ಅವಧಿ ಪೂರ್ಣಗೊಂಡ ಗ್ರಾಮ ಪಂಚಾಯತಿಗಳಿಗೆ ಆಡಳಿತಾಧಿಕಾರಿ ನೇಮಕಕ್ಕೆ ಸರ್ಕಾರ ಆದೇಶ

By Suvarna NewsFirst Published Jun 17, 2020, 10:38 PM IST
Highlights

ರಾಜ್ಯದ 6021 ಗ್ರಾಮ ಪಂಚಾಯತ್‌ಗಳ ಅವಧಿ ಅಂತ್ಯವಾಗಲಿದೆ. ಆದ್ರೆ, ಕೊರೋನಾ ಇರುವುದರಿಂದ ಚುನಾವಣೆಯನ್ನು ಆಯೋಗ ಮುಂದೂಡಿದೆ. ಇದರಿಂದ ರಾಜ್ಯ ಸರ್ಕಾರ ವಿರೋಧದ ನಡುವೆಯೇ ಆದೇಶವೊಂದನ್ನು ಹೊರಡಿಸಿದೆ.
 

ಬೆಂಗಳೂರು, (ಜೂನ್. 17): ಸಚಿವ ಸಂಪುಟದಲ್ಲಿ ಕೈಗೊಂಡ ತೀರ್ಮಾನದಂತೆ ಅವಧಿ ಪೂರ್ಣಗೊಂಡಿರುವ ಗ್ರಾಮ ಪಂಚಾಯತಿಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸಲು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಬುಧವಾರ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದೆ.

ರಾಜ್ಯದ ಬಹುತೇಕ  6021 ಗ್ರಾಮ ಪಂಚಾಯತಿಗಳ 5 ವರ್ಷಗಳ ಅವಧಿ 2020 ರಿಂದ ಪ್ರಾರಂಭವಾಗಿ ವಿವಿಧ ದಿನಾಂಕಗಳಂದು ಪೂರ್ಣಗೊಳ್ಳುತ್ತದೆ. ಈ ಬಾರಿ ಗ್ರಾಮ ಪಂಚಾಯತಿಗಳ ಸಾರ್ವತ್ರಿಕ ಚುನಾವಣೆಗಳು ನಡೆಯದಿರುವ ಕಾರಣ, 5 ವರ್ಷಗಳ ಅವಧಿಯನ್ನು ಮುಗಿಸಿದ ನಂತರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದಂತೆ ಆಡಳಿತಾಧಿಕಾರಿಗಳನ್ನು ನೇಮಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.

ಗ್ರಾಮ ಪಂಚಾಯತ್: ಸದಸ್ಯರ ನೇಮಕಾತಿ ಬದಲಾಗಿ ಬೇರೆ ಮಾರ್ಗ ಕಂಡುಕೊಂಡ ಸರ್ಕಾರ

ರಾಜ್ಯದ 6021 ಗ್ರಾಮ ಪಂಚಾಯತ್‌ಗಳ ಜೂನ್‌ನಲ್ಲಿ ಅವಧಿ ಅಂತ್ಯವಾಗಲಿದೆ. ಆದ್ರೆ, ಕೊರೋನಾ ಇರುವುದರಿಂದ ಚುನಾವಣೆಯನ್ನು ಈಗಾಗಲೇ ಆಯೋಗ ಮುಂದೂಡಿ ಆದೇಶ ಹೊರಡಿಸಿದೆ. 

ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಸದೆ ಆಡಳಿತಾಧಿಕಾರಿಗಳನ್ನು ನೇಮಿಸಲು ಇತ್ತೀಚಿಗೆ ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿತ್ತು. ಆದ್ರೆ, ಇದಕ್ಕೆ ಕಾಂಗ್ರೆಸ್ ಜೆಡಿಎಸ್ ವಿರೋಧಿಸಿದ್ದು, ಅದೇ ಸದಸ್ಯರುಗಳನ್ನು ಮುಂದುವರಿಸುವಂತೆ ಆಗ್ರಹಿಸಿವೆ,

click me!