ಕೊಪ್ಪಳ: ಕಾಂಗ್ರೆಸ್ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲುತ್ತದೆ: ಬಯ್ಯಾಪುರ ವಿಶ್ವಾಸ

By Kannadaprabha News  |  First Published Apr 20, 2023, 10:57 AM IST

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಡೆದ ಮತಗಳಿಗಿಂತಲೂ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಅಮರೇಗೌಡ ಪಾಟೀಲ ಬಯ್ಯಾಪುರ ಹೇಳಿದರು.


ಕುಷ್ಟಗಿ (ಏ.20) : ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಡೆದ ಮತಗಳಿಗಿಂತಲೂ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಅಮರೇಗೌಡ ಪಾಟೀಲ ಬಯ್ಯಾಪುರ ಹೇಳಿದರು.

ಪಟ್ಟಣದ ತಹಸೀಲ್ದಾರ್‌ ಕಚೇರಿಯಲ್ಲಿ ಚುನಾವಣಾಧಿಕಾರಿ ಚಿದಾನಂದಪ್ಪ ಅವರಿಗೆ ಕಾಂಗ್ರೆಸ್‌ ಅಭ್ಯರ್ಥಿ(Congress Candidate)ಯಾಗಿ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕಳೆದ ಚುನಾವಣೆಗಿಂತ ಈ ಚುನಾವಣೆಯಲ್ಲಿ ಮತದಾರರ ಸಂಖ್ಯೆ ಹೆಚ್ಚಾಗಿದ್ದು ಹಾಗೂ ನಾನು ಕುಷ್ಟಗಿ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಕುರಿತು ತಾಲೂಕಿನ ಜನತೆಗೆ ತಿಳಿಸಲಾಗಿದೆ. ಅವರು ಸಹ ತಿಳಿದುಕೊಂಡಿದ್ದು ಈ ಚುನಾವಣೆಯಲ್ಲಿ ಅತ್ಯಧಿಕ ಮತಗಳ ಅಂತರದಲ್ಲಿ ನಮ್ಮ ಕ್ಷೇತ್ರದ ಜನರು ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.

Tap to resize

Latest Videos

undefined

ಹಾಲಪ್ಪ ಆಚಾರ ಶಕ್ತಿ ಪ್ರದರ್ಶನಕ್ಕೆ ಜನಸಾಗರ: ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ

ಇದು ನನ್ನ ಕೊನೆಯ ವಿಧಾನಸಭಾ ಚುನಾವಣೆಯಾಗಿದ್ದು, ಕಾರಣ ಎಲ್ಲ ರಾಜಕೀಯ ಪಕ್ಷಗಳಲ್ಲಿ ವಯಸ್ಸು ಆಗಿರುವ ರಾಜಕಾರಣಿಗಳು ನಿವೃತ್ತಿ ಹೊಂದುತ್ತಿರುವ ಹಿನ್ನೆಲೆಯಲ್ಲಿ ನಾನು ಸಹ ನಿವೃತ್ತಿ ಹೊಂದುತ್ತೆನೆ.ಒಂದು ವೇಳೆ ಲೋಕಸಭಾ ಚುನಾವಣೆಗೆ ಅವಕಾಶ ಸಿಕ್ಕರೆ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಇತ್ತೀಚಿಗೆ ನಮ್ಮ ಪಕ್ಷಕ್ಕೆ ಮಾಜಿ ಸಿಎಂ ಜಗದೀಶ ಶೆಟ್ಟರ(Jagadish shettar) ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ(Laxman savadi) ಸೇರಿರುವುದು ಪಕ್ಷಕ್ಕೆ ಬಲ ಬಂದಿದೆ ಹಾಗೂ ನಮ್ಮ ಕ್ಷೇತ್ರಕ್ಕೆ ಗೆಲವಿಗೆ ಅನುಕೂಲವಾಗಿದೆ ಇನ್ನೊಂದು ವಾರದಲ್ಲಿ ನಮ್ಮ ಕ್ಷೇತ್ರದ ಹನಮಸಾಗರ ಪಟ್ಟಣಕ್ಕೆ ಇಬ್ಬರು ನಾಯಕರನ್ನು ಕರೆಸಿ ಬೃಹತ್‌ ಕಾರ್ಯಕ್ರಮ ಮಾಡುವ ಆಲೋಚನೆ ಇದೆ ಎಂದು ಹೇಳಿದರು.

ಮಾಜಿ ಶಾಸಕ ಹಸನಸಾಬ ದೋಟಿಹಾಳ ಮಾತನಾಡಿ, ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿರುವ ಶಾಸಕ ಬಯ್ಯಾಪುರ ಅವರ ಗೆಲುವು ನಿಶ್ಚಿತವಾಗಿದ್ದು, ಬಿಜೆಪಿಯವರ ಬಣ್ಣದ ಮಾತುಗಳಿಗೆ ಮರುಳಾಗದೆ ಕಾಂಗ್ರೆಸ್‌ ಪಕ್ಷಕ್ಕೆ ಮತ ಹಾಕುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ .1500 ಕೋಟಿ ಹಣ ತಂದಿರುವ ಬಯ್ಯಾಪುರ ಅವರ ಕಾರ್ಯ ಶ್ಲಾಘನಿಯವಾಗಿದೆ. ಕ್ಷೇತ್ರದಲ್ಲಿ ಮತ್ತೊಮ್ಮೆ ಬಯ್ಯಾಪುರ ಅವರನ್ನು ಶಾಸಕ ಮಾಡಲು ಕಾರ್ಯಕರ್ತರು ಮುಂದಾಗಬೇಕು ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಹಸನಸಾಬ ದೋಟಿಹಾಳ, ಶೇಖರಗೌಡ ಮಾಲಿಪಾಟೀಲ, ಮಾಲತಿ ನಾಯಕ, ವಿಶ್ವನಾಥ ಕನ್ನೂರು,ಶಂಕರಗೌಡ ವಕೀಲರು, ಅಮರೇಗೌಡ ಪಾಟೀಲ,ಲಾಡ್ಲೆಮಷಾಕ ದೋಟಿಹಾಳ, ಪ್ರಕಾಶ ರಾಠೋಡ, ಶಕುಂತಲಾ ಹಿರೇಮಠ, ಚಂದ್ರು ನಾಲತವಾಡ, ವಸಂತ ಮೇಲಿನಮನಿ, ಶಿವರಾಜ ಕಟ್ಟಿಮನಿ, ಶಿವಶಂಕರಗೌಡ ಕಡೂರು, ಮಹಾಂತೇಶ ಬಂಡೇರ, ಮುತ್ತಣ್ಣ ಕರಡಿ, ಸೇರಿದಂತೆ ಇತರರು ಇದ್ದರು.

ಬಿಜೆಪಿ ಸರ್ಕಾರದಿಂದ ಅನುದಾನ ಹಂಚಿಕೆಯಲ್ಲಿ ತಾರತಮ್ಯ: ಅಮರೇಗೌಡ 

ಅಮರೇಗೌಡರ ಪತ್ನಿಯೇ ಶ್ರೀಮಂತ !

ಕುಷ್ಟಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಅಮರೇಗೌಡ ಬಯ್ಯಾಪುರ ಕುಟುಂಬದ ಆಸ್ತಿ .4.22 ಕೋಟಿ ಇದ್ದು, ಇದರಲ್ಲಿ ಇವರ ಪತ್ನಿಯೇ ಶ್ರೀಮಂತರಾಗಿದ್ದಾರೆ ಎನ್ನುವುದು ಗಮನಾರ್ಹ ಸಂಗತಿ.

ಅಮರೇಗೌಡ ಬಯ್ಯಾಪುರ(Amaregowda patil bayyapur) ಚರಾಸ್ತಿ . 52 ಲಕ್ಷ, ಸ್ಥಿರಾಸ್ತಿ .1.36 ಕೋಟಿ ಇದೆ. ಇವರ ಪತ್ನಿಯ ಚರಾಸ್ತಿ .64 ಲಕ್ಷ ಇದ್ದರೆ ಸ್ಥಿರಾಸ್ತಿ .2.70 ಕೋಟಿ ಇದೆ. ಅಮರೇಗೌಡ ಅವರ ಬಳಿ ಒಂದು ಗ್ರಾಂ ಬಂಗಾರವೂ ಇಲ್ಲ.ಆದರೆ, ಅವರ ಪತ್ನಿಯ ಬಳಿ 983ಗ್ರಾಂ ಚಿನ್ನ ಹಾಗೂ 1200 ಗ್ರಾಂ ಬೆಳ್ಳಿ ಇದೆ. ಕಳೆದ ಅವಧಿಯಲ್ಲಿ ಸಲ್ಲಿಸಲಾದ ಆಸ್ತಿ ವಿವರಕ್ಕೂ ಈ ಬಾರಿ ಸಲ್ಲಿಸಿರುವ ಆಸ್ತಿ ವಿವರಕ್ಕೂ ಅಂಥ ಗಮನಾರ್ಹ ವ್ಯತ್ಯಾಸವಾಗಿಲ್ಲ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!