
ಬೆಂಗಳೂರು (ಅ.11) ರಾಜ್ಯ ರಾಜಕೀಯದಲ್ಲಿ ಮತ್ತೆ ಕ್ರಾಂತಿ ಮಾತುಗಳು ಕೇಳಿಬರುತ್ತಿದೆ. ನವೆಂಬರ್ ತಿಂಗಳಲ್ಲಿ ಅಧಿಕಾರ ಬದಲಾವಣೆ ಕನಸು ಕಾಣುತ್ತಿರುವ ಡಿಕೆ ಶಿವಕುಮಾರ್ ಇದೀಗ ಮೌನಕ್ಕೆ ಜಾರಿದ್ದಾರೆ. ನವೆಂಬರ್ ತಿಂಗಳ ತನಕ ಕಾದು ನೋಡುವ ತಂತ್ರಕ್ಕೆ ಮುಂದಾಗಿದ್ದಾರೆ ಅನ್ನೋ ಮಾತುಗಳು ಆಪ್ತ ವಲಯದಿಂದ ಕೇಳಿಬರುತ್ತಿದೆ. ಸಚಿವ ಸಂಪುಟ ಪುನಾರಚನೆ ಕಸರತ್ತು ನಡೆಯುತ್ತಿದ್ದರೂ ಡಿಕೆ ಶಿವಕುಮಾರ್ ಮೌನವಾಗಿದ್ದಾರೆ. ಯಾರೇ ಕೆರಳಿಸಿದರೂ ತಾಳ್ಮೆ ಕಳೆದಕೊಳ್ಳದೇ ನವೆಂಬರ್ ತನಕ ಕಾದು ನೋಡಲು ಡಿಕೆ ಶಿವಕುಮಾರ್ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಕರ್ನಾಟಕ ಕಾಂಗ್ರೆಸ್‌ನಲ್ಲಿ ಹೊಸ ಪರ್ವ ಆರಂಭದ ಕನಸುಗಳು ಹಲವು ನಾಯಕರಲ್ಲಿ ಗರಿಗೆದರಿದೆ. ಇತ್ತ ಸಂಪುಟ ಪುನಾರಚನೆ ಸೇರಿದಂತೆ ಹಲವು ಕಸರತ್ತುಗಳು ನಡೆುತ್ತಿದೆ. ಆದರೆ ಡಿಕೆ ಶಿವಕುಮಾರ್ ಯಾವುದೇ ಕಾರಣಕ್ಕೆ ಡಿಸ್ಟರ್ಬ್ ಆಗದಿರಲು ಮುಂದಾಗಿದ್ದಾರೆ.
ನನ್ನ ಯಾರೂ ಕೆರಳಿಸಲು ಆಗಲ್ಲ. ನಾನು ಯಾವ ಕಾರಣಕ್ಕೂ ಕೆರಳಲ್ಲ ಎಂದು ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ. ತಾಳ್ಮೆಯೇ ನನ್ನ ಗುರು, ನವೆಂಬರ್ ಮುಗಿಯುವ ತನಕ ನಾನು ಡಿಸ್ಟರ್ಬ್ ಆಗಲ್ಲ. ಎಲ್ಲಿ ಏನು ಮಾತಾಡಬೇಕೋ ಮಾತಾಡ್ತೀನಿ, ಪ್ಲೀಸ್ ನೀವು ಸುಮ್ಮನಿದ್ರೆ ಅಷ್ಟೇ ಸಾಕು ಎಂದು ಡಿಕೆ ಶಿವಕುಮಾರ್ ಆಪ್ತ ಶಾಸಕರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ನನ್ನ ಯಾರೂ ಕೆರಳಿಸಲು ಆಗಲ್ಲ.. ನಾನು ಯಾವ ಕಾರಣಕ್ಕೂ ಕೆರಳಲ್ಲ ಇದು ಡಿಸಿಎಂ ಡಿಕೆ ಶಿವಕುಮಾರ್ ಕಾನ್ಫಿಡೆನ್ಸ್ ಎನ್ನಲಾಗಿದೆ. ನವೆಂಬರ್ ಕ್ರಾಂತಿ ಲೆಕ್ಕಾಚಾರದ ನಡುವೆ ನವೆಂಬರ್ ನಲ್ಲೆ ಪವರ್ ಶೇರಿಂಗ್ ಆಗಬಹುದು ಎಂಬುದು ಡಿಸಿಎಂ ಡಿಕೆಶಿ ಲೆಕ್ಕಾಚಾರ ಎನ್ನಲಾಗುತ್ತಿದೆ. ಆದರೆ ನವೆಂಬರ್ ನಲ್ಲೆ ಸಂಪುಟ ಸರ್ಜರಿ ಎಂಬ ಹೊಸ ದಾಳವನ್ನ ಸಿಎಂ ಸಿದ್ದರಾಮಯ್ಯ ಉರುಳಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಈ ಅನಿರೀಕ್ಷಿತ ದಾಳ ಸಹಜವಾಗಿಯೆ ಸಿಎಂ ಖುರ್ಚಿಯ ಕನಸ್ಸು ಕಾಣುತ್ತಿದ್ದ ಡಿಕೆಶಿ ಪಾಲಿಗೆ ಹೊಸ ಸವಾಲಾಗಿದೆ.
ನವೆಂಬರ್ ಮುಗಿಯುವ ತನಕ ನಾನು ಡಿಸ್ಟರ್ಬ್ ಆಗಲ್ಲ ಎಂಬ ಹಟಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಬಂದಂತಿದೆ. ಎಲ್ಲಿ ಏನು ಮಾತಾಡಬೇಕೋ ಮಾತಾಡ್ತೀನಿ.ಪ್ಲೀಸ್ ನೀವು ಸುಮ್ಮನಿದ್ರೆ ಅಷ್ಟೇ ಸಾಕು ಎಂಬುದು ಆಪ್ತರ ಬಳಿ ಡಿಸಿಎಂ ಡಿಕೆಶಿ ಮಾತನಾಡಿದ್ದಾರೆ ಎನ್ನಲಾಗಿದೆ. ಆಪ್ತರ ಬಳಿ ಡಿಕೆಶಿ ವಿಶ್ವಾಸದ ಮಾತನಾಡುತ್ತಿದ್ದಾರೆ ಎಂದರೆ ಡಿಸಿಎಂ ಡಿಕೆಶಿ ಗೇಮ್ ಅಸಲಿಯತ್ತೇನು ಎಂಬ ಸಹಜ ಕುತೂಹಲ ಈಗ ಜೋರಾಗಿದೆ. ಈಗಾಗಲೇ ನೀವು ಸಿಎಂ ಖುರ್ಚಿ ಬಗ್ಗೆ ಹೇಳಿಕೆ ನೀಡದಂತೆ ಆಪ್ತ ಶಾಸಕರಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.