* ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಸಚಿವ ಕೆಎಸ್ ಈಶ್ವರಪ್ಪ
* ಶಿವಮೊಗ್ಗದಲ್ಲಿ ಸಚಿವ ಈಶ್ವರಪ್ಪ ಹೇಳಿಕೆ
* ಚುನಾವಣೆಯಲ್ಲಿ ಸೋತರು ಕೆಲ ಕಾಂಗ್ರೆಸ್ ನಾಯಕರಿಗೆ ಮುಖ್ಯಮಂತ್ರಿಯ ಕನಸು ಎಂದು ಈಶ್ವರಪ್ಪ
ಶಿವಮೊಗ್ಗ, (ಜೂನ್.20): ಕಾಂಗ್ರೆಸ್ ನಲ್ಲಿ ಎದ್ದಿರುವ ಮುಖ್ಯಮಂತ್ರಿ ಸ್ಥಾನದ ಚರ್ಚೆಗೆ ಸಚಿವ ಈಶ್ವರಪ್ಪ ಭರ್ಜರಿಯಾಗಿಯೇ ಟಾಂಗ್ ನೀಡಿದ್ದಾರೆ.
ಇಂದು (ಭಾನುವಾರ) ಶಿವಮೊಗ್ಗದಲ್ಲಿಂದು ಮಾತಮಾಡಿ ಅವರು, ಚುನಾವಣೆಯಲ್ಲಿ ಸೋತರು ಕೆಲ ಕಾಂಗ್ರೆಸ್ ನಾಯಕರಿಗೆ ಮುಖ್ಯಮಂತ್ರಿಯ ಕನಸು ಹೋಗಿಲ್ಲವೆಂದು ಹೆಸರು ಹೇಳದೇ ಪರೋಕ್ಷವಾಗಿ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟರು.
ಬಿಜೆಪಿ ಅಯ್ತು ಈಗ ಕಾಂಗ್ರೆಸ್ ಸರದಿ: 'ಕೈ' ಪಾಳಯದಲ್ಲಿ ‘ಸಿದ್ದು ಮುಂದಿನ ಸಿಎಂ’ ವಿವಾದ..! .
ಅವರು ಮೇಲ್ನೋಟಕ್ಕೆ ಡಿಕೆಶಿವಕುಮಾರ್ ಮತ್ತು ಸಿದ್ದರಾಮಯ್ಯನವರ ನಡುವೆ ಮುಖ್ಯಮಂತ್ರಿಗಳ ಸ್ಥಾನದ ನಡುವೆ ಪೈಪೋಟಿ ನಡೆಯುತ್ತಿದೆ.ನಾನು ಮುಖ್ಯಮಂತ್ರಿ ಎಂದು ಈ ಇಬ್ಬರು ನಾಯಕರು ಹೇಳುತ್ತಿಲ್ಲ. ಬದಲಿಗೆ ಯಾರೋ ಮೂರನೇ ವ್ಯಕ್ತಿಯ ಮೂಲಕ ಹೇಳಿಸಲಾಗುತ್ತಿದೆ ಎಂದರು.
ಜಮೀರ್ ಅಹ್ಮದ್ ಮೂಲಕ ಹೇಳಿಸಿ ಅದು ಅವರ ವೈಯುಕ್ತಿಕ ಅಭಿಪ್ರಾಯ ಎಂದು ಈ ನಾಯಕರು ಹೇಳಿಕೊಂಡು ಓಡಾಡುತ್ತಿದ್ದಾರೆ
ನಿಮ್ಮ ಅಭಿಪ್ರಾಯವೇನು ಎಂದು ಪ್ರಶ್ನಿಸಿದ ಸಚಿವ ಈಶ್ವರಪ್ಪ, ಚಾಮುಂಡೇಶ್ವರಿಯಲ್ಲಿ ನೀವು ಸೋತಿದ್ದೀರಿ. ಬಾದಾಮಿಯಲ್ಲಿ ಆಕಸ್ಮಿಕ ಗೆದ್ದಿದ್ದೀರಿ, ಈಗ ಚಾಮರಾಜನಗರದಲ್ಲಿ ಸ್ಪರ್ಧಿಸುವ ಮಾತನಾಡುತ್ತಿದ್ದೀರಿ. ನೀವು ಮೊದಲು ಶಾಸಕರಾಗಿ ಗೆಲ್ಲೋದನ್ನ ಕಲಿಯಿರಿ ಎಂದು ಹೇಳಿದರು.
ಲೋಕಸಭೆ, ವಿಧಾನಸಭೆ ಹಾಗೂ ಎಲ್ಲಾ ಚುನಾವಣೆಗಳಲ್ಲಿ ನೀವು ಸೋತಿದ್ದೀರಿ. ಆದರೂ ಸಿಎಂ ಆಗುವುದಾಗಿ ಕನಸು ಕಾಣುತ್ತೀದ್ದಿರಿ. ಮೊದಲು ಚುನಾವಣೆಯಲ್ಲಿ ಗೆದ್ದು ಬನ್ನಿ. ನಂತರ ಬಹುಮತ ಸಾಬೀತುಪಡಿಸಿ ಅಧಿಕಾರ ಹಿಡಿಯುವರಂತೆ ಎಂದು ಟಾಂಗ್ ಕೊಟ್ಟರು.
ಇನ್ನೂ ಎರಡು ವರ್ಷ ಬಿಜೆಪಿ ಅಧಿಕಾರದಲ್ಲಿರುತ್ತದೆ. ಸಣ್ಣಪುಟ್ಟ ಗೊಂದಲಗಳ ಬಿಜೆಪಿಯಲ್ಲಿತ್ತು, ಅದನ್ನ ಈಗ ನಿವಾರಿಸಲಾಗಿದೆ. ಮುಂದಿನ ಅಭಿವೃದ್ಧಿ ಮಾಡುವತ್ತ ಗಮನ ಹರಿಸಿ ಮತ್ತೆ ಪಕ್ಷವೇ ಎರಡನೇ ಬಾರಿಗೆ ಗೆದ್ದುಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.