Karnataka Election Results 2023: ಡಿಕೆಶಿ ಬರ್ತಡೇಗೆ ಸೋನಿಯಾ ಗಾಂಧಿ ಬಂಪರ್ ಗಿಫ್ಟ್, ಸಿಗುತ್ತಾ ಸಿಎಂ ಕುರ್ಚಿ!

Published : May 13, 2023, 09:57 PM IST
Karnataka Election Results 2023: ಡಿಕೆಶಿ ಬರ್ತಡೇಗೆ ಸೋನಿಯಾ ಗಾಂಧಿ ಬಂಪರ್ ಗಿಫ್ಟ್, ಸಿಗುತ್ತಾ ಸಿಎಂ ಕುರ್ಚಿ!

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಬರ್ತಡೇಗೆ, ಸೋನಿಯಾಗಾಂಧಿ ಅವರು ಸಿಎಂ ಖುರ್ಚಿಯನ್ನು ಉಡುಗೊರೆಯಾಗಿ ನೀಡುವರೇ ಎಂಬ ಕುತೂಹಲ ಮೂಡಿದೆ. 

ಬೆಂಗಳೂರು (ಮೇ 13): ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವಿಕೆ ಪ್ರಮುಖ ಕಾರಣವಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಮೇ 15ರಂದು ತಮ್ಮ ಜನ್ಮದಿನದ ಪ್ರಯುಕ್ತ ಕಾಂಗ್ರೆಸ್ ವರಿಷ್ಠರಿಗೆ ಗೆಲುವಿನ ಉಡುಗೊರೆ ನೀಡಲಿದ್ದಾರೆ. ಆದರೆ, ಸೋನಿಯಾ ಗಾಂಧಿ ಅವರು ತಮಗೆ ಮುಖ್ಯುಮಂತ್ರಿ ಖುರ್ಚಿ ನೀಡಲಿದ್ದಾರಾ ಎಂಬ ನಿರೀಕ್ಷೆಯಲ್ಲಿದ್ದಾರೆ.

ನಾನು ಸೋನಿಯಾ ಗಾಂಧಿಗೆ ರಾಜ್ಯದಲ್ಲಿ ಗೆದ್ದಿರುವ ಉಡುಗೊರೆ ನೀಡ್ತೀನಿ, ಅವರು ನಂಗೆ ಸಿಎಂ ಖುರ್ಚಿ ನಿಡ್ತಾರಾ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ರಾಜ್ಯದಲ್ಲಿ ಚುನಾವಣೆ ಘೋಷಣೇಯಾದ ಸಂದರ್ಭದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದು ಸೋನಿಯಾ ಗಾಂಧಿಗೆ ಉಡುಗೊರೆ ಕೊಡ್ತಿನಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮಾಡಿದ  ಶಪಥ ಮಾಡಿದ್ದರು. ಈಗ ಗೆದ್ದಾಯ್ತು..! ಕರ್ನಾಟಕ ದಲ್ಲಿ ಕಾಂಗ್ರೆಸ್ ಪಕ್ಷ ದಾಖಲೆಯ ಜಯ ದಾಖಲಿಸಿದ್ದೂ ಆಯ್ತು. ಕರ್ನಾಟಕ ಗೆದ್ದ ಗಂಡುಗಲಿಗೆ ಸೋನಿಯಾ ಗಾಂಧಿ ಸಿಎಂ ಪದವಿ ಉಡುಗೊರೆಯಾಗಿ ಕೊಡ್ತಾರಾ? ಎಂಬ ಪ್ರಶ್ನೆ ಎದ್ದಿದೆ. 

Karnataka election results 2023: ಜನರಿಗೆ ನಿಮ್ಮನ್ನು‌ನೋಡಿ ನೋಡಿ ವಾಂತಿ ಬರೋಂಗಾಗಿದೆ: ಖರ್ಗೆ

62ನೇ ವರ್ಷದಿಂದ ರಾಜಯೋಗ ಬರಲಿದೆಯೇ?: ಮೇ 15 ಕ್ಕೆ ಡಿ.ಕೆ.ಶಿವಕುಮಾರ್ ಅವರ ಹುಟ್ಟುಹಬ್ಬವಿದೆ. ಹುಟ್ಟುಹಬ್ಬದ ಉಡುಗೊರೆಯಾಗಿ ಡಿ.ಕೆ. ಶಿವಕುಮಾರ್‌ಗೆ ದಕ್ಕಲಿದ್ಯಾ ಸಿಎಂ ಹುದ್ದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಸೋನಿಯಾ ಗಾಂಧಿ ಮೇಡಂ ಅವರು ಸಿಎಂ ಹುದ್ದೆ ಕೊಟ್ಟು ಸಿಹಿ ತಿನ್ನಿಸುತ್ತಾರಾ ಎಂದು ಕಾದುನೋಡಬೇಕಿದೆ. ಈಗ ಒಟ್ಟು 61 ವರ್ಷಗಳು ಪೂರೈಸುತ್ತುರುವ ಡಿಕೆಶಿಗೆ ಸಿಎಂ ಪದವಿ ಉಡುಗೊರೆಯಾಗಿ ಸಿಗಲಿದ್ಯಾ ಎಂಬುದು ಕುತೂಹಲಕ್ಕೆ ಕಾರಣವಾಗದೆ. ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷನಾಗಿ, ಸಂಘಟನೆ, ಉತ್ತಮ ತಂತ್ರಗಾರಿಕೆ ಮುಂದಿಟ್ಟು ಪಕ್ಷದ ದಾಖಲೆಯ ಗೆಲುವು ತಂದುಕೊಟ್ಟಿದ್ದಾರೆ. ಈಗ 62 ನೇ ವಯಸ್ಸಿನಿಂದ ಡಿ.ಕೆ. ಶಿವಕುಮಾರ್‌ಗೆ ರಾಜಯೋಗ ಶುರುವಾಗುತ್ತದೆ ಎಂದು ಭವಿಷ್ಯ ಹೇಳಿದ್ದು, ಅದು ನಿಜವಾಗಲಿದೆಯೇ ಎಂಬಂತಾಗಿದೆ. 

ಕೆಪಿಸಿಸಿ ಅಧ್ಯಕ್ಷರಿಗೇ ಸಿಎಂ ಪಟ್ಟ ನೀಡುವ ಸಂಪ್ರದಾಯ: ರಾಜ್ಯದಲ್ಲಿ ಹಿಂದಿನಿಂದಲೂ ಕಾಂಗ್ರೆಸ್‌ ಒಮದು ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ರಾಜ್ಯದ ಕಾಂಗ್ರೆಸ್‌ ಅಧ್ಯಕ್ಷ) ಅಧ್ಯಕ್ಷ ಆದವರು ಕಾಂಗ್ರೆಸ್‌ ಬಹುಮತ ಬಂದಾಗ ಮುಖ್ಯಮಂತ್ರಿ ಆಗುವುದು ಸಂಪ್ರದಾಯವಾಗಿದೆ. ಆದರೆ, 2013ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಜಿ. ಪರಮೇಶ್ವರ್‌ ಅವರು ಕೊರಟಗೆರೆ ಕ್ಷೇತ್ರದಲ್ಲಿ ಸೋತಿದ್ದರಿಂದ ಅವರನ್ನು ಮುಖ್ಯಮಂತ್ರಿ ಮಾಡದೇ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು. ಈಗ ಪುನಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಗೆ ಸಿಎಂ ಪಟ್ಟ ಕೊಡುವರೋ ಅಥವಾ ಸಂಪ್ರದಾಯ ಮುರಿದು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡುವರೋ ಕಾದು ನೋಡಬೇಕಿದೆ.

Karnataka election results 2023: ನಾನೇ ಸಿಎಂ 'ಆಗ್ಬೇಕು', ಹೈಕಮಾಂಡ್‌ ಮುಂದೆ ಡಿಕೆಶಿ ಪಟ್ಟು

ತಮ್ಮ ಗುರುವನ್ನೇ ಮೀರಿಸಿದ ಶಿಷ್ಯ ಡಿಕೆಶಿ:  ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಒಕ್ಕಲಿಗ ಮುಖಂಡ ಎಸ್‌.ಎಂ. ಕೃಷ್ಣ ಅವರು ರಾಜ್ಯದಲ್ಲಿ 2004ರಲ್ಲಿ ರಾಜ್ಯಾದ್ಯಂತ ಭಾರಿ ಕಸರತ್ತು ನಡೆಸಿ ಕಾಂಗ್ರೆಸ್‌ಗೆ 132 ಸ್ಥಾನ ಗೆಲ್ಲಿಸುವಲ್ಲಿ ಸಫಲರಾಗಿದ್ದರು. ಆದರೆ, ಈಗ ಅವರ ಪರಮ ಶಿಷ್ಯನಾಗಿರುವ ಡಿ.ಕೆ. ಶಿವಕುಮಾರ್‌ ಕೆಪಿಸಿಸಿ ಅಧ್ಯಕ್ಷರಾಗಿದ್ದ ವೇಳೆ 136 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲ್ಲುವಂತೆ ಶ್ರಮಿಸಿದ್ದಾರೆ. ಈ ಮೂಲಕ ಗುರುವನ್ನೇ ಮಿರಿಸಿದ ಶಿಷ್ಯನಾಗಿ ಹೊರ ಹೊಮ್ಮಿದ್ದಾರೆ. ಪ್ರತಿ ಬಾರಿ ರಾಜ್ಯದಲ್ಲಿ ಒಕ್ಕಲಿಗ ಸಮುದಾಯದ ಕಾಂಗ್ರೆಸ್‌ ನಾಯಕ ಕೆಪಿಸಿಸಿ ಅಧ್ಯಕ್ಷರಾದಾಗಲೂ ರಾಜ್ಯದಲ್ಲಿ ಕಾಂಗ್ರೆಸ್‌ ಶೇ.40 ಮತಗಳನ್ನು ಗಳಿಸುವಲ್ಲಿ ಯಶಸ್ವಿ ಆಗಿದೆ. ಮತ್ತೊಂದೆಡೆ, ರಾಜ್ಯದಲ್ಲಿ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಭಾರತ್‌ ಜೋಡೋ ಯಾತ್ರೆಯನ್ನು ಆರಂಭಿಸಿದ್ದ ವೇಳೆ 136 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲ್ಲಲಿದೆ ಎಂದು ಹೇಳಿದ್ದು, ಈಗ ಆ ಮಾತನ್ನು ಸಾಬೀತು ಮಾಡಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ