ವಾಲ್ಮೀಕಿ ನಿಗಮ ಹಗರಣದಲ್ಲಿ ಇಡಿ ರಾಜಕೀಯ ಪ್ರೇರಿತ ದಾಳಿ: ಪ್ರಿಯಾಂಕ್ ಖರ್ಗೆ ಕಿಡಿ

By Ravi Janekal  |  First Published Jul 12, 2024, 3:56 PM IST

ವಾಲ್ಮೀಕಿ ನಿಗಮ ಹಗರಣದಲ್ಲಿ ನಾಗೇಂದ್ರ ಅವರು ತನ್ನ ಕೈವಾಡ ಇಲ್ಲ ಎಂದು ಅವರೇ ತನಿಖೆ ಹೇಳಿದ್ದಾರೆ. ಇದು ರಾಜಕೀಯ ಪ್ರೇರಿತ ದಾಳಿ ಆಗಿದೆ ಎಂದು ಸಚಿವ ಪ್ರಿಯಾಂಕ್ ಕಿಡಿಕಾರಿದರು.


ಬೆಂಗಳೂರು (ಜು.12): ವಾಲ್ಮೀಕಿ ನಿಗಮ ಹಗರಣದಲ್ಲಿ ನಾಗೇಂದ್ರ ಅವರು ತನ್ನ ಕೈವಾಡ ಇಲ್ಲ ಎಂದು ಅವರೇ ತನಿಖೆ ಹೇಳಿದ್ದಾರೆ. ಇದು ರಾಜಕೀಯ ಪ್ರೇರಿತ ದಾಳಿ ಆಗಿದೆ ಎಂದು ಸಚಿವ ಪ್ರಿಯಾಂಕ್ ಕಿಡಿಕಾರಿದರು.

ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ(B Nagendra) ಅವರನ್ನ ಇಡಿ(ಜಾರಿ ನಿರ್ದೇಶನಾಲಯ) ಅಧಿಕಾರಿಗಳು ವಶಕ್ಕೆ ಪಡೆದಿರುವ ವಿಚಾರ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವರು, ಐಟಿ, ಇಡಿ ಕೇಂದ್ರದ ಕೈಗೊಂಬೆಯಾಗಿದೆ. ಹಿಂದೆ ಸೋರೆನ್ ಅವರನ್ನು ಬಂದಿಸಿದ್ರು. ಮತ್ತೆ ಕೋರ್ಟ್ ಹೊರಗೆ ಬಿಟ್ಟಿಲ್ವಾ? ಆಡಿಯೋ ವೈರಲ್ ನೋಡಿದ್ರೆ ಗೊತ್ತಾಗುತ್ತೆ ಅಧ್ಯಕ್ಷರಿಗೆ ಗೊತ್ತಿಲ್ಲ ಅಂತಾ ಇಡಿ ರಾಜಕೀಯ ಪ್ರೇರಿತ ದಾಳಿಯಾಗಿದೆ ಎಂದರು.

Tap to resize

Latest Videos

undefined

MUDA Scam: ಸಂಪೂರ್ಣ ತನಿಖೆ ಆಗೋವರೆಗೂ ನಮ್ಮ ಹೋರಾಟ ಮುಂದುವರಿಯುತ್ತೆ: ಯದುವೀರ್ ಒಡೆಯರ್

ಬಿಜೆಪಿ ನಾಯಕರನ್ನು ವಶಕ್ಕೆ ಪಡೆದಿರೋ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ಪ್ರಿವೆಂಟಿವ್ ಅರೆಸ್ಟ್ ಮಾಡೋ ಹಾಗಿಲ್ವ ನನ್ನನ್ನು ಎಷ್ಟು ಸಲ ಅರೆಸ್ಟ್ ಮಾಡಿದ್ರು. ಯಡಿಯೂರಪ್ಪ ಪೊಕ್ಸೋ ಕೇಸ್ ಮುಚ್ಚಿ ಹಾಕಲು ಇದೀಗ ಪ್ರತಿಭಟನೆ ಮಾಡ್ತಿದ್ದಾರೆ. ಬಿಜೆಪಿ ಅವರು ಯಡಿಯೂರಪ್ಪ ಹೆಸರು ಎತ್ತುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

click me!