ಸಿಎಂ ಆಯ್ಕೆ ಕಗ್ಗಂಟು ಇಲ್ಲ ಯಾವ ಗಂಟು ಇಲ್ಲ ,ಎಲ್ಲಾ ಸರಾಗವಾಗಿದೆ.ಮೇ 18 ಕ್ಕೆ ಪ್ರಮಾಣ ವಚನ ಆಗಬಹುದು ಎಂದು ಮಧುಗಿರಿ ನೂತನ ಶಾಸಕ ಕೆಎನ್ ರಾಜಣ್ಣ ಹೇಳಿದ್ದಾರೆ.
ತುಮಕೂರು (ಮೇ.16): ರಾಜ್ಯದ ಮುಖ್ಯಮಂತ್ರಿ ಆಯ್ಕೆ ಇನ್ನೂ ಕಗ್ಗಂಟು ಆಗಿಯೇ ಇದೆ. ಈ ನಡುವೆ ತುಮಕೂರಿನಲ್ಲಿ ಮಧುಗಿರಿ ನೂತನ ಶಾಸಕ ಕೆಎನ್ ರಾಜಣ್ಣ ಅವರು ಕಗ್ಗಂಟು ಇಲ್ಲ ಯಾವ ಗಂಟು ಇಲ್ಲ ,ಎಲ್ಲಾ ಸರಾಗವಾಗಿದೆ.ಮೇ 18 ಕ್ಕೆ ಪ್ರಮಾಣ ವಚನ ಆಗಬಹುದು ಎಂದಿದ್ದಾರೆ. ನನಗೆ ವಿಶ್ವಾಸ ಇದೆ ನೂರಕ್ಕೆ ನೂರರಷ್ಟು ಸಿದ್ದರಾಮಯ್ಯ ಸಿಎಂ ಆಗುತ್ತಾರೆ. ಹೈಕಮಾಂಡ್ ಒಲವು ಕೂಡ ಅವರ ಪರವಾಗಿದೆ. ಹೈಕಮಾಂಡ್ ಎಲ್ಲರನ್ನ ಕರೆಸಿ ವಿಶ್ವಾಸ ತೆಗೆದುಕೊಂಡು ಸಮಾನಕರವಾದ ಘಟ್ಟ ತರಬೇಕೆಂಬ ಪ್ರಯತ್ನ ಅಷ್ಟೇ. ಡಿಕೆ ಶಿವಕುಮಾರ್ ಕೂಡ ಸಹಕಾರ ಕೊಡ್ತಾರೆಂಬ ವಿಶ್ವಾಸ ಇದೆ. ಸಿಎಂ ವಿಚಾರ ಇಂದು ಪೈನಲ್ ಆಗಲೇಬೇಕು. ಸಿದ್ದರಾಮಯ್ಯ ಸಿಎಂ ಆಗಲಿದ್ದಾರೆ ಎಂದಿದ್ದಾರೆ.
ಸಚಿವ ಸಂಪುಟ ರಚನೆ ವಿಚಾರವಾಗಿ ಮಾತನಾಡಿದ ಅವರು, ಸಚಿವ ಸಂಪುಟ ಸ್ವಲ್ಪ ತಡವಾಗಬಹುದು. ಸದ್ಯಕ್ಕೆ ಸಿದ್ದರಾಮಯ್ಯ ಒಬ್ಬರೆ ಪ್ರಮಾಣ ವಚನ. ಮೊದಲ ದಿನವೇ ಕ್ಯಾಬಿನೆಟ್ ಮಾಡ್ತಾರೆ. 10 ಕೆಜಿ ಅಕ್ಕಿ ಘೋಷಣೆ ಮಾಡ್ತಾರೆ. ಅನ್ನಭಾಗ್ಯ ಯೋಜನೆ ಜಾರಿಗೆ ತರೋದೆ ಮೊದಲ ತಿರ್ಮಾನ. ನಾನು ಸಚಿವ ಆಗಲೇಬೇಕು. ಸಹಕಾರ ಸಚಿವ ಸ್ಥಾನವೇ ಬೇಕು. ಅದು ಬಿಟ್ಟು ಬೇರೆ ಏನು ಕೇಳಲ್ಲ ಎಂದಿದ್ದಾರೆ.
ಬಿಜೆಪಿ ಸೋಲು ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, 40% ಕಮಿಷನ್ ಹಾಗೂ ಬೆಲೆ ಏರಿಕೆಯಿಂದ ಬಿಜೆಪಿ ಸೋತಿದೆ. ಇಲ್ಲಿರುವ ಬಿಜೆಪಿ ರಾಜ್ಯ ನಾಯಕರಿಗೆ ಮತ ಸೆಳೆಯುವ ಶಕ್ತಿ ಇಲ್ಲ. ನಾಲ್ಕು ವರ್ಷಗಳಲ್ಲಿ ಒಂದು ಜನಪರ ಕಾರ್ಯ ಬಿಜೆಪಿ ನೀಡಲಿಲ್ಲ. ಮೀಸಲಾತಿ ಕೂಡ ಎಫೆಕ್ಟ್ ಆಗಿದೆ. ಜನರಿಗೆ ಸರ್ಕಾರದ ಬಗ್ಗೆ ಬೇಸರವಾಗಿತ್ತು. ರಾಜ್ಯದಲ್ಲಿ ಮೋದಿ ಅಲೆ ವರ್ಕೌಟ್ ಆಗಿಲ್ಲ ಎಂದಿದ್ದಾರೆ.
KARNATAKA ELECTION RESULTS 2023: ಮುಸ್ಲಿಂ ಸಮುದಾಯಕ್ಕೆ ಡಿಸಿಎಂ, 6 ಸಚಿವ ಸ್ಥಾನ ನೀಡಲು ಆಗ್ರಹ!
ಡಿಜಿಪಿ ಪ್ರವಿಣ್ ಸೂದ್ ಸಿಬಿಐಗೆ ನೇಮಕ ವಿಚಾರದ ಬಗ್ಗೆ ಮಾತನಾಡಿದ ಶಾಸಕ ಕೆಎನ್ ರಾಜಣ್ಣ, ಡಿಕೆ ಶಿವಕುಮಾರ್ ಪ್ರವಿಣ್ ಸೂದ್ ರನ್ನ ಬೈದಿದ್ದರು. ಈಗ ಪ್ರವೀಣ್ ಸೂದ್ ರನ್ನ ಸಿಬಿಐಗೆ ನೇಮಿಸಿದ್ದಾರೆ. ಡಿಕೆ ಶಿವಕುಮಾರ್ ರನ್ನ ಟಾರ್ಗೆಟ್ ಮಾಡಲಿ ಅಂತಾ ನೇಮಿಸಿದ್ದಾರೆ. ಶಿವಕುಮಾರ್ ಮೇಲೆ ದ್ವೇಷ ಸಾಧಿಸಿಲು ಹಾಗೇ ಮಾಡಿದ್ದಾರೆ. ಹೆದರಿಸುವುದು, ಬ್ಲಾಕ್ ಮೇಲ್ ರಾಜಕಾರಣ ಮಾಡುವುದು ಅವರ ಕೆಲಸ ಎಂದಿದ್ದಾರೆ.
Karnataka Govt Formation: ದೆಹಲಿ ತಲುಪಿದ ಡಿಕೆಶಿ, ಸೋನಿಯಾಗಾಂಧಿ ಭೇಟಿ ಡೌಟು
ಮಧುಗಿರಿ ಜಿಲ್ಲೆ ವಿಚಾರವಾಗಿ ಮಾತನಾಡಿದ ಅವರು ಮಧುಗಿರಿ ಜಿಲ್ಲೆ ಮಾಡಲು ಪ್ರಯತ್ನ ಮಾಡಲಾಗುವುದು. ನಾನು ಹೇಳಿದಂತೆ ನಡೆಯುವವನು. ಮಧುಗಿರಿ ಜಿಲ್ಲೆ ಆಗಲಿದೆ. ನನಗೆ ಸಚಿವ ಸ್ಥಾನ ನೀಡಲೇಬೇಕು ಎಂದು ತುಮಕೂರಿನಲ್ಲಿ ಕೆಎನ್ ರಾಜಣ್ಣ ಹೇಳಿದ್ದಾರೆ.