ಸದಾನಂದ ಗೌಡರು ಪಕ್ಷದ ವಿರುದ್ಧ ಮಾತನಾಡಿಲ್ಲ. ತಮ್ಮ ಅಭಿಪ್ರಾಯ ಹೇಳುವಾಗ ನಮ್ಮನ್ನೆಲ್ಲಾ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು ಎಂದಿದ್ದಾರೆ. ಅವರು ನಮ್ಮ ಬಿಜೆಪಿಯ ಹಿರಿಯ ನಾಯಕರು. ಬಿಜೆಪಿ ರಾಜ್ಯಾಧ್ಯಕ್ಷ, ಮುಖ್ಯಮಂತ್ರಿ ಹುದ್ದೆಯನ್ನು ನಿಭಾಯಿಸಿ ಸಂಸದರಾಗಿ, ಕೇಂದ್ರ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರ ಹೇಳಿಕೆಗೆ ತಪ್ಪು ಕಲ್ಪಿಸುವುದು ಬೇಡ ಎಂದ ಕೋಟ ಶ್ರೀನಿವಾಸ ಪೂಜಾರಿ
ಕುಂದಾಪುರ(ಅ.10): ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ತಪ್ಪು, ಅನ್ಯಾಯ, ಭ್ರಷ್ಟಾಚಾರಗಳನ್ನು ನಡೆಸಿದ್ದರೆ ಲೋಕಾಯುಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಿ, ಅದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಪಕ್ಷದ ವತಿಯಿಂದ ತನಿಖೆಗೆ ಆಗ್ರಹ ಮಾಡುವ ಅವಶ್ಯಕತೆಗಳು ಅಧಿಕಾರದಲ್ಲಿದ್ದವರಿಗೆ ಹೆಚ್ಚಿಲ್ಲ ಎಂದು ಮಾಜಿ ಸಚಿವ ವಿಧಾನ ಪರಿಚತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಸೋಮವಾರ ತಾಲೂಕಿನ ಮೂಡ್ಲಕಟ್ಟೆ ರೈಲ್ವೇ ನಿಲ್ದಾಣದ ಬಳಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಅವರು, ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಗುಜರಿ ವ್ಯಾಪಾರದಲ್ಲಿ ಭ್ರಷ್ಟಾಚಾರ ನಡೆದಿದ್ದರೆ ಖಂಡಿತವಾಗಿಯೂ ತನಿಖೆ ಮಾಡಬಹುದು. ನಿರ್ದಿಷ್ಟ ವಿಚಾರದ ಕುರಿತು ಚರ್ಚೆ ನಡೆಯಲಿ. ಏನೇ ಆದರೂ ಗುಜರಿ ವಹಿವಾಟಿನಲ್ಲಿ ತಪ್ಪುಗಳು ನಡೆದರೆ ತನಿಖೆ ಮಾಡಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
undefined
ಯೋಗೇಶ್ವರ್ ಫೀಲ್ಡ್‌ಗೆ ಬರಲಿ ರಾಜಕೀಯ ತೋರಿಸ್ತೇನೆ: ಬಾಲಕೃಷ್ಣ ಸವಾಲ್
ಸರ್ಕಾರದ ವಿರುದ್ದ ಪುನೀತ್ ಕೆರೆಹಳ್ಳಿ ಅಮರಣಾಂತ ಉಪವಾಸ ನಡೆಸುತ್ತಿರುವ ಸಂದರ್ಭ ಅವರನ್ನು ಕಡ್ಡಾಯವಾಗಿ ಸರ್ಕಾರ ಆಸ್ಪತ್ರೆಗೆ ದಾಖಲು ಮಾಡುವ ಕೆಲಸ ಮಾಡಿದೆ. ವಿನಃ ಕಾರಣ ತನ್ನ ಮೇಲೆ ರಾಜ್ಯ ಸರ್ಕಾರ ಪ್ರಕರಣ ದಾಖಲು ಮಾಡಿದೆ ಎನ್ನುವುದು ಅವರ ವಾದ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿದ್ದ ಅವರನ್ನು ಭೇಟಿಯಾಗಿ ಮಾತನಾಡಿಸಿದ್ದೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಸರ್ಕಾರ ಬಂದಾಗ ನಾಗರಿಕರ ಹಕ್ಕುಗಳನ್ನು ಧಮನ ಮಾಡಬಾರದು ಎಂದು ಗೃಹಮಂತ್ರಿಗಳಿಗೆ ಹೇಳಿದ್ದೇನೆ ಎಂದರು.
ಸದಾನಂದ ಗೌಡರು ಪಕ್ಷದ ವಿರುದ್ಧ ಮಾತನಾಡಿಲ್ಲ. ತಮ್ಮ ಅಭಿಪ್ರಾಯ ಹೇಳುವಾಗ ನಮ್ಮನ್ನೆಲ್ಲಾ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು ಎಂದಿದ್ದಾರೆ. ಅವರು ನಮ್ಮ ಬಿಜೆಪಿಯ ಹಿರಿಯ ನಾಯಕರು. ಬಿಜೆಪಿ ರಾಜ್ಯಾಧ್ಯಕ್ಷ, ಮುಖ್ಯಮಂತ್ರಿ ಹುದ್ದೆಯನ್ನು ನಿಭಾಯಿಸಿ ಸಂಸದರಾಗಿ, ಕೇಂದ್ರ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರ ಹೇಳಿಕೆಗೆ ತಪ್ಪು ಕಲ್ಪಿಸುವುದು ಬೇಡ ಎಂದರು.
ಮುಗುಳ್ನಕ್ಕ ಕೋಟ!
ಜೆಡಿಎಸ್‍ಗೆ ವಿರೋಧ ಪಕ್ಷದ ನಾಯಕನ ಜವಾಬ್ದಾರಿಯ ಕುರಿತು ಹರಿದಾಡುತ್ತಿರುವ ಸುದ್ದಿಗೆ ಉತ್ತರಿಸಿದ ಕೋಟ, ಕುಮಾರಸ್ವಾಮಿಯವರು ವಿರೋಧ ಪಕ್ಷದ ನಾಯಕರಾಗುತ್ತಿರುವುದು ನನಗೆ ಗೊತ್ತಿಲ್ಲ. ನಿಮಗ್ಯಾರು ಹೇಳಿದ್ದಾರೊ ಅವರನ್ನೇ ಕೇಳಿ ಎಂದು ಮುಗುಳ್ನಕ್ಕರು.