9 ವರ್ಷಗಳಿಂದ ಕೊಡಗು ಜಿಲ್ಲೆ ಸಂಪರ್ಕ: ಯದುವೀರ್‌

By Kannadaprabha News  |  First Published Mar 16, 2024, 11:30 PM IST

ನಾಡಿನ ಜನತೆ ಮತದಾರರ ಪ್ರೀತಿ ಒಲವು ವಿಶ್ವಾಸ ನನ್ನ ಮೇಲಿದೆ. ಈ ಬಾರಿ ಬಿಜೆಪಿ ಹೈಕಮಾಂಡ್ ತನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಕ್ಷೇತ್ರದಿಂದ ಅವಕಾಶ ಕಲ್ಪಿಸಿದೆ, ಜನರ ಬೆಂಬಲ ದೊರೆಯಲಿದೆ ಎಂದು ಅವರು. ಜಿಲ್ಲೆಯಲ್ಲಿ ನದಿ ಸಂರಕ್ಷಣೆ , ವನ್ಯಜೀವಿ ಮಾನವ ಸಂಘರ್ಷ ಈ ಬಗ್ಗೆ ತಜ್ಞರ ಸಲಹೆಯೊಂದಿಗೆ ಅಭಿಪ್ರಾಯ ಪಡೆದು ಅಗತ್ಯವಿರುವ ಯೋಜನೆ ರೂಪಿಸುವ ಭರವಸೆ ವ್ಯಕ್ತಪಡಿಸಿದ ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್


ಕುಶಾಲನಗರ(ಮಾ.16):  ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ಕಾಳಜಿ ಇಟ್ಟುಕೊಂಡು ಹಲವು ಯೋಜನೆ ರೂಪಿಸುವ ಆಶಯ ಇದೆ ಎಂದು ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.

ಮಡಿಕೇರಿ ತೆರಳುವ ಮಾರ್ಗದಲ್ಲಿ ಕುಶಾಲನಗರ ಗಡಿಭಾಗದ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 9 ವರ್ಷಗಳಿಂದ ತನಗೆ ಕ್ಷೇತ್ರದ, ಅದರಲ್ಲಿಯೂ ಕೊಡಗು ಜಿಲ್ಲೆಯ ಸಂಪರ್ಕ ಇರುವುದಾಗಿ ಹೇಳಿದರು.

Latest Videos

undefined

ಟೀಕೆ, ಸವಾಲುಗಳನ್ನು ಎದುರಿಸಿಯೇ ರಾಜಕಾರಣ ಮಾಡುವೆ: ಬಿಜೆಪಿ ಅಭ್ಯರ್ಥಿ ಯದುವೀರ್

ನಾಡಿನ ಜನತೆ ಮತದಾರರ ಪ್ರೀತಿ ಒಲವು ವಿಶ್ವಾಸ ನನ್ನ ಮೇಲಿದೆ. ಈ ಬಾರಿ ಬಿಜೆಪಿ ಹೈಕಮಾಂಡ್ ತನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಕ್ಷೇತ್ರದಿಂದ ಅವಕಾಶ ಕಲ್ಪಿಸಿದೆ, ಜನರ ಬೆಂಬಲ ದೊರೆಯಲಿದೆ ಎಂದು ಅವರು. ಜಿಲ್ಲೆಯಲ್ಲಿ ನದಿ ಸಂರಕ್ಷಣೆ , ವನ್ಯಜೀವಿ ಮಾನವ ಸಂಘರ್ಷ ಈ ಬಗ್ಗೆ ತಜ್ಞರ ಸಲಹೆಯೊಂದಿಗೆ ಅಭಿಪ್ರಾಯ ಪಡೆದು ಅಗತ್ಯವಿರುವ ಯೋಜನೆ ರೂಪಿಸುವ ಭರವಸೆ ವ್ಯಕ್ತಪಡಿಸಿದರು.

ರಾಜಮನೆತನದಲ್ಲಿ ಹಿರಿಯರ ಆಶೀರ್ವಾದ ಜೊತೆಗೆ ಕೆಲಸ ಮಾಡಿದ ಅನುಭವದೊಂದಿಗೆ, ಇದೀಗ ರಾಜಕೀಯ ಕ್ಷೇತ್ರದಲ್ಲಿ ಜನರ ಸೇವೆ ಮಾಡುವ ಅವಕಾಶ ಲಭಿಸಿದೆ ಎಂದು ಅವರು ಹೇಳಿದರು. ಎರಡೂ ಜಿಲ್ಲೆಗಳಲ್ಲಿ ಪರಿಸರ ಕಾಳಜಿಯೊಂದಿಗೆ ಪ್ರವಾಸೋದ್ಯಮ ಅಭಿವೃದ್ಧಿ ಬಗ್ಗೆ ಕೂಡ ಚಿಂತನೆ ಇರುವುದಾಗಿ ಅವರು ಹೇಳಿದರು.

click me!