ಕಚ್ಚೆ ಹರುಕರು ಯಾರೆಂದು ದೇಶಕ್ಕೇ ಗೊತ್ತು: ಕಾಂಗ್ರೆಸ್‌

Published : Sep 13, 2022, 05:00 AM IST
ಕಚ್ಚೆ ಹರುಕರು ಯಾರೆಂದು ದೇಶಕ್ಕೇ ಗೊತ್ತು: ಕಾಂಗ್ರೆಸ್‌

ಸಾರಾಂಶ

ಕಚ್ಚೆ ಹರುಕರು ಯಾರು ಎನ್ನುವುದು ಇಡೀ ದೇಶಕ್ಕೆ ತಿಳಿದಿದೆ. ಸಿ.ಡಿ.ಗೆ ತಡೆಯಾಜ್ಞೆ ತಂದವರು, ಅತ್ಯಾಚಾರ ಆರೋಪದಲ್ಲಿ ರಾಜೀನಾಮೆ ಕೊಟ್ಟವರು ಯಾವ ಪಕ್ಷದವರು? ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸಾಲು-ಸಾಲು ವಿಡಿಯೋ ಹೊರಬಂದಿದ್ದು ಯಾವ ಪಕ್ಷದವರದ್ದು?

ಬೆಂಗಳೂರು (ಸೆ.13): ‘ಕಚ್ಚೆ ಹರುಕರು ಯಾರು ಎನ್ನುವುದು ಇಡೀ ದೇಶಕ್ಕೆ ತಿಳಿದಿದೆ. ಸಿ.ಡಿ.ಗೆ ತಡೆಯಾಜ್ಞೆ ತಂದವರು, ಅತ್ಯಾಚಾರ ಆರೋಪದಲ್ಲಿ ರಾಜೀನಾಮೆ ಕೊಟ್ಟವರು ಯಾವ ಪಕ್ಷದವರು? ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸಾಲು-ಸಾಲು ವಿಡಿಯೋ ಹೊರಬಂದಿದ್ದು ಯಾವ ಪಕ್ಷದವರದ್ದು? ಹರಿದಿರುವ ನಿಮ್ಮವರ ಕಚ್ಚೆಗಳನ್ನು ಬಿಗಿಯಾಗಿ ಕಟ್ಟಿನಂತರ ಮಾತನಾಡಲು ಬನ್ನಿ’ ಎಂದು ಬಿಜೆಪಿ ನಾಯಕ ಸಿ.ಟಿ.ರವಿಗೆ ರಾಜ್ಯ ಕಾಂಗ್ರೆಸ್‌ ತಿರುಗೇಟು ನೀಡಿದೆ. 

ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬಗ್ಗೆ ಕಚ್ಚೆ ಹರುಕ ಹೇಳಿಕೆ ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿಕೆಗೆ ಬಗ್ಗೆ ಸರಣಿ ಟ್ವೀಟ್‌ಗಳ ಮೂಲಕ ಕಿಡಿಕಾರಿದೆ. ಕಂಡ ಕಂಡಲ್ಲಿ ಕಚ್ಚೆ ಹರಿದುಕೊಂಡವರು ಬಿಜೆಪಿಗರೇ ಅಲ್ಲವೇ ಲೂಟಿ ರವಿ ಅವರೇ, ಬಿಜೆಪಿಯ ಕಚ್ಚೆ ಪುರಾಣಗಳು ರಾಜ್ಯದ ಹಳ್ಳಿಹಳ್ಳಿಗಳ ಕಟ್ಟೆ ಪುರಾಣಗಳಿಗೆ ಆಹಾರವಾಗಿವೆ. ಅತಿವೃಷ್ಟಿಸಂಕಷ್ಟದಲ್ಲಿರುವ ಜನತೆಗೆ ನೆರವಾಗುವ ಬಗ್ಗೆ ಒಂದಾದರೂ ಮಾತು ನಿಮ್ಮ ಬಾಯಲ್ಲಿ ಬರುವುದೇ?

ಬೆಂಗಳೂರಿನ ಸಂಕಷ್ಟಗಳಿಗೆ 'ಭ್ರಷ್ಟರಾಮಯ್ಯ' ಕಾರಣ: ಸಿದ್ದುಗೆ ಬಿಜೆಪಿ ಗುದ್ದು

ನೀವೆಷ್ಟೇ ಬಾಯಿ ಹರಿದುಕೊಂಡರೂ ಮತ್ತೆ ಸಂಪುಟದಲ್ಲಿ ಸ್ಥಾನ ಸಿಗದು ಎಂದು ಟೀಕಿಸಿದೆ. ಲಂಚ- ಮಂಚದ ಸರ್ಕಾರದ ಸಾಧನೆಗಳೆಲ್ಲವೂ ದುಂಡಗಿವೆ. ಸಿ.ಡಿ.ಗಳಿಗೆ ತಡೆಯಾಜ್ಞೆ ತಂದಿದ್ದು, 40% ಕಮಿಷನ್‌ ತಿಂದಿದ್ದು, ನೆರೆ ಸಂತ್ರಸ್ತರನ್ನು ಮರೆತು ದೋಸೆ ತಿಂದಿದ್ದು ಮಾತ್ರ ಬಿಜೆಪಿಯ ಸಾಧನೆ ಹಾಗೂ ಸ್ಪಂದನೆ. ಸರ್ಕಾರದ ಒಂದು ಯಶಸ್ವಿ ಯೋಜನೆ ಬಗ್ಗೆ ಹೇಳಲೂ ಧಮ್‌ ಇಲ್ಲದೆ ಅನಗತ್ಯ ಹೇಳಿಕೆಗಳ ಮೂಲಕ ಸಿ.ಟಿ. ರವಿ ಅವರು ಕಾಲ ಕಳೆಯುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದೆ.

ವೈಯಕ್ತಿಕ ಟೀಕೆಗೆ ಸುಬ್ರಹ್ಮಣ್ಯ ಖಂಡನೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ನಾಯಕರು ಪದೇ ಪದೇ ವೈಯಕ್ತಿಕ ಟೀಕೆ ಮಾಡುತ್ತಿರುವುದಕ್ಕೆ ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ಖಂಡಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಸಿದ್ಧರಾಮಯ್ಯ ಅವರನ್ನು ಕಚ್ಚೆಹರುಕ ಅನ್ನಬಹುದಲ್ವಾ? ಎಂಬ ಅತ್ಯಂತ ಕೀಳು ಶಬ್ದಗಳ ಮೂಲಕ ಜನನಾಯಕರಾದ ಸಿದ್ದರಾಮಯ್ಯ ಅವರನ್ನು ನಿಂದಿಸಿದ್ದಾರೆ. ಅಲ್ಲದೇ ಇದು ಮೈಸೂರು ಜನ ಹೇಳುತ್ತಾರೆ ಎಂದೂ ಹೇಳಿದ್ದಾರೆ. ಸಿದ್ದರಾಮಯ್ಯರ 75 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಮೈಸೂರಿನ ಜನ ಎಂದೂ ಹಾಗೆ ಹೇಳಿದವರಲ್ಲ. 

ಒಂದು ವೇಳೆ ಹೇಳಿದ್ದಾರೆ ಎನ್ನುವುದಾದರೆ ಸಿ.ಟಿ.ರವಿ ಅವರು ಸಾಕ್ಷ್ಯಾಧಾರ ಕೊಡಲಿ. ಸುಖಾಸುಮ್ಮನೆ ಬಾಯಿಗೆ ಬಂದಂತೆ ನಾಲಿಗೆ ಹರಿಬಿಡುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವದ ಬಳಿಕ ಬಿಜೆಪಿಗೆ ಭಯ ಶುರುವಾಗಿದೆ. ಅದಕ್ಕಾಗಿ ಹಿಂದುಳಿದ ವರ್ಗಗಳ ನಾಯಕನನ್ನು ವೈಯಕ್ತಿಕವಾಗಿ ಕುಗ್ಗಿಸುವ ಹುನ್ನಾರ ನಡೆಯುತ್ತಿದೆ. ಬಿಜೆಪಿ ಇದನ್ನು ಇಲ್ಲಿಗೇ ಕೈಬಿಡದಿದ್ದರೆ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Karnataka Politics: ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ‘ಧಮ್‌ ಚಾಲೆಂಜ್‌’..!

ಸಿ.ಟಿ.ರವಿ ಕ್ಷಮೆಯಾಚನೆಗೆ ಹನಮಂತ ಆಗ್ರಹ: ಮಾಜಿ ಸಚಿವ, ಶಾಸಕ ಸಿ.ಟಿ.ರವಿ ಅವರು ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯನವರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಹೇಳಿಕೆ ನೀಡಬೇಕು. ಅಶ್ಲೀಲ ಶಬ್ದ ಬಳಕೆ ಮಾಡುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವಂತದಲ್ಲ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಹನಮಂತ ಅಪ್ಪನ್ನವರ ಕಿಡಿಕಾರಿದ್ದಾರೆ. ರಾಜಕಾರಣದಲ್ಲಿ ಟೀಕೆ ಸಹಜ. ಟೀಕೆ ಮಾಡುವಾಗ ಆರೋಗ್ಯಕರವಾದ ಟೀಕೆ ಮಾಡಲಿ. ಆದರೆ, ಸಿದ್ದರಾಮಯ್ಯನವರ ಬಗ್ಗೆ ವೈಯಕ್ತಿಕ ಟೀಕೆ ಮಾಡುವಾಗ ಬಳಸುವ ಪದ ಅಸಹ್ಯವಾಗಿದೆ. ಸಿ.ಟಿ.ರವಿ ಅವರು ಕಚ್ಚೆ ಹರುಕ ಸಿದ್ದರಾಮಯ್ಯ ಎಂಬ ಹೇಳಿಕೆಯನ್ನು ಕೂಡಲೇ ಹಿಂದಕ್ಕೆ ಪಡೆದು ಕ್ಷಮೆ ಯಾಚನೆ ಮಾಡಬೇಕು. ಇಲ್ಲದಿದ್ದರೇ ಸಿ.ಟಿ.ರವಿ ವಿರುದ್ಧ ಇಡಿ ಸಮಾಜ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದಯಮಾಡಿ ಅರ್ಥ ಮಾಡಿಕೊಳ್ಳಿ ತಪ್ಪು ತಿಳಿಯಬೇಡಿ: ಸೋದರನ ಪೋಸ್ಟ್‌ಗೆ ಹೆಬ್ಬಾಳ್ಕರ್ ಪ್ರತಿಕ್ರಿಯೆ
ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ