ನಾನು ಸಚಿವನಾದ ಮೇಲೆ ಮೊದಲ ಬಾರಿಗೆ ಹುಬ್ಬಳ್ಳಿಗೆ ಬಂದಿದ್ದೇನೆ. ಜನರ ಆಶೀರ್ವಾದದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ನಾವು ನುಡಿದಂತೆ ನಡೆದಿದ್ದೇವೆ.ಹಸಿವಿನಿಂದ ಬಳಲಬಾರದು ಅನ್ನೋ ಕಾರಣಕ್ಕೆ ನಾವು ಕಾನೂನು ತಂದಿದ್ದೇವೆ ಎಂದು ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಹುಬ್ಬಳ್ಳಿ (ನ.03): ನಾನು ಸಚಿವನಾದ ಮೇಲೆ ಮೊದಲ ಬಾರಿಗೆ ಹುಬ್ಬಳ್ಳಿಗೆ ಬಂದಿದ್ದೇನೆ. ಜನರ ಆಶೀರ್ವಾದದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ನಾವು ನುಡಿದಂತೆ ನಡೆದಿದ್ದೇವೆ.ಹಸಿವಿನಿಂದ ಬಳಲಬಾರದು ಅನ್ನೋ ಕಾರಣಕ್ಕೆ ನಾವು ಕಾನೂನು ತಂದಿದ್ದೇವೆ ಎಂದು ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು. ನ್ಯಾಷನಲ್ ಫುಡ್ ಸೆಕ್ಯೂರಿಟಿ ಆ್ಯಕ್ಟ್ ಯುಪಿಎ ಸರ್ಕಾರವೇ ತಂದಿದೆ. ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆ ಜಾರಿ ಮಾಡಿದ್ರು. ಈ ಚುನಾವಣೆ ಮುನ್ನ ನಾವು 10 ಕೆಜಿ ಅಕ್ಕಿ ಕೊಡ್ತೀವಿ ಎಂದು ಘೋಷಣೆ ಮಾಡಿದ್ವಿ. ಕೇಂದ್ರ ಸರ್ಕಾರ ಅಕ್ಕಿ ಇದ್ರು ನಮಗೆ ನಿರಾಕರಣೆ ಮಾಡಿದ್ರು. ಇದರಲ್ಲಿ ರಾಜಕೀಯ ಬೆರಸಬಾರದಿತ್ತು ಎಂದರು.
ಆದ್ರೆ ಕೇಂದ್ರ ಸರ್ಕಾರ ಇಲ್ಲಿ ರಾಜಕಾರಣ ಮಾಡ್ತು. ನಾವು ಅದಕ್ಕೆ ಸರಿಸಮಾನಾಗಿ ಹಣ ಕೊಡುತ್ತಿದ್ದೇವೆ. ಜುಲೈ ನಿಂದ ನಾವು ಹಣ ಕೊಡುತ್ತಿದ್ದೇವೆ. ನಾವು ಅಕ್ಕಿ ತರೋ ಪ್ರಯತ್ನ ಮಾಡುತ್ತಿದ್ದೇವೆ. ಅಕ್ಕಿ ಬೆಳೆಯೋ ಪ್ರದೇಶದಿಂದ ಅಕ್ಕಿ ತರೋ ಪ್ರಯತ್ನ ಮಾಡುತ್ತಿದ್ದೇವೆ. ಶೀಘ್ರದಲ್ಲಿ ನಾವು ರಾಜ್ಯದ ಜನರಿಗೆ ಅಕ್ಕಿ ಕೊಡುತ್ತಿದ್ದೇವೆ. ಸ್ವತಂತ್ರ ಭಾರತದಲ್ಲಿ ಸಾಮಾನ್ಯ ಜನರಿಗೆ ಬೇಕಾಗಿರೋ ಅನಕೂಲ ಮಾಡುತ್ತಿದ್ದೇವೆ. ಅಕ್ಕಿ ದುರಪಯೋಗ ಆಗುತ್ತಿದೆ ಅನ್ನೋ ಮಾತು ಇದೆ. ಅಕ್ಟೋಬರ್ ರವರೆಗೂ ನಾವು ಕೊಡ್ತಿರೋ ಹಣ ಸಂದಾಯ ಆಗಿದೆ. ನಾವು 10 ಕೆಜಿ ಕೊಡ್ತೀವಿ ಅಂದಿದ್ದೇವೆ, ಅಕ್ಕಿ ಕೊಡ್ತೀವಿ . ಕೇಂದ್ರದ ಬಳಿ ಅಕ್ಕಿ ಇದ್ರೂ ನಮಗೆ ಅಕ್ಕಿ ಕೊಡ್ತಿಲ್ಲ ಎಂದು ಹೇಳಿದರು.
ಸರ್ಕಾರ ರಚನೆಯಾಗಿ 5 ತಿಂಗಳಾದರೂ ವಿಪಕ್ಷ ನಾಯಕನ ನೇಮಕ ಮಾಡುವ ಸಾಮರ್ಥ್ಯ ಬಿಜೆಪಿಗಿಲ್ಲ: ಡಿಕೆಶಿ
ಪಡಿತರ ಸಂಘದ ಅಧ್ಯಕ್ಷರನ್ನ ಭೇಟಿಯಾಗಿದ್ದೇನೆ. ಅವರು ಅಕ್ಕಿ ಬೇಕು ಎನ್ನುತ್ತಿದ್ದಾರೆ. ಅಕ್ಕಿ ಮಾರಾಟ ಮಾಡಿರೋ ಸಂಶಯ ಇದೆ. ಅಕ್ಕಿ ಜೊತೆಗೆ ಬೇಳೆ ಕೊಡಬಹುದು. ಇದನ್ನು ನಾವು ಯೋಚನೆ ಮಾಡುತ್ತಿದ್ದೇವೆ. ಹಣ ಕೊಡೋದ್ರಿಂದ ಪಡಿತರ ಸಂಘಕ್ಕೆ ಕಮೀಷನ್ ಸಿಗ್ತಿಲ್ಲ. ನಾವು ಅದನ್ನು ಯೋಚನೆ ಮಾಡುತ್ತಿದ್ದೇವೆ. ಪಡಿತರ ಸಂಘದವರನ್ನ ಭೇಟಿಯಾಗಿದ್ದೇನೆ. ನಿಮ್ಮ ಕಮೀಷನ್ ಬಂದೇ ಬರ್ತಿದೆ. ಅಕ್ಕಿ ಬದಲಿಗೆ ಸದ್ಯ ನಾವು ಹಣ ಕೊಡ್ತೀದಿವಿ.ಮುಂದೆ ಅಕ್ಕಿ ಕೊಡೋ ವ್ಯವಸ್ಥೆ ಆಗ್ತಿದೆ ಎಂದು ಮುನಿಯಪ್ಪ ತಿಳಿಸಿದರು.