ಜೈಲಿನಿಂದ ಬಂದ ಬಳಿಕ ಮೊದಲ ಬಾರಿಗೆ ಗಡ್ಡ ತೆಗೆಸಿದ ಡಿಕೆಶಿ, ಕಾರ್ಯ ಯಶಸ್ವಿ ಆಯ್ತಾ?

Published : Jul 20, 2021, 03:19 PM IST
ಜೈಲಿನಿಂದ ಬಂದ ಬಳಿಕ ಮೊದಲ ಬಾರಿಗೆ ಗಡ್ಡ ತೆಗೆಸಿದ ಡಿಕೆಶಿ, ಕಾರ್ಯ ಯಶಸ್ವಿ ಆಯ್ತಾ?

ಸಾರಾಂಶ

* ಜೈಲಿಗೆ ಹೋಗಿ ಬಂದ ಬಳಿಕ ಮೊದಲ ಬಾರಿಗೆ ಗಡ್ಡ ತೆಗೆಸಿದ ಡಿ.ಕೆ ಶಿವಕುಮಾರ್​ * ಜೈಲಿಗೆ ಹೋಗಿ ಬಂದಾಗಿನಿಂದ ಗಡ್ಡ ಬಿಟ್ಟಿದ್ದ ಡಿಕೆಶಿ * ಗಡ್ಡ ಬಿಟ್ಟಿರೋದರ ಹಿಂದೆ ಒಂದು ಕಾರಣವಿದೆ ಎಂದು ಹೇಳಿದ್ದ ಡಿಕೆಶಿ * ಡಿಕೆಶಿ ಗಡ್ಡದ ವಿಚಾರ ಎಲ್ಲರ ಕುತೂಹಲ ಮೂಡಿಸಿದ್ದರು

ಬೆಂಗಳೂರು, (ಜು.20): ಅಕ್ರಮ ಹಣ ವರ್ಗಾವಣೆ ಪ್ರಕರಣವೊಂದರಲ್ಲಿ ತಿಹಾರ್​​ ಜೈಲಿಗೆ ಹೋಗಿ ಬಂದ ಬಳಿಕ ಮೊದಲ ಬಾರಿಗೆ ಈಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ತಮ್ಮ ಗಡ್ಡ ತೆಗೆಸಿದ್ದಾರೆ. 

2019 ಅಕ್ಟೋಬರ್ ನಿಂದ  ಬಿಟ್ಟಿದ್ದ ಗಡ್ಡವನ್ನ ತೆಗೆಸಿರುವುದು ಕುತೂಹಲ ಮೂಡಿಸಿದೆ. ಯಾಕಂದ್ರೆ ಈ ಹಿಂದೆ ನಾನು ಗಡ್ಡ ಬಿಟ್ಟಿರುವುದರ ಹಿಂದೆ ರಹಸ್ಯ ಇದೆ. ನಾನು ಅಂದುಕೊಂಡ ಕಾರ್ಯ ನೆರವೇರಿದಾಗ ಗಡ್ಡ ತೆಗೆಸುವೆ ಎಂದಿದ್ದರು.

ಸಿದ್ದರಾಮಯ್ಯರನ್ನ ಮನೆಗೆ ಆಹ್ವಾನಿಸಿದ ಡಿಕೆಶಿ : ಕೋಲ್ಡ್ ವಾರ್ ತಣಿಸುವ ಯತ್ನ..?

ಇದೀಗ  ಕಾಂಗ್ರೆಸ್​ ಹೈಕಮಾಂಡ್​ ರಾಹುಲ್​​ ಗಾಂಧಿಯವರನ್ನು ಭೇಟಿ ಮಾಡಲು ಡಿ.ಕೆ ಶಿವಕುಮಾರ್​​​ ಗಡ್ಡ ತೆಗೆಸಿದ್ದಾರೆ. ತಾವು ಅಂದುಕೊಂಡ ಕಾರ್ಯವೂ ಯಶಸ್ವಿಯಾದ್ದರಿಂದ ರಾಮನಗರದ ಬಂಡೆ ಗಡ್ಡ ಶೇವ್​​ ಮಾಡಿರಬಹುದು ಎಂದು ಹೇಳಲಾಗುತ್ತಿದೆ. 

ಹಾಗಾದ್ರೆ, ರಾಜಕೀಯ ವಿಚಾರದಲ್ಲಿ ಡಿಕೆ ಶಿವಕುಮಾರ್ ಅವರು ಅಂದುಕೊಂಡಿದ್ದು ಈಡೇರಿದ್ಯಾ..? ಅದಕ್ಕೆ ಅವರು ಗಡ್ಡ ತೆಗೆಸುವ ಮೂಲಕ ಹರಕೆ ತೀರಿಸಿದ್ರಾ? ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಾಮಾಜಿಕ ಭದ್ರತಾ ಪಿಂಚಣಿಯಲ್ಲಿ 24.55 ಲಕ್ಷ ಅನುಮಾನಾಸ್ಪದ ಫಲಾನುಭವಿಗಳು: ಕೃಷ್ಣ ಬೈರೇಗೌಡ
ಹಂತ ಹಂತವಾಗಿ 1.88 ಲಕ್ಷ ಸರ್ಕಾರಿ ಹುದ್ದೆ ಭರ್ತಿ : ಸಿದ್ದರಾಮಯ್ಯ