ಬಿಜೆಪಿಯವರಿಗೆ ಸುಳ್ಳೇ ಮನೆ ದೇವರು, ನಿನ್ನೆ ಕೃಷ್ಣ ಬೈರೇಗೌಡರು ಹೇಳಿದ್ದಷ್ಟೇ ಸತ್ಯ: ಸಿಎಂ ಸಿದ್ದರಾಮಯ್ಯ

By Sathish Kumar KHFirst Published Apr 7, 2024, 8:48 PM IST
Highlights

ಬಿಜೆಪಿಯವರಿಗೆ ಸುಳ್ಳೇ ಮನೆ ದೇವರು. ಕೇಂದ್ರ ಸಚಿವರು ಒಬ್ಬೊಬ್ಬರು ಒಂದೊಂದು ಸುಳ್ಳು ಹೇಳುತ್ತಾರೆ. ಆದರೆ, ನಿನ್ನೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಷ್ಟೇ ಸತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು (ಏ.07): ಅಮಿತ್ ಶಾ ರಾಜ್ಯಕ್ಕೆ ಅನುದಾನ ಕೊಡೋ ವಿಚಾರದಲ್ಲಿ ಸುಳ್ಳು ಹೇಳಿದ್ದಾರೆ. ನಿರ್ಮಲಾ ಸೀತರಾಮನ್ ಕೋಡ್ ಆಫ್ ಕಂಡಕ್ಟ್ ಅಡ್ಡ ಬಂತು ಅಂತಿದಾರೆ. ಸುಳ್ಳೇ ಬಿಜೆಪಿಯವರ ಮನೆ ದೇವರು. ನಿನ್ನೆ ಕಂದಾಯ ಸಚಿವ ಕೃಷ್ಣಬೈರೇಗೌಡರು ಹೇಳಿದ್ದಷ್ಟೇ ಸತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರೊ.ರಾಜೀವ್‌ಗೌಡ ಅವರ ಪರವಾಗಿ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ನಮ್ಮ ಪಕ್ಷದ ಅಭ್ಯರ್ಥಿ ಪ್ರೊ. ರಾಜೀವ್ ಗೌಡರಿಗೆ ನಿವೆಲ್ಲಾ ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಬೇಕು. ಕನಿಷ್ಠ 50 ಸಾವಿರ ಮತಗಳ ಅಂತರದಿಂದ ಗೆಲುವು ಕೊಡುವ ಮೂಲಕ ಆಶೀರ್ವಾದ ಮಾಡಬೇಕು. ಶಿಕ್ಷಣ ಕ್ಷೇತ್ರದಲ್ಲಿ ಇದ್ದರೂ ನಮಗೋಸ್ಕರ ಕಾರ್ಯಕರ್ತರಾಗಿ ದೆಹಲಿಯಲ್ಲಿ ಕೆಲಸ ಮಾಡಿದೋರು. ಎಸ್.ಎಂ ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ಇವರ ತಂದೆ ಸ್ಪೀಕರ್ ಆಗಿದ್ದರು. ಎಲ್ಲರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವವರು ಪ್ರೊ.ರಾಜೀವ್ ಗೌಡರು. ಅವರು ನಿಮ್ಮ ಪ್ರತಿನಿಧಿಯಾಗಿ ಲೋಕಸಭೆಗೆ ಹೋದರೆ ನಿಮ್ಮ ಧ್ವನಿಯಾಗ್ತಾರೆ ಎಂದು ಹೇಳಿದರು.

ಕಾಂಗ್ರೆಸ್ ಬಹುದೊಡ್ಡ ಸುಳ್ಳಿನ ಪಕ್ಷ; ಇಂದಿರಾ ಗಾಂಧಿ ಗರೀಬಿ ಹಠಾವೋ ಘೋಷಣೆಯೇ ಉತ್ತಮ ಉದಾಹರಣೆ: ಬೊಮ್ಮಾಯಿ ಟೀಕೆ

ಇವತ್ತು ಕರ್ನಾಟಕಕ್ಕೆ ಅನ್ಯಾಯ ಆಗಿದೆ. ಶಿಫಾರಸು ಮಾಡಿದ ಹಣ ಕೊಟ್ಟಿಲ್ಲ. ಒಟ್ಟು 11,490 ಕೋಟಿ ಶಿಫಾರಸು ಮಾಡಿದ್ದನ್ನು ಕೊಟ್ಟಿಲ್ಲ. ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಸ್ಪೀಚ್ ನಲ್ಲಿ ಅಪ್ಪರ್ ಭದ್ರಾ ಯೋಜನೆಗೆ 15 ಸಾವಿರ ಕೊಟಿ ಕೊಡ್ತೀನಿ ಅಂದಿದ್ದರು. ಇದಕ್ಕೆ ಆಗಿನ ಸಿಎಂ ಬೊಮ್ಮಾಯಿಯವರು ಅಭಿನಂದಿಸಿದ್ದರು. ಆದರೆ, ಈ ಹಣವೇ ಬಂದಿಲ್ಲ. ಅಮಿತ್ ಶಾ ರಾಜ್ಯಕ್ಕೆ ಅನುದಾನ ಕೊಡೋ ವಿಚಾರದಲ್ಲಿ ಸುಳ್ಳು ಹೇಳಿದ್ದರು. ನಿರ್ಮಲಾ ಸೀತರಾಮನ್ ಕೋಡ್ ಆಫ್ ಕಂಡಕ್ಟ್ ಅಡ್ಡ ಬಂತು ಅಂತಿದಾರೆ. ಸುಳ್ಳೇ ಅವರ ಮನೆ ದೇವರು. ನಿನ್ನೆ ಕೃಷ್ಣಬೈರೇಗೌಡರು ಹೇಳಿದ್ದೇ ಸತ್ಯ. ನಾವು ಬರಗಾಲದ ಪರಿಹಾರ ಬಂದಿಲ್ಲ ಅಂತ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದೇವೆ ಎಂದು ತಿಳಿಸಿದರು. 

ಉಡುಪಿ-ಚಿಕ್ಕಮಗಳೂರು  ಗೋಬ್ಯಾಕ್ ಶೋಭಾ ಅಂತ ಅಭಿಯಾನ ಮಾಡಿದ್ದರು. ಅವರನ್ನು ನೀವು ಒಪ್ಪಿಕೊಳ್ಳೋಕೆ ತಯಾರಿದ್ದೀರಾ? ನಾವೂ ಶೋಭಾ ಗೋಬ್ಯಾಕ್ ಅಂತ ವಾಪಾಸ್ ಕಳಿಸೋಣ ವಾಪಾಸ್ ಕಳುಹಿಸಿಕೊಡೋದೇನ್ರೀ? ನಾವು ಅವರನ್ನು ವಾಪಾಸ್ ಕಳುಹಿಸಿ ರಾಜೀವ್ ಗೌಡರನ್ನು ಗೆಲ್ಲಿಸೋಣ ಅಮಿತ್ ಶಾ ರಾಜ್ಯಕ್ಕೆ ಅನುದಾನ ಕೊಡೋ ವಿಚಾರದಲ್ಲಿ ಸುಳ್ಳು ಹೇಳಿದ್ದರು. ನಿರ್ಮಲಾ ಸೀತರಾಮನ್ ಕೋಡ್ ಆಫ್ ಕಂಡಕ್ಟ್ ಅಡ್ಡ ಬಂತು ಅಂತಿದಾರೆ. ಸುಳ್ಳೇ ಅವರ ಮನೆ ದೇವರು. ನಿನ್ನೆ ಕೃಷ್ಣಬೈರೇಗೌಡರು ಹೇಳಿದ್ದೇ ಸತ್ಯ ಎಂದರು.

ನಮ್ಮ ರಾಜ್ಯಕ್ಕೆ ಕೊಡಬೇಕಾದ ಬರ ಪರಿಹಾರವನ್ನು ಕೇಂದ್ರ ಸರ್ಕಾರ ಕೊಡದ ಹಿನ್ನೆಲೆಯಲ್ಲಿ ನಾವು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದೇವೆ. ನಮ್ಮ ರಾಜ್ಯದಿಂದ ಪ್ರಶಾಂತ್ ಭೂಷಣ್ ಅಡ್ವೊಕೇಟ್ ಆಗಿದ್ದಾರೆ. ನಾವು ಸಮರ್ಥವಾಗಿ ನ್ಯಾಯ ಮಂಡಿಸ್ತೇವೆ. ನಮಗೆ ನ್ಯಾಯ  ಸಿಗುವ ವಿಶ್ವಾಸ ಇದೆ. ಈ ಮೂಲಕ ಬರ ಪರಿಹಾರವೂ ನಗೆ ಸಿಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದೇನು? 
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕರ್ನಾಟಕಕ್ಕೆ ಜಿಎಸ್‌ಟಿ ಹಂಚಿಕೆ ಸೇರಿದಂತೆ ಇನ್ನಿತರ ವಿಚಾರದಲ್ಲಿ 1.85 ಲಕ್ಷ ಕೋಟಿ ರು. ನಷ್ಟವುಂಟಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಪ್ರತಿಪಾದಿಸಿದ್ದಾರೆ. ವರ್ಷದಿಂದ ವರ್ಷಕ್ಕೆ ರಾಜ್ಯದಿಂದ ಜಿಎಸ್ಟಿ ಸಂಗ್ರಹ ಶೇ. 14ರಷ್ಟು ಹೆಚ್ಚುತ್ತಿದೆ. ಆದರೆ, ರಾಜ್ಯಕ್ಕೆ ನೀಡುವ ಪಾಲು ಮಾತ್ರ ಕಡಿಮೆ ಯಾಗುತ್ತಿದೆ. ಜಿಎಸ್ಟಿ ಜಾರಿಯಾದಾಗಿನಿಂದ ರಾಜ್ಯಕ್ಕೆ ಜಿಎಸ್ಟಿ ಸಂಗ್ರಹದಿಂದ 4.92 ಲಕ್ಷ ಕೋಟಿ ರು. ಜಿಎಸ್ಟಿ ಆದಾಯ ಬರಬೇಕಿದ್ದು, 3.26 ಲಕ್ಷ ಕೋಟಿ ರು. ಮಾತ್ರ ಕೇಂದ್ರ ಸರ್ಕಾರ ಹಿಂದಿರುಗಿಸಿದೆ. 1.65 ಲಕ್ಷ ರು. ಜಿಎಸ್ಟಿ ಆದಾಯ ಖೋತಾದಲ್ಲಿ 1.06 ಲಕ್ಷ ಕೋಟಿ ರು.ಗಳನ್ನು ನಷ್ಟ ಪರಿಹಾರವಾಗಿ ನೀಡಿದೆ. ಉಳಿದ 59,274 ಕೋಟಿ ರು. ಜಿಎಸ್ಟಿ ಆದಾಯ ಖೋತಾ ಆಗುವಂತಾಗಿದೆ ಎಂದು ಹೇಳಿದರು.

ಬಳ್ಳಾರಿ ಮನೆಯಲ್ಲಿ 5 ಕೋಟಿ ರೂ. ಕ್ಯಾಷ್, 3 ಕೆಜಿ ಬಂಗಾರ, 103 ಕೆಜಿ ಬೆಳ್ಳಿ ಪತ್ತೆ: ಯಾವುದಕ್ಕೂ ದಾಖಲೆಗಳಿಲ್ಲ!

15ನೇ ಹಣಕಾಸು ಆಯೋಗವು ಕೇಂದ್ರದಿಂದ ನೀಡುವ ಅನುದಾನದಲ್ಲಿ ರಾಜ್ಯದ ಪಾಲನ್ನು 14ನೇ ಹಣಕಾಸು ಆಯೋಗಕ್ಕಿಂತ ಶೇ. 1.07ರಷ್ಟು ಕಡಿತ ಗೊಳಿಸಿದ್ದರಿಂದಲೂ ಆದಾಯ ಖೋತಾ ಆಗುವಂತಾಗಿದೆ. 2020-21ರಿಂದ 2025 -26ರವರೆಗೆ 62 ಸಾವಿರ ಕೋಟಿ ರು.ನಷ್ಟು ಆದಾಯ ನಷ್ಟವುಂಟಾಗುವಂತಾಗಿದೆ. ಅಲ್ಲದೆ, ಆಯೋಗವು 2020-21ನೇ ಸಾಲಿಗೆ 5,495 ಕೋಟಿ ರು. ವಿಶೇಷ ಅನುದಾನವನ್ನು ರಾಜ್ಯಕ್ಕೆ ನೀಡುವಂತೆ ಸೂಚಿಸಿತ್ತು. ಅದರ ಜತೆಗೆ ಆಯೋಗದ ಅಂತಿಮ ವರದಿಯಲ್ಲಿ 6,664 ಕೋಟಿ ರು. ವಿಶೇಷ ಅನುದಾನನೀಡುವಂತೆಯೂ ತಿಳಿಸಿತ್ತು. ಆದರೆ, ಅದ್ಯಾವುದನ್ನೂ ಕೇಂದ್ರ ಸರ್ಕಾರ ನೀಡಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದರು.

click me!