ಸಮಾಜವಾದಿ ಪಾರ್ಟಿ ಪ್ರಣಾಳಿಕೆ ಬಿಡುಗಡೆ; ಬಡ ರೈತರಿಗೆ 5000 ರು. ಪಿಂಚಣಿ, ₹ 500 ಮೊತ್ತದ ಮೊಬೈಲ್‌ ಡಾಟಾ!

By Kannadaprabha NewsFirst Published Apr 11, 2024, 7:41 AM IST
Highlights

ಲೋಕಸಭಾ ಚುನಾವಣೆಗೆ ಸಮಾಜವಾದಿ ಪಕ್ಷ ಭರ್ಜರಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಅದರಲ್ಲಿ ದೇಶವ್ಯಾಪಿ ಜನಗಣತಿ, ಸೇನಾ ನೇಮಕಾತಿಗಾಗಿ ಜಾರಿಗೆ ತಂದ ಅಗ್ನಿವೀರ್‌ ಯೋಜನೆ ರದ್ದು, ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗದವರಿಗೆ ಸರ್ಕಾರಿ ಹುದ್ದೆಯ ಭರವಸೆ ನೀಡಲಾಗಿದೆ.

ಲಖನೌ (ಏ.11): ಲೋಕಸಭಾ ಚುನಾವಣೆಗೆ ಸಮಾಜವಾದಿ ಪಕ್ಷ ಭರ್ಜರಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಅದರಲ್ಲಿ ದೇಶವ್ಯಾಪಿ ಜನಗಣತಿ, ಸೇನಾ ನೇಮಕಾತಿಗಾಗಿ ಜಾರಿಗೆ ತಂದ ಅಗ್ನಿವೀರ್‌ ಯೋಜನೆ ರದ್ದು, ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗದವರಿಗೆ ಸರ್ಕಾರಿ ಹುದ್ದೆಯ ಭರವಸೆ ನೀಡಲಾಗಿದೆ.

ಜೊತೆಗೆ ಮಹಿಳೆಯರಿಗೆ ಶಾಸನಸಭೆಗಳಲ್ಲಿ ಶೇ.33ರಷ್ಟು ಮೀಸಲು, ಸಣ್ಣ ಮತ್ತು ಭೂಮಿ ರಹಿತ ರೈತರಿಗೆ ಮಾಸಿಕ 5000 ರು. ಪಿಂಚಣಿ, ಬಡವರಿಗೆ ಉಚಿತ ಪಡಿತರ, ಪಡಿತರ ಕಾರ್ಡ್‌ ಹೊಂದಿದವರಿಗೆ ಮಾಸಿಕ 500 ರು. ಮೊತ್ತದ ಮೊಬೈಲ್‌ ಡಾಟಾ ನೀಡಲಾಗುವುದು ಎಂದು ಪಕ್ಷದ ಅಧ್ಯಕ್ಷ ಅಖಿಲೇಶ್‌ ಸಿಂಗ್‌ ಯಾದವ್‌ ಚುನಾವಣಾ ಪ್ರಣಾಳಿಕೆ ಬಿಡುಗಡೆ ವೇಳೆ ಭರವಸೆ ನೀಡಿದರು.
ಸಮಾಜವಾದಿ ಪಕ್ಷ ಇಂಡಿಯಾ ಮೈತ್ರಿಕೂಟದ ಭಾಗವಾಗಿದ್ದು, ತನ್ನ ನೆಲೆ ಉತ್ತರಪ್ರದೇಶದಲ್ಲೇ 5ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವುದು ಕಷ್ಟ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು ಹೇಳಿವೆ.

ಚುನಾವಣೆ, ಪ್ರಚಾರ ನೋಡಲು ವಿಶ್ವದ 25 ಪಕ್ಷಕ್ಕೆ ಬಿಜೆಪಿ ಆಹ್ವಾನ

click me!