ಕರ್ನಾಟಕ ರಾಜ್ಯಸಭಾ ಚುನಾವಣೆಗೆ ಬಿಜೆಪಿ ಹೈಕಮಾಂಡ್ ಸಾಮಾನ್ಯ ಅಭ್ಯರ್ಥಿಯನ್ನು ಘೋಷಿಸಿದ್ದು, ಒಬ್ಬರು ಲಕ್ಷಾಧಿಪತಿ ಮತ್ತೊಬ್ಬರು ಕೋಟ್ಯಾಧಿಪತಿಯಾಗಿದ್ದಾರೆ
ಬೆಂಗಳೂರು, (ಜೂನ್.09): ಕರ್ನಾಟಕ ರಾಜ್ಯಸಭಾ ಚುನಾವಣೆಗೆ ಬಿಜೆಪಿ ಹೈಕಮಾಂಡ್ ಘೋಷಿಸಿರುವ ಅಚ್ಚರಿ ಅಭ್ಯರ್ಥಿಗಳಾದ ಈರಣ್ಣ ಕಡಾಡಿ ಮತ್ತು ಅಶೋಕ್ ಗಸ್ತಿ ಅವರು ಇಂದು (ಮಂಗಳವಾರ) ನಾಮಪತ್ರ ಸಲ್ಲಿಸಿದರು.
ಈರಣ್ಣ ಕಡಾಡಿ ಬೆಳಗಾವಿ ಜಿಲ್ಲಾ ಬಿಜೆಪಿ ಮುಖಂಡರಾಗಿದ್ರೆ, ಅಶೋಕ್ ಗಸ್ತಿ ರಾಯಚೂರು ಮೂಲದವರಾಗಿದ್ದು, ಇವರಿಬ್ಬರು ಸಂಘಪರಿವಾರದವರು.
undefined
ಮಾಜಿ ಜಿ.ಪಂ ಅಧ್ಯಕ್ಷ, ಹಿಂದುಳಿದ ವರ್ಗ ಮೋರ್ಚದಲ್ಲಿ ಕೆಲ್ಸ ಮಾಡಿದವರಿಗೆ ರಾಜ್ಯಸಭಾ ಟಿಕೆಟ್
ಇನ್ನು ನಾಮಪತ್ರ ಸಲ್ಲಿಕೆ ಮಾಡಿರೋ ಬಿಜೆಪಿ ಅಭ್ಯರ್ಥಿಗಳು ತಮ್ಮ ಆಸ್ತಿ ವಿವರವನ್ನು ಚುನಾವಣೆ ಆಯೋಗಕ್ಕೆ ಸಲ್ಲಿಸಿದ್ದು, ಈರಣ್ಣ ಕಡಾಡಿ ಕೋಟ್ಯಾಧಿಪತಿಯಾಗಿದ್ರೆ, ಅಶೋಕ್ ಗಸ್ತಿ ಲಕ್ಷಾಧಿಪತಿಯಾಗಿದ್ದಾರೆ.
ಅಶೋಕ್ ಗಸ್ತಿ ಆಸ್ತಿ ವಿವರ
ಬೇರೆ ಅಭ್ಯರ್ಥಿಗಳ ಆಸ್ತಿ ವಿವರಕ್ಕೆ ಹೋಲಿಸಿದ್ರೆ, ಅಶೋಕ್ ಗಸ್ತಿಯವರು ಕಡಿಮೆ ಆದಾಯ ಹೊಂದಿದವರಾಗಿದ್ದಾರೆ. ಇನ್ನು ಗಸ್ತಿ ಅವರಿಗಿಂತ ಅವರ ಪತ್ನಿ ಹೆಸರಲ್ಲೇ ಹೆಚ್ಚು ಹಣ ಇದೆ.
*. ಅಶೋಕ್ ಗಸ್ತಿ ಚರಾಸ್ತಿ ಮೌಲ್ಯ 2,85,673 ರೂ.
* 1996 ಮಾಡೆಲ್‌ನ ಬಜಾಬ್ ಸ್ಕೂಟರ್ ಬೈಕ್
* ಪತ್ನಿ ಸುಮಾ ಹೆಸರಲ್ಲಿ 50 ಗ್ರಾಂ ಚಿನ್ನ 1000 ಗ್ರಾಂ ಬೆಳ್ಳಿ ಹಾಗು 4,45,375 ರೂಪಾಯಿ ಹಣವಿದೆ.
* ಪುತ್ರಿ ನೇಹ 40 ಗ್ರಾಂ ಚಿನ್ನ, 2,05000 ರೂಪಾಯಿ ಮೌಲ್ಯದ ಚರಾಸ್ತಿ ಇದೆ.
* ಎರಡನೇ ಪುತ್ರ ನಿತ್ಯಾ ಹೆಸರಲ್ಲಿ 20 ಗ್ರಾಂ ಚಿನ್ನ ಸೇರಿ 2,04,000 ರೂಪಾಯಿ ಮೌಲ್ಯದ ಚರಾಸ್ತಿ ಇದೆ.
ಖರ್ಗೆ ಬಳಿ ಕಾರಿಲ್ಲ, ಕೃಷಿ ಭೂಮಿಯೂ ಇಲ್ಲ: ಇಲ್ಲಿದೆ ನೋಡಿ ಆಸ್ತಿ, ಸಾಲದ ವಿವರ!
2. ಈರಣ್ಣ ಕಡಾಡಿ ಆಸ್ತಿ ವಿವರ
ಬಿಜೆಪಿ ರಾಜ್ಯಸಭಾ ಅಭ್ಯರ್ಥಿ ಈರಣ್ಣ ಕಡಾಡಿ ಕುಟುಂಬದ ಒಟ್ಟು ಆಸ್ತಿ ಮೌಲ್ಯ 3ಕೋಟಿ 32 ಲಕ್ಷದ 32 ಸಾವಿರ ರೂಪಾಯಿ ಆಗಿದೆ.
* 1,02,62,417 ಕೋಟಿ ರೂ. ಮೌಲ್ಯದ ಚರಾಸ್ತಿ ಮತ್ತು 1.33 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.
* ಒಂದು ಟೊಯೋಟಾ ಇನ್ನೋವಾ ಕಾರು ಇದೆ.
* 60 ಗ್ರಾಂ ಚಿನ್ನ ಹೊಂದಿದ್ದಾರೆ.
* ಪತ್ನಿ ಸುಮಿತ್ರರ ಚರಾಸ್ತಿ 9,26,079, ಮತ್ತು 11,28,000 ಸ್ಥಿರಾಸ್ತಿ ಜತೆಗೆ 100 ಗ್ರಾಂ ಚಿನ್ನ
* ಪುತ್ರ ಸತೀಶ್ 11,01,579 ಚರಾಸ್ತಿ ಹಾಗೂ 24,50,000 ರೂ. ಸ್ಥಿರಾಸ್ತಿ ಹೊಂದಿದ್ದಾರೆ.