
ಬೆಳಗಾವಿ (ಏ.24): ಕಳೆದ ವಾರ ಕಲಬುರಗಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಭಾಷಣಕ್ಕೂ ಮುನ್ನ ಖರ್ಗೆ ಸಾಹೇಬ್ರು ತಪ್ಪು ತಿಳ್ಕೊಬೇಡಿ ಎನ್ನುತ್ತಾ 'ಭಾರತ್ ಮಾತಾಕೀ ಜೈ' ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟ್ರೋಲ್‌ಗೆ ಗುರಿಯಾಗಿದ್ದ ಶಾಸಕ ಲಕ್ಷ್ಮಣ್ ಸವದಿ ಇದೀಗ ಮತ್ತೆ ಭಾರತ್ ಮಾತಾಕೀ ಜೈ ಎಂದು ಘೋಷಣೆ ಮೊಳಗಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಮೂಡಲಗಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಭಾರತಮಾತೆಯ ಘೋಷಣೆ ಕೂಗುವ ಮೂಲಕ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ದೇಶ ಭಕ್ತಿಯನ್ನು ಗುತ್ತಿಗೆ ತೆಗೆದುಕೊಂಡವರಂತೆ ಬಿಜೆಪಿಗರು ಭಾಷಣ ಮಾಡ್ತಾರೆ. ಈ ದೇಶ ಉಳಿಬೇಕು ಅಂದ್ರೆ ನರೇಂದ್ರ ಮೋದಿ ಪ್ರಧಾನಿ ಆಗಬೇಕು ಅಂತಾರೆ. ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಯಾವಾಗ ಬಿಜೆಪಿ ಹುಟ್ಟಿದ್ದು ಯಾವಾಗ? 1950 ರಲ್ಲಿ ಜನ ಸಂಘ ಹುಟ್ಟಿತು ಅದು ನಂತರ ಬಿಜೆಪಿ ಆಯ್ತು. ಆದರೆ ಅದಕ್ಕಿಂತ ಮೊದಲು ಕಾಂಗ್ರೆಸ್ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿತ್ತು ಎಂದರು.
'ಖರ್ಗೆ ಸಾಹೇಬ್ರು ತಪ್ಪು ತಿಳ್ಕೊಬಾರದು' ಅಂತಾ ಹೇಳಿ ಭಾರತ್ ಮಾತಾಕೀ ಜೈ ಎಂದ ಸವದಿ!
ಮೊನ್ನೆ ಗುಲ್ಬರ್ಗಾದಲ್ಲಿ ನಡೆದ ಸಮಾವೇಶದಲ್ಲಿ ಖರ್ಗೆ, ಡಿಕೆ ಶಿವಕುಮಾರ ಮಾತಾಡ್ತಾ ಕೂತಿದ್ದರು. ಅವರ ಗಮನ ಸೆಳೆಯಲು ನಾನು ಸ್ವಲ್ಪ ಈಕಡೆ ಕೇಳಿ ಅಪಾರ್ಥ ಮಾಡ್ಕೊಬೇಡಿ ಎಂದಿದ್ದೆ. ಅದನ್ನೇ ಬಿಜೆಪಿಯವರು ಕಟ್ ಅಂಡ್ ಪೇಸ್ಟ್ ಮಾಡಿ ಟ್ರೋಲ್ ಮಾಡಿದರು. ಈ ಕೆಲಸದಲ್ಲಿ ಬಿಜೆಪಿಯವರು ನಿಸ್ಸೀಮರು. ಅಪಾರ್ಥ ಮಾಡ್ಕೋಬೇಡಿ ಎಂದಿದ್ದನ್ನ ಮಾತ್ರ ಕಟ್ ಮಾಡಿ ಮೋದಿ ಸಾಹೇಬರಿಗೆ ಕಳಿಸಿದ್ದಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು. ಇದೇ ವೇಳೆ ಮತ್ತೊಮ್ಮೆ ಭಾರತ್ ಮಾತಾಕೀ ಜೈ ಎಂದ ಲಕ್ಷ್ಮಣ್ ಸವದಿ, ಇದರ ವಿಡಿಯೋನೂ ಮಾಡಿ ಮೋದಿ ಸಾಹೇಬರಿಗೆ ಕಳಿಸಿ ಎಂದು ಬಿಜೆಪಿಯವರಿಗೆ ಟಾಂಗ್ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.