Mekedatu Politics: ನಾನು ಚಿಕ್ಕವನು ಕುಮಾರಸ್ವಾಮಿಗೆ ಹೊಡೆಯಲು ಆಗುತ್ತಾ? ಹೆಚ್ಡಿಕೆ ಬಗ್ಗೆ ಡಿಕೆಶಿ ವ್ಯಂಗ್ಯ

By Suvarna News  |  First Published Feb 27, 2022, 10:19 AM IST

*  ಜೆಡಿಎಸ್‌ನವರು ನಮ್ಮ ಬ್ರದರ್ಸ್ ಕಣ್ರೀ, ನಾನು ಜೆಡಿಎಸ್‌, ಬಿಜೆಪಿ ಯವರಿಗೆ ಆಹ್ವಾನ ಮಾಡ್ತೇನೆ
*  ಪಾದಯಾತ್ರೆಯಲ್ಲಿ ಎಲ್ಲರೂ ಭಾಗವಹಿಸಲಿ
*  ನಾವೆಲ್ಲರೂ ಒಂದೇ ತಾಲೂಕು, ಜಿಲ್ಲೆಯವರಾಗಿದ್ದೇವೆ. ನಾನು ಜೈಲಿನಲ್ಲಿದ್ದಾಗ ಎಲ್ಲರೂ ಬಂದಿರಲಿಲ್ಲವಾ?: ಡಿಕೆಶಿ 
 


ರಾಮನಗರ(ಫೆ.27): ಜೆಡಿಎಸ್‌ನವರು ನಮ್ಮ ಬ್ರದರ್ಸ್ ಕಣ್ರೀ, ನಾನು ಜೆಡಿಎಸ್‌, ಬಿಜೆಪಿ ಯವರಿಗೆ ಆಹ್ವಾನ ಮಾಡ್ತೇನೆ. ಪಾದಯಾತ್ರೆಯಲ್ಲಿ ಎಲ್ಲರೂ ಭಾಗವಹಿಸಲಿ. ನಾವೆಲ್ಲರೂ ಒಂದೇ ತಾಲೂಕು, ಜಿಲ್ಲೆಯವರಾಗಿದ್ದೇವೆ. ನಾನು ಜೈಲಿನಲ್ಲಿದ್ದಾಗ ಎಲ್ಲರೂ ಬಂದಿರಲಿಲ್ಲವಾ? ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌(DK Shivakumar)  ಪ್ರಶ್ನಿಸಿದ್ದಾರೆ. 

ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಅವರು ಬೇರೆ ಪಕ್ಷದಲ್ಲಿ ಇರಬಹುದು ಅಷ್ಟೇ, ಆದರೆ ಅವರು ಸಹ ನಮ್ಮವರೇ. ನಾನು ಕುಮಾರಸ್ವಾಮಿಯವರ ಕೈಕೆಳಗೆ ಕೆಲಸ ಮಾಡಿದ್ದೇನೆ. ದೊಡ್ಡವರು ಸಾಮಾನ್ಯವಾಗಿ ಚಿಕ್ಕವರಿಗೆ ಹೊಡೆಯುತ್ತಾರೆ. ನಾನು ಚಿಕ್ಕವನು ಅವರಿಗೆ ಹೊಡೆಯಲು ಆಗುತ್ತಾ? ಅಂತ ಹೇಳುವ ಮೂಲಕ ಹೆಚ್ಡಿಕೆ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಗಿ ಪ್ರತ್ಯುತ್ತರ ನೀಡಿದ್ದಾರೆ. 

Latest Videos

undefined

HDK VS Congress ಕಾಂಗ್ರೆಸ್ ಜೊತೆ ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಅಲ್ಲ, ಕ್ಲರ್ಕ್ ಆಗಿದ್ದೆ, ಹೆಚ್‌ಡಿ ಕುಮಾರಸ್ವಾಮಿ!

ಪಾದಯಾತ್ರೆ ಹೆಸರಲ್ಲಿ ಬಲೂನ್‌ ಕಟ್ಟಿ ಜಾತ್ರೆ ಮಾಡ್ತಿದೆ ಕಾಂಗ್ರೆಸ್‌: ಎಚ್‌ಡಿಕೆ ಗರಂ

ಬೆಂಗಳೂರು: ಮೇಕೆದಾಟು ಯೋಜನೆಗೆ ಕಾಂಗ್ರೆಸ್‌ ನಾಯಕರು ಪಾದಯಾತ್ರೆ ಮಾಡುತ್ತಿರುವುದು ಬಹಳ ಸಂತೋಷದ ವಿಚಾರವಾಗಿದೆ ಅಂತ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.

ಪಾದಯಾತ್ರೆ ಹೆಸರಿನಲ್ಲಿ ರಾಮನಗರದಲ್ಲಿ ಬಲೂನ್‌ ಕಟ್ಟಿ, ನಾಯಕರ ದೊಡ್ಡ ದೊಡ್ಡ ಕಟೌಟ್‌ಗಳನ್ನ ಹಾಕಿದ್ದಾರೆ. ಬಲೂಟ್‌ ಕಟ್ಟಿಕೊಂಡು ಯಾವುದೋ ಜಾತ್ರೆ ಮಾಡುತ್ತಿದ್ದಾರೆ. ಜಾತ್ರೆ, ಊರ ಹಬ್ಬಗಳಲ್ಲಿ ಬಲೂನ್‌ ಹಾರಿಸ್ತಾರೆ. ಇವರು ಪಾದಯಾತ್ರೆ ಮಾಡಿ ನೀರು ತರಲು ಹೋರಾಟ ಮಾಡೋರು ರಾಮನಗರದಲ್ಲಿ ಇವರ ನಾಯಕರ ಫೋಟೋ ಹಾಕ್ಕೊಂಡು ಬಲೂನ್ ಹಾರಸ್ಕೊಂಡು ಕೂತಿದ್ದಾರೆ. ಇದು ನೀರು ತರತಕ್ಕಂತ ಹೋರಾಟಾನಾ?.ಇದೆಲ್ಲ ನೋಡಿದಾಗ ಇದು ನೀರು ತರತಕ್ಕಂತ ಪಾದಯಾತ್ರೆ ಅಲ್ಲ, ಇದು ಅವರ ಪಕ್ಷದ ಪ್ರಚಾರಕ್ಕೆ ಮೇಕೆದಾಟು ಹೆಸರು ಉಪಯೋಗ ಮಾಡಿಕೊಳ್ಳುತ್ತಿದ್ದಾರೆ ಅಂತ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. 

ಡಿಕೆಶಿ ಬ್ರದರ್ಸ್‌ ಮಣ್ಣಿನ ಮಕ್ಕಳಲ್ಲ, ಕಲ್ಲಿನ ಮಕ್ಕಳು: 

ಮೈಸೂರು: ಒಕ್ಕಲಿಗ ಮತಗಳ ಬುಟ್ಟಿಗೆ ಕೈ ಹಾಕಿದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕುತ್ತಿಗೆಗೆ ಬರುತ್ತದೆ ಎಂದು ಎಚ್ಚರಿಕೆ ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ(HD Kumaraswamy), ದೇವೆಗೌಡರು(HD Devegowda) ಬದುಕಿರುವವರೆಗೂ ಈ ಸಮಾಜ ಅವರನ್ನು ಕೈಬಿಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.  

ಫೆ.23 ರಂದು ನಗರದಲ್ಲಿ ಮಾತನಾಡಿದ್ದ ಅವರು, ಕಾಂಗ್ರೆಸ್‌(Congress) ಸೇರುವವರ ಪಟ್ಟಿ ದೊಡ್ಡದಿದೆ ಎಂಬ ಡಿ.ಕೆ.ಶಿವಕುಮಾರ್‌ ಕೇಳಿಕೆಗೆ ತಿರುಗೇಟು ನೀಡಿರುವ ಅವರು, ಡಿ.ಕೆ.ಶಿವಕುಮಾರ್‌ ಒಕ್ಕಲಿಗ ಶಾಸಕರನ್ನಾದರೂ ಸೆಳೆಯಲಿ, ಇನ್ಯಾರನ್ನಾದರೂ ಸೆಳೆಯಲಿ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ದೇವೆಗೌಡರು ಇರೋವವರೆಗೂ ಯಾರೂ ಏನು ಮಾಡಲು ಸಾಧ್ಯವಿಲ್ಲ ಎಂದರು.

Ramanagara Politics: ನನ್ನನ್ನು ಅವರ ದುಡ್ಡು ಖರ್ಚು ಮಾಡಿ MLA ಮಾಡ್ಲಿಲ್ಲ: HDK ವಿರುದ್ಧ ರಾಜು ವಾಗ್ದಾಳಿ

ಒಕ್ಕಲಿಗ ಶಾಸಕರಿಗೆ ಗಾಳ ಹಾಕಿರೋದು ಅವರ ಕುತ್ತಿಗೆಗೆ ಬರಲಿದೆ. ಈ ಸಂಬಂಧ ನಾನು ಯಾವುದೇ ರಿವರ್ಸ್‌ ಆಪರೇಷನ್‌ ಮಾಡಲ್ಲ. ನನ್ನ ಸಂಪರ್ಕದಲ್ಲಿ ಯಾವ ಕಾಂಗ್ರೆಸ್‌ ಶಾಸಕರು, ಮುಖಂಡರೂ ಇಲ್ಲ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ನ ಬೆಳವಣಿಗೆ ನೋಡಿ ಆ ಪಕ್ಷದವರೇ ಬರುತ್ತಾರೆ ಎಂದು ಅವರು ಹೇಳಿದ್ದರು. 

ಡಿಕೆಶಿ ಬ್ರದರ್ಸ್‌ ಮಣ್ಣಿನ ಮಕ್ಕಳಲ್ಲ, ಕಲ್ಲಿನ ಮಕ್ಕಳು

ಡಿ.ಕೆ. ಸಹೋದರರು(DK Brothers) ಮಣ್ಣಿನ ಮಕ್ಕಳಲ್ಲ, ಕಲ್ಲಿನ ಮಕ್ಕಳು ಎಂದು ಎಚ್‌.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ನಾವೆಂದು ಮಣ್ಣಿನ ಮಕ್ಕಳು ಅಂತ ಹೇಳಿಕೊಂಡಿಲ್ಲ. ನೀವೆ ಮಣ್ಣಿನ ಮಕ್ಕಳೆಂದು ಬೋರ್ಡ್‌ ಹಾಕಿಕೊಂಡು ಹೋಗಿ ಎಂದು ಅವರು ಡಿಕೆ ಸಹೋದರರನ್ನು ಟೀಕಿಸಿದರು. ಮೇಕೆದಾಟು(Mekedatu) ಎರಡನೇ ಹಂತದ ಪಾದಯಾತ್ರೆ(Padayatra) ಈಗ ಯಾಕೆ? ನೀವೆ ಮಣ್ಣಿನ ಮಕ್ಕಳೆಂದು ಬೋರ್ಡ್‌ ಹಾಕೊಂಡು ಹೋಗಿ, ನಾವೆಂದು ಮಣ್ಣಿನಮಕ್ಕಳು ಅಂತ ಹೇಳಿಕೊಂಡಿಲ್ಲ. ನಿಮಗೆ ಕಲ್ಲಿನ ಮಕ್ಕಳು ಅಂತ ಕರೆಯುತ್ತಾರೆ. ಈಗೇನೋ ಮಣ್ಣಿನ ಮಕ್ಕಳು ಅಂತ ಬಿಂಬಿಸಿಕೊಳ್ಳಲು ಹೋಗುತ್ತಿದ್ದೀರಾ? ಬೋರ್ಡ್‌ ಹಾಕಿಕೊಳ್ಳಿ ಎಂದು ತಿರುಗೇಟು ನೀಡಿದ್ದರು. 

 

click me!