ಬಿಜೆಪಿಗೆ ಈ ಬಾರಿಯೂ ರಾಜ್ಯದಲ್ಲಿ ಸ್ಪಷ್ಟಬಹುಮತ ಬರುವ ಭರವಸೆಯಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ತುಮಕೂರು (ಏ.28): ಬಿಜೆಪಿಗೆ ಈ ಬಾರಿಯೂ ರಾಜ್ಯದಲ್ಲಿ ಸ್ಪಷ್ಟಬಹುಮತ ಬರುವ ಭರವಸೆಯಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಮುಖಂಡ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ನಾವು ಸ್ವಂತ ಬಲದ ಮೇಲೆ ಸರ್ಕಾರ ರಚನೆ ಮಾಡುತ್ತೇವೆ. ಈ ಬಾರಿ 123 ಸ್ಥಾನ ಗೆದ್ದೇ ಗೆಲ್ಲುತ್ತೇವೆ. ಆ ನಿಟ್ಟಿನಲ್ಲಿ ಶ್ರಮ ಹಾಕಿದ್ದೇವೆ. ಬಿಜೆಪಿ ಅವರಿಗೆ ಸಂಪೂರ್ಣ ಬಹುಮತ ಬರುವ ಭರವಸೆ ಇಲ್ಲ. ಹಾಗಾಗಿ ಜೋಶಿ ಸಪೋರ್ಟ್ ಬಗ್ಗೆ ಮಾತಾನಾಡಿದ್ದಾರೆ ಎಂದು ಎಚ್‌ಡಿಕೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ನಾವೇನಾದರೂ ಬೆಂಬಲ ಕೊಡುತ್ತೇವೆ ಎಂದು ಹೇಳಿದ್ದೇವಾ.
ಬೆಂಬಲ ಕೊಡುತ್ತೇವೆ ಎಂದು ಅರ್ಜಿ ಹಾಕಿಕೊಂಡು ಹೋಗಿದ್ದೇವಾ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಜೋಷಿಯವರು ಬೆಂಬಲ ಕೊಡುತ್ತಾರೆ ಎಂದು ಯಾರು ಹೇಳಿದ್ದರು ಎಂದರು. ಎಂ.ಎಲ್ ಸಿ.ಭೋಜೆಗೌಡ ಕಾಂಗ್ರೆಸ್‌ಗೆ ಬೆಂಬಲಿಸಿ ಎಂಬ ಹೇಳಿಕೆ ವಿಷಯಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಚಿಕ್ಕಮಗಳೂರು ರಾಜಕಾರಣದಲ್ಲಿ ಸೆಕ್ಯೂಲರ್ ಮತಗಳು ಡಿವೈಡ್ ಆಗಿದ್ದವು. ಈಗ ಸೆಕ್ಯೂಲರ್ ಓಟ್‌ಗಳು ಒಂದಾಗಲಿ ಎಂಬ ಅರ್ಥದಲ್ಲಿ ಭೋಜೇಗೌಡರು ಹೇಳಿದ್ದಾರೆ. ಅವರಿಗೆ ನೋಟಿಸ್ ಕೊಡಲು ಹೇಳಲಾಗಿದೆ ಎಂದರು. ತುಮಕೂರು ನಗರ ಜೆ.ಡಿ.ಎಸ್ ಅಭ್ಯರ್ಥಿ ಗೋವಿಂದರಾಜು ಅಶ್ಲೀಲ ವಿಡಿಯೋ ವೈರಲ್ ವಿಷಯಕ್ಕೆ ಪ್ರತಿಕ್ರಿಯಿಸಿದ ಹೆಚ್‌ಡಿಕೆ, ಈ ರೀತಿ ಪಿತೂರಿ ಮಾಡಿದವರು ಏನ್ ಸಾಚಾಗಳಾ? ಅದು ಷಡ್ಯಂತ್ಯ.
ಅಳೆದು ತೂಗಿ ಯೋಗ್ಯರಿಗೆ ನಿಮ್ಮ ಮತ ನೀಡಿ: ಸಿ.ಟಿ.ರವಿ
ಬಿಜೆಪಿಯವರು ಈ ತರಹದ ಕೇಸ್‌ಗಳಿಗೆಲ್ಲಾ ಮೊದಲೇ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದಾರೆ. ಆದರೆ ನಾವು ಸ್ಟೇ ತೆಗೆದುಕೊಂಡಿಲ್ಲ. ಈ ತರಹ ಪಿತೂರಿ ಮಾಡಿದವರೆಲ್ಲಾ ಸತ್ಯ ಹರಿಶ್ಚಂದ್ರರಾ ಎಂದು ಖಾರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಮನುಷ್ಯನಲ್ಲಿ ಕೆಲವು ಸಹಜ ಗುಣಗಳಿರುತ್ತವೆ. ಹಾಗಾಗಿ ನಾವು ಎಚ್ಚರದಿಂದ ಇರಬೇಕು ಎಂದರು. ಕಾಂಗ್ರೆಸ್ ಮೇಲೆ ಸಾಫ್ಟ್ ಕಾರ್ನರ್ ಇಲ್ಲ. ನಾನು ಯಾವುದೇ ಪಕ್ಷದ ಮೇಲೂ ಸಾಫ್ಟ್ ಕಾರ್ನರ್ ಇಲ್ಲ. ವರುಣದಲ್ಲಿ ಬಿಜೆಪಿ ಜೊತೆ ಒಳ ಒಪ್ಪಂದ ಮಾಡಿಕೊಂಡಿಲ್ಲ. ನಾನೇಕೆ ಒಳ ಒಪ್ಪಂದ ಮಾಡಿಕೊಳ್ಳಲಿ ಎಂದ ಕುಮಾರಸ್ವಾಮಿ, ಮಾಜಿ ಶಾಸಕನನ್ನು ನಿಲ್ಲಿಸಿದ್ದೇನೆ. ಗೆಲ್ಲಿಸಿಕೊಂಡು ಬರುತ್ತೇವೆ ಎಂದರು.
ಜನತೆಯ ಪ್ರೀತಿ ವಿಶ್ವಾಸ ಧನ್ಯತಾ ಭಾವನೆ ಮೂಡಿಸಿದೆ: ಸಚಿವ ಸುಧಾಕರ್
ದೇವೆಗೌಡರು ಸೋಲಲು ಕಾಂಗ್ರೆಸ್ ಕಾರಣ: ದೇವೇಗೌಡರು ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ದೇವೇಗೌಡರು ಸೋಲರು ಕಾಂಗ್ರೆಸ್ ಕಾರಣ ಎಂದ ಕುಮಾರಸ್ವಾಮಿ, ಅಂಥವರು, ಇಂಥವರು ಅಂತಾ ಯಾರ ಹೆಸರನ್ನೂ ಹೇಳಲ್ಲ. ಜಿಲ್ಲಾ ಕಾಂಗ್ರೆಸ್ ಮುಖಂಡ ಷಫಿ ಅಹಮದ್ ಜೆಡಿಎಸ್‌ಗೆ ಸೇರ್ಪಡೆಯಾಗಿದ್ದಾರೆ. ಮುಂದೆ ಅವರ ಅಳಿಯ ಮಾಜಿ ಶಾಸಕ ಡಾ. ರಫೀಕ್ ಅಹಮದ್ ಪಕ್ಷಕ್ಕೆ ಬರುವ ವಿಶ್ವಾಸವಿದೆ ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.