ಭರ್ಜರಿ ಭಾಷಣಗಳು, ಭರಪೂರ ಭರವಸೆಗಳು ಏನಾದವು? ಮಂಗಳೂರಿಗೆ ಬರುತ್ತಿರುವ ಮೋದಿಗೆ ಕೈ ಪ್ರಶ್ನೆ

Published : Sep 02, 2022, 11:28 AM ISTUpdated : Sep 02, 2022, 11:31 AM IST
ಭರ್ಜರಿ ಭಾಷಣಗಳು, ಭರಪೂರ ಭರವಸೆಗಳು ಏನಾದವು? ಮಂಗಳೂರಿಗೆ ಬರುತ್ತಿರುವ ಮೋದಿಗೆ ಕೈ ಪ್ರಶ್ನೆ

ಸಾರಾಂಶ

ಮೋದಿಗೆ ಸ್ವಾಗತ ಕೋರಿದ ಸಿದ್ದರಾಮಯ್ಯನವರು ನಿಮ್ಮ ಭೇಟಿ ವಿಕಾಸ ದರ್ಶನಕ್ಕೋ, ವಿನಾಶ ದರ್ಶನಕ್ಕೋ? ಎಂದು ಪ್ರಶ್ನಸಿದರೆ, ಇತ್ತ ಕಾಂಗ್ರೆಸ್‌ ಸಹ ಮೋದಿಗೆ ಹಲವು ಪ್ರಶ್ನೆಗಳನ್ನು ಕೇಳಿದೆ.   

ಮಂಗಳೂರು, (ಸೆಪ್ಟೆಂಬರ್.02): ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಸೆ.2) ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಮೋದಿ ಅವರನ್ನು ಬರಮಾಡಿಕೊಳ್ಳಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಶಿಲಾನ್ಯಾಸಕ್ಕಾಗಿ ಮಂಗಳೂರಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ‌ ಮೋದಿಯವರಿಗೆ ಕಾಂಗ್ರೆಸ್ ಮತ್ತೆ ಹಲವು ಪ್ರಶ್ನೆಗಳನ್ನು ಮುಂದಿಟ್ಟಿದೆ.

PM Narendra Modi ಯವರೇ, ನಿಮ್ಮ ಭೇಟಿ ವಿಕಾಸ ದರ್ಶನಕ್ಕೋ, ವಿನಾಶ ದರ್ಶನಕ್ಕೋ? ಸಿದ್ದರಾಮಯ್ಯ ಸರಣಿ ಟ್ವೀಟ್

ಕಳೆದ ಬಾರಿ ಬೆಂಗಳೂರು ಹಾಗೂ ಮೈಸೂರಿಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿಗೆ ಕಾಂಗ್ರೆಸ್ ಇದೇ ಪ್ರಶ್ನೆ ಮುಂದಿಟ್ಟಿತ್ತು. ಇದೀಗ ಅಚ್ಛೆ ದಿನ ಯಾವಾಗ ಎಂದು ಸರಣಿ ಟ್ವೀಟ್ ಮೂಲಕ ವ್ಯಂಗ್ಯವಾಡಿದೆ. ಕಾಂಗ್ರೆಸ್‌ ಮಾಡಿರುವ ಟ್ವೀಟ್ ಈ ಕೆಳಗಿನಂತಿದೆ.

ರಾಷ್ಟ್ರ ರಾಜಕಾರಣದಲ್ಲಿ ಹೊಸ ಧ್ರುವೀಕರಣ ಸೃಷ್ಟಿಯಾಗಿದೆ. ಲಂಚದ ಆರೋಪಿಗಳನ್ನು ರಕ್ಷಿಸಲು ಕೆಲವು ರಾಜಕೀಯ ಗುಂಪುಗಳು ಬಹಿರಂಗವಾಗಿಯೇ ಪ್ರಯತ್ನ ನಡೆಸುತ್ತಿವೆ ಎಂದು ಪ್ರಧಾನಿ‌ ನೀಡಿರುವ ಹೇಳಿಕೆಯನ್ನೇ ಅಸ್ತ್ರವಾಗಿ ಬಳಸಿರುವ ಕಾಂಗ್ರೆಸ್ 40 % ಕಮಿಷನ್ ಆರೋಪದ ಬಗ್ಗೆ ಮೌನವೇಕೆ? ಎಂದು ಪ್ರಶ್ನೆ ಮಾಡಿದೆ.

ಮೋದಿ ಕಾರ್ಯಕ್ರಮಕ್ಕೆ ಸರ್ಕಾರಿ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡು ಬಲವಂತದಿಂದ ಜನರನ್ನು ಸೇರಿಸುವ ದುರ್ಗತಿ ಕರ್ನಾಟಕ ಬಿಜೆಪಿ ಸರ್ಕಾರಕ್ಕೆ ಬಂದಿದೆ. ಈ ಬಲವಂತವೇ ಸರ್ಕಾರದ ದುರಾಡಳಿತಕ್ಕೆ, ಜನವಿರೋಧಕ್ಕೆ ಸಾಕ್ಷಿಯಾಗಿ ನಿಂತಿದೆ.  ಡಬಲ್ ಇಂಜಿನ್ ಸರ್ಕಾರದಿಂದ 'ಫಲ'ವೇ ಇಲ್ಲದಿರುವಾಗ ಫಲಾನುಭವಿಗಳು ಎಲ್ಲಿ ಸಿಗಬಲ್ಲರು!? #ModiMosa

ಬಿಜೆಪಿಯ ಚುನಾವಣಾ ಭರವಸೆಗಳು ಪುಸ್ತಕದೊಳಗಿನ ಮಾವಿನ ಹಣ್ಣಿನಷ್ಟೇ ರಸಭರಿತವಾಗಿತ್ತು! ಅಧಿಕಾರಕ್ಕೇರಿದ ನಂತರ ಅದು ಪುಸ್ತಕದಲ್ಲೇ ಉಳಿಯಿತು, ನೀಡಿದ ವಚನ ಮರೆತುಹೋಗಿತ್ತು. ಹಣ್ಣು ತರಕಾರಿಗಳ ಸಂಸ್ಕರಣೆ, ರಫ್ತು ಮಾಡಲು 3,000 ಕೋಟಿ ನಿಧಿ ಸ್ಥಾಪಿಸುತ್ತೇವೆ ಎಂದಿದ್ದು ಎಲ್ಲೋಯ್ತು ಎಂದು ಪ್ರಶ್ನಿಸಿದರು.

ಕಮಿಷನ್ ಹಣ ನೇರವಾಗಿ ಶಾಸಕರಿಗೇ ಬರಬೇಕು ಎಂಬ ಕಾರಣದಿಂದ ಬಿಬಿಎಂಪಿ ಚುನಾವಣೆ ನಡೆಯಲೂ ಬಿಡುತ್ತಿಲ್ಲ. ಈ ಬ್ರಹ್ಮಾಂಡ ಭ್ರಷ್ಟಾಚಾರದಿಂದಾಗಿ ಬೆಂಗಳೂರಿಗರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಮುಖ್ಯಮಂತ್ರಿಗಳೇ, ಭ್ರಷ್ಟಾಚಾರ ನಿಯಂತ್ರಿಸುವ ಪ್ರಯತ್ನ ಮಾಡಿ, ಬೆಂಗಳೂರು ನಗರವನ್ನು ಕಾಪಾಡಿ ಎಂದು ಸರಣಿ ಟ್ವೀಟ್ ಮಾಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!