ಅಂತೂ ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದಾಯ್ತಲ್ವ?: ಡಿಕೆಶಿ

By Govindaraj SFirst Published Aug 18, 2022, 4:45 AM IST
Highlights

‘ಬೇರೆ ಪಕ್ಷದ ನಾಯಕರು ನಮ್ಮ ಪಕ್ಷದ ಬಗ್ಗೆ ಮಾತನಾಡುತ್ತಿರುವುದು ಖುಷಿಯ ವಿಚಾರ. ಮುಂದೆ ಕಾಂಗ್ರೆಸ್‌ ಸರ್ಕಾರ ಬರುತ್ತೆ ಎಂದು ಅರ್ಥ ಆಯ್ತಲ್ಲ,’. -‘ಇದು ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿ’ ಎಂಬ ಸಚಿವ ಬಿ.ಶ್ರೀರಾಮುಲು ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನೀಡಿರುವ ಪ್ರತಿಕ್ರಿಯೆ. 

ನವದೆಹಲಿ (ಆ.18): ‘ಬೇರೆ ಪಕ್ಷದ ನಾಯಕರು ನಮ್ಮ ಪಕ್ಷದ ಬಗ್ಗೆ ಮಾತನಾಡುತ್ತಿರುವುದು ಖುಷಿಯ ವಿಚಾರ. ಮುಂದೆ ಕಾಂಗ್ರೆಸ್‌ ಸರ್ಕಾರ ಬರುತ್ತೆ ಎಂದು ಅರ್ಥ ಆಯ್ತಲ್ಲ,’. -‘ಇದು ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿ’ ಎಂಬ ಸಚಿವ ಬಿ.ಶ್ರೀರಾಮುಲು ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನೀಡಿರುವ ಪ್ರತಿಕ್ರಿಯೆ. 

ಸುದ್ದಿಗಾರರ ಜತೆ ಮಾತನಾಡಿದ ಅವರು, ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತೆ ಎಂದಾಯ್ತಲ್ವ? ಇದು ಸಂತೋಷ ಅಲ್ವ? ಬೇರೆ ಪಕ್ಷದ ನಾಯಕರು ನಮ್ಮ ಪಕ್ಷದ ಬಗ್ಗೆ ಮಾತನಾಡುತ್ತಿದ್ದಾರೆ ಎಂಬುದು ಖುಷಿ ವಿಚಾರ. ಮುಂದೆ ಕಾಂಗ್ರೆಸ್‌ ಸರ್ಕಾರ ಬರುತ್ತೆ ಎಂದು ಅರ್ಥ ಆಯ್ತಲ್ಲ. ಶ್ರೀರಾಮುಲು ಮತ್ತು ಮಾಧುಸ್ವಾಮಿಯನ್ನ್ನು ಅಭಿನಂದಿಸುತ್ತೇನೆ ಎಂದರು.  ಇನ್ನು ನಾವು ಒಳಗೊಳಗೆ ಏನೇನೋ ಮಾಡಿಕೊಂಡು ಚುನಾವಣೆ ಗೆಲ್ಲುತ್ತೇವೆ ಎಂಬ ಶ್ರೀರಾಮುಲು ಹೇಳಿಕೆ ಬಗ್ಗೆ, ಶ್ರೀರಾಮುಲು ಮತ್ತು ಸಿದ್ದರಾಮಯ್ಯ ಒಳ ಒಪ್ಪಂದ ಬಗ್ಗೆ ನನಗೆ ಗೊತ್ತಿಲ್ಲ. ನನಗೆ ಒಳ ಒಪ್ಪಂದದ ಅನುಭವ ಇಲ್ಲ ಎಂದಷ್ಟೇ ಹೇಳಿದರು.

ಆರೆಸ್ಸೆಸ್‌ ರಾಷ್ಟ್ರಧ್ವಜ ಹಾರಿಸಿದ ಸುದ್ದಿ ಕೇಳಿ ಸಂತೋಷವಾಯಿತು: ಡಿಕೆಶಿ

ಸಂಚಲಕ್ಕೀಡು ಮಾಡಿದ ಶ್ರೀರಾಮುಲು ಹೇಳಿಕೆ: ‘ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿ’ ಎಂಬ ಸಚಿವ ಬಿ.ಶ್ರೀರಾಮುಲು ಹೇಳಿಕೆ ರಾಜ್ಯದ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಸಂಚಲನ ಮೂಡಿಸಿದೆ. ನಿರ್ದಿಷ್ಟಸಮುದಾಯವನ್ನು ಓಲೈಸಲು ಈ ರೀತಿಯ ಹೇಳಿಕೆಗಳನ್ನು ನೀಡುವುದು ಎಷ್ಟುಸರಿ? ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಜೊತೆ ಗೆಲುವಿಗಾಗಿ ಒಳ ಒಪ್ಪಂದ ಮಾಡಿಕೊಂಡಿದ್ದನ್ನು ಬಹಿರಂಗವಾಗಿಯೇ ಸಚಿವ ಶ್ರೀರಾಮುಲು ಹೇಳಿದ್ದು, ಇದು ಪಕ್ಷದ ವರ್ಚಸ್ಸು ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಮೇಲೆ ಬೀರುವ ಪರಿಣಾಮದ ಕುರಿತು ಚರ್ಚೆ ಆರಂಭವಾಗಿದೆ. 

ಸಚಿವರ ಹೇಳಿಕೆ ರಾಜ್ಯದಲ್ಲೆಡೆ ಸದ್ದು, ಮಾಡುತ್ತಿದ್ದಂತೆಯೇ ಬಿಜೆಪಿ ರಾಜ್ಯಾಧ್ಯಕ್ಷರು ಸಚಿವ ಶ್ರೀರಾಮುಲು ಅವರನ್ನು ಬೆಂಗಳೂರಿಗೆ ಕರೆಸಿಕೊಂಡು ಪಕ್ಷಕ್ಕೆ ಈ ಕುರಿತಂತೆ ಚರ್ಚಿಸಿದ್ದಾರೆ. ಇದು ಚುನಾವಣೆ ವರ್ಷವಾಗಿದ್ದು, ಈ ರೀತಿಯ ಹೇಳಿಕೆಗಳು ಜನರ ಮೇಲೆ ಬೀರುವ ಪರಿಣಾಮದ ಕುರಿತು ತಿಳಿಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಹಾಡಿ ಹೊಗಳಿದರೂ ಪ್ರಯೋಜನವಿಲ್ಲ?: ನಿರ್ದಿಷ್ಟಸಮುದಾಯದ ವೋಟ್‌ ಬ್ಯಾಂಕ್‌ ಬಾಚಿಕೊಳ್ಳಲು ಸಚಿವ ಶ್ರೀರಾಮುಲು ಹಾಲುಮತದ ಸಮುದಾಯದ ಪ್ರಭಾವಿ ನಾಯಕ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ್ದಾರೆ. ಆದರೆ, ಇದು ಹೆಚ್ಚು ಪ್ರಯೋಜನವಾಗುವುದಿಲ್ಲ. ಈ ಹಿಂದಿನಿಂದಲೂ ಪದೇ ಪದೆ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಬಂದಿರುವ ಶ್ರೀರಾಮುಲು, ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಹಾಲುಮತ ಸಮುದಾಯವನ್ನು ಓಲೈಸಲು ಸಿದ್ದರಾಮಯ್ಯ ಹಾಗೂ ನಾನು ದೋಸ್ತರು ಎಂದು ಹೇಳಿಕೊಂಡರೆ ಕುರುಬ ಸಮುದಾಯ ಎಷ್ಟರ ಮಟ್ಟಿಗೆ ಇವರ ಮಾತನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತದೆ ಎಂಬ ಪ್ರಶ್ನೆ ಎದ್ದಿದ್ದು, ಶ್ರೀರಾಮುಲು ನೀಡಿರುವ ಹೇಳಿಕೆ ಜಿಲ್ಲೆಯ ಎಲ್ಲೆಡೆ ಸದ್ಯ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಚುನಾವಣೆ ಹತ್ತಿರ ಬರುತ್ತಿದೆ ಎಂಬ ಕಾರಣಕ್ಕಾಗಿ ತಮ್ಮ ವೈಯಕ್ತಿಕ ಹಿತ ಸಾಧನೆಗೆ ಪ್ರತಿಪಕ್ಷದ ನಾಯಕನನ್ನು ಹಾಡಿ ಹೊಗಳಿದರೆ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರ ಗತಿ ಏನು? ಪಕ್ಷದ ನಾಯಕರು ಹೇಗೆ ಇಂತಹ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳಬೇಕು ಹೇಗೆ ಎಂಬ ಚಿಂತೆ ಕಾಡಿದೆ.

ಡಿಕೆಶಿ ಮಾತಿಗೂ ಕ್ಯಾರೇ ಎನ್ನದ ಕಾಂಗ್ರೆಸ್ಸಿಗರು: ಮತ್ತೆ ಭುಗಿಲೆದ್ದ ಗುಂಪುಗಾರಿಕೆ

ಒಳ ಒಪ್ಪಂದ ಮಾಡಿಕೊಂಡು ರಾಜಕೀಯ ಮಾಡುವ ಜಾಯಮಾನ ಸಿದ್ದರಾಮಯ್ಯನವರದ್ದಲ್ಲ. ಅವರ ತೇಜೋವಧೆ ಮಾಡುವ ಹೇಳಿಕೆಯನ್ನು ಸಚಿವ ಶ್ರೀರಾಮುಲು ಅವರು ನೀಡಿದ್ದಾರೆ. ಇದು ಅತ್ಯಂತ ಬೇಸರ ತಂದಿದೆ. ನಾನು ಸಹ ಸಮಾರಂಭದಲ್ಲಿದ್ದೆ. ಅಲ್ಲಿಯೇ ನಾನು ಅವರ ಹೇಳಿಕೆಯನ್ನು ಅಲ್ಲಗಳೆದೆ. ಎದ್ದರಾಮಯ್ಯ, ಬಿದ್ದರಾಮಯ್ಯ ಎಂದು ಹೇಳಿಕೆ ನೀಡುತ್ತಿದ್ದ ಶ್ರೀರಾಮುಲು ಅವರು ಇದ್ದಕ್ಕಿದ್ದಂತೆಯೇ ಹಾಡಿ ಹೊಗಳಿದ್ದಾರೆ. ಈ ರೀತಿಯ ಹೇಳಿಕೆಯ ಹಿಂದಿನ ಉದ್ದೇಶ ಎಲ್ಲರಿಗೂ ಅರ್ಥವಾಗುತ್ತದೆ.
-ಬಿ.ನಾಗೇಂದ್ರ, ಶಾಸಕರು, ಬಳ್ಳಾರಿ ಗ್ರಾಮೀಣ ಕ್ಷೇತ್ರ.

click me!