಾಮಗಿರಿಯ ಸಂಕೇತ ಎಂದವರಿಗೆ ಕಟೀಲು ತಿರುಗೇಟು ಕೊಟ್ಟಿದ್ಹೀಗೆ!

ಇದು ಜಾತ್ಯಾತೀತ ರಾಷ್ಟ್ರ. ಡಾ.ಬಿ.ಆರ್‌. ಅಂಬೇಡ್ಕರ್ ರಚಿಸಿರುವ ಸಂವಿಧಾನ ಒಪ್ಪಿಕೊಂಡಿದ್ದೇವೆ. ಆದರೆ, ಹಿಂದೂ ಸಂಸ್ಕೃತಿಯ ದೇಶ, ಹಿಂದೂ ದೇಶ ಎಂದರು.

click me!