ಕರ್ನಾಟಕದ ಚುನಾವಣೆಯಲ್ಲಿ ಈಗ ಬಾಲ ಗೋಪಾಲರ ನೃತ್ಯ ನಡೆಯುತ್ತಿದೆ. ಏ.29ರ ನಂತರ ನಮ್ಮ ನಾಯಕ ನರೇಂದ್ರ ಮೋದಿ ಅವರು ರಂಗಪ್ರವೇಶ ಮಾಡಿದರೆ ಬಿಜೆಪಿ 130ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರು (ಏ.22): ಕರ್ನಾಟಕದ ಚುನಾವಣೆಯಲ್ಲಿ ಈಗ ಬಾಲ ಗೋಪಾಲರ ನೃತ್ಯ ನಡೆಯುತ್ತಿದೆ. ಏ.29ರ ನಂತರ ನಮ್ಮ ನಾಯಕ ನರೇಂದ್ರ ಮೋದಿ ಅವರು ರಂಗಪ್ರವೇಶ ಮಾಡಿದರೆ ಬಿಜೆಪಿ 130ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿಶ್ವಾಸ ವ್ಯಕ್ತಪಡಿಸಿದರು. ಮೈಸೂರು ವಿಭಾಗದ ಡಿಜಿಟಲ್ ಕಾರ್ಯಕರ್ತರ ಸಮ್ಮೇಳನ ಉದ್ಘಾಟಿಸಿ ಶುಕ್ರವಾರ ಮಾತನಾಡಿದ ಅವರು, ಕಾಂಗ್ರೆಸ್ 130 ಸೀಟು ಗೆಲ್ಲುತ್ತದೆ ಎಂದು ಹೇಳಿರುವ ಸರ್ವೇ ಸಂಸ್ಥೆಗಳ ಹೆಸರನ್ನೇ ನಾವು ಕೇಳಿಲ್ಲ. 2018ರಲ್ಲೂ ಕಾಂಗ್ರೆಸ್ 130 ಸೀಟು ಗೆಲ್ಲುತ್ತದೆ ಎಂದು ಸಮೀಕ್ಷೆಗಳು ಹೇಳಿದ್ದವು.
ಆದರೆ, ಕಾಂಗ್ರೆಸ್ 79 ಸ್ಥಾನ ಪಡೆಯಿತು ಎಂದರು. ಈಗಾಗಲೇ ವಿವಿಧ ಸಮೀಕ್ಷೆಗಳು ಬಿಜೆಪಿ 103 ಸ್ಥಾನ ಗೆಲ್ಲಲಿದೆ ಎಂದು ಹೇಳಿವೆ. ಇನ್ನು ನಮ್ಮ ನಾಯಕರು ರಂಗಪ್ರವೇಶ ಮಾಡಿದರೆ 130ಕ್ಕೂ ಹೆಚ್ಚು ಸ್ಥಾನ ಗೆಲ್ಲುವುದು ಖಚಿತ. ಯಕ್ಷಗಾನ ಪ್ರದರ್ಶನದ ಆರಂಭದಲ್ಲಿ ಬಾಲಗೋಪಾಲರ ನೃತ್ಯ ಇದೆ. ಕರ್ನಾಟಕದ ಚುನಾವಣೆಯಲ್ಲಿ ಈಗ ಬಾಲ ಗೋಪಾಲರ ನೃತ್ಯ ನಡೆಯುತ್ತಿದೆ. ಈವರೆಗೆ ಬಿಜೆಪಿಗೆ 103 ಸ್ಥಾನ ಬರುತ್ತಿದೆ. ಏ.29ರ ನಂತರ ಬಣ್ಣದ ವೇಷ ತೊಟ್ಟು ನಮ್ಮ ನಾಯಕರಾದ ಮೋದಿ ರಂಗ ಪ್ರವೇಶ ಮಾಡಲಿದ್ದಾರೆ. ಆಗ ಬಿಜೆಪಿಯ ಸ್ಥಾನ 113, 120, 133 ಆಗಿ, ಸಂಪೂರ್ಣ ಬಹುಮತ ಬರಲಿದೆ ಎಂದು ಹೇಳಿದರು.
ಡಿಕೆಶಿ ಯಾವ ಜಾತಿ ಮೀಸಲಾತಿ ಕಡಿಮೆ ಮಾಡ್ತಾರೆ?: ಜೆ.ಪಿ.ನಡ್ಡಾ
ಹಾಗಂತ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಜವಾಬ್ದಾರಿ ನೀಡದೆ ಸಂಪೂರ್ಣ ಬಹುಮತ ಬರುವವರೆಗೆ ವಿರಮಿಸುವುದಿಲ್ಲ. ನಮ್ಮ ಸಂಕಲ್ಪ ಸಂಪೂರ್ಣ ಬಹುಮತಕ್ಕೆ ಇರಬೇಕು. ಮೇ 10 ವರೆಗೆ ಶ್ರಮಪಟ್ಟರೆ ಮೇ 13 ರಂದು ಖುಷಿ ಅನುಭವಿಸಬಹುದು ಎಂದರು. ಮೈಸೂರಿನ ಯಜಮಾನರೊಬ್ಬರು ವರುಣದಿಂದ, ಚಾಮುಂಡೇಶ್ವರಿ, ಚಾಮುಂಡೇಶ್ವರಿಯಿಂದ ಬಾದಾಮಿ, ಬಾದಾಮಿಯಿಂದ ಕೋಲಾರಕ್ಕೆ ಹೋಗಿ, ಮರಳಿ ವರುಣಕ್ಕೆ ಬಂದಿದ್ದಾರೆ. ಆದರೆ ನಮ್ಮ ಸಿಎಂ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವಿ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಗೆಲ್ಲುವ ವಿಶ್ವಾಸದಲ್ಲಿದ್ದಾರೆ ಎಂದರು.
ಕಾಂಗ್ರೆಸ್‌ನವರನ್ನು ನೋಡಿದರೆ ಅಯ್ಯೋ ಅನಿಸುತ್ತದೆ: ಕನ್ನಡವೇ ಬಾರದ ಮೊಮ್ಮಗನನ್ನು ಸಿದ್ದರಾಮಯ್ಯ ರಾಜಕೀಯಕ್ಕೆ ಪರಿಚಯಿಸಿದ್ದಾರೆ. ನನಗೆ ಕಾಂಗ್ರೆಸ್‌ನ ಕಾರ್ಯಕರ್ತರನ್ನು ನೋಡಿದರೆ ಅಯ್ಯೋ ಎನಿಸುತ್ತದೆ. ಆದರೆ ಬಿಜೆಪಿಯ 48 ಮಂದಿ ಕಾರ್ಯಕರ್ತರಿಗೆ ಟಿಕೆಟ್ ನೀಡಿದೆ. ಪಕ್ಷ ಸಂಘಟಿಸಿದವರಿಗೆ ಫಲ ದೊರಕಿದೆ ಎಂದರು. ತ್ಯಾಗ ಎಂದರೆ ಯಾವುದು?: ಪತ್ರಕರ್ತರೊಬ್ಬರು ಅಪ್ಪನಿಗಾಗಿ ಮಗ ಸೀಟು ತ್ಯಾಗ ಮಾಡಿದ ಎಂದು ಬರೆದಿದ್ದಾರೆ. ಏನು ತ್ಯಾಗ ಮಾಡಿದ? ದೇಶ ಕಟ್ಟಿದ್ದನೇ? ಒಲಿಂಪಿಕ್ಸ್ ಅಥವಾ ವಿಶ್ವ ಚಾಂಪಿಯನ್ ಸ್ಪರ್ಧೆಯಲ್ಲಿ ಪದಕ ಗೆದ್ದನೇ? ತ್ಯಾಗ ಎಂದರೆ ಈಶ್ವರಪ್ಪ, ರಘುಪತಿ ಭಟ್, ಎಸ್.ಎ.ರಾಮದಾಸ್ ಮಾಡಿದ್ದು ಎಂದರು.
ಲಿಂಗಾಯತ ಡ್ಯಾಂ ಒಡೆವ ಭ್ರಮೆಯಲ್ಲಿ ಡಿಕೆಶಿ: ಸಿಎಂ ಬೊಮ್ಮಾಯಿ ಟಾಂಗ್
ವರುಣ ಕ್ಷೇತ್ರದಲ್ಲಿ ಸೋಮಣ್ಣ ಸ್ಪರ್ಧೆ ಬಳಿಕ ಸಿದ್ದರಾಮಯ್ಯ ಅವರ ಸ್ವರ ಉಡುಗಿದೆ. ಮುಖದಲ್ಲಿ ಕಳೆಯೂ ಇಲ್ಲ. ಈಗ ಬಿಜೆಪಿ ಕೊಟ್ಟಿರುವ ಮೀಸಲಾತಿ ಹಿಂದಕ್ಕೆ ಪಡೆಯುವುದಾಗಿ ಹೇಳುತ್ತಿದ್ದಾರೆ. ಆದರೆ ಅವರು ಅಧಿಕಾರಕ್ಕೆ ಬರುವುದಿಲ್ಲ ಎಂದು ಟೀಕಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.