Breaking: ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

By Web DeskFirst Published Oct 31, 2019, 6:36 PM IST
Highlights

ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಪಟ್ಟಿ ಪ್ರಕಟ/ 8 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ ಕಾಂಗ್ರೆಸ್/ ಯಾವ ಕ್ಷೇತ್ರಕ್ಕೆ ಯಾರು..?

ಬೆಂಗಳೂರು, [ಅ.31]: 15 ಕ್ಷೇತ್ರಗಳ ಪೈಕಿ  8 ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲು ಪಟ್ಟಿಯನ್ನು ಪ್ರಕಟಿಸಿದೆ.

ಬೈ ಎಲೆಕ್ಷನ್: ಮಸ್ಕಿ, RR ನಗರ ಕ್ಷೇತ್ರಗಳಿಗೆ ಚುನಾವಣೆಯಾಕಿಲ್ಲ? ಕಾರಣ ಇಲ್ಲಿದೆ

ಇಂದು [ಗುರುವಾರ] ಮೊದಲ ಪಟ್ಟಿಯಲ್ಲಿ 8 ಕ್ಷೇತ್ರಗಳಿಗೆ ಅಭ್ಯರ್ಥಿಗಳು ಅಂತಿಮ ಹೆಸರುಗಳನ್ನು ಪ್ರಕಟಿಸಿದೆ. ಇನ್ನುಳಿದ 7 ಪಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಿಸಿಸುವುದು ಬಾಕಿ ಇದೆ.

ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿಯವರ ಒಪ್ಪಿಗೆಯ ಮೇರೆಗೆ ಕರ್ನಾಟಕದ 8 ವಿಧಾನ ಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಅಭ್ಯರ್ಥಿಗಳಿಗೆ ಅಭಿನಂದನೆಗಳು. pic.twitter.com/fOwFs0H9ui

— Karnataka Congress (@INCKarnataka)

ಉಪಚುನಾವಣೆ ನಿಗದಿ: ಬಿಜೆಪಿಯಲ್ಲಿ ಬೇಗುದಿ, ಸಂಕಷ್ಟದಲ್ಲಿ ಲಕ್ಷ್ಮಣ್ ಸವದಿ..!

ಯಲ್ಲಾಪುರ, ಹಿರೇಕೆರೂರು, ರಾಣೇಬೆನ್ನೂರು, ಚಿಕ್ಕಬಳ್ಳಾಪುರ, ಕೆ.ಆರ್.ಪುರ[ಬೆಂಗಳೂರು], ಮಹಾಲಕ್ಷ್ಮೀ ಲೇಔಟ್,  ಹೊಸಕೋಟೆ ಹಾಗೂ ಹುಣಸೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಹಾಗಾದ್ರೆ ಯಾವ ಕ್ಷೇತ್ರಕ್ಕೆ ಯಾರು..? ಈ ಕೆಳಗಿನಂತಿದೆ ಪಟ್ಟಿ.

8 ಪಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ
ಯಲ್ಲಾಪುರ- ಭೀಮಣ್ಣ ನಾಯಕ್
ಹಿರೇಕೆರೂರು- ಬಿ.ಎಚ್. ಬನ್ನಿಕೋಡ್
ರಾಣೇಬೆನ್ನೂರು - ಕೆ.ಬಿ. ಕೋಳಿವಾಡ್
ಚಿಕ್ಕಬಳ್ಳಾಪುರ- ಎಂ. ಅಂಜಿನಪ್ಪ
ಕೆ.ಆರ್.ಪುರ, ಬೆಂಗಳೂರು - ಎಂ. ನಾರಾಯಣಸ್ವಾಮಿ
ಮಹಾಲಕ್ಷ್ಮೀ ಲೇಔಟ್ - ಎಂ. ಶಿವರಾಜ್
ಹೊಸಕೋಟೆ- ಪದ್ಮಾವತಿ ಸುರೇಶ್
ಹುಣಸೂರು- ಎಚ್.ಪಿ. ಮಂಜುನಾಥ್

ಬಾಕಿ ಇರುವ ಕ್ಷೇತ್ರಗಳು
ಚಿಕ್ಕಬಳ್ಳಾಪುರ
ಗೋಕಾಕ್
ಯಶವಂತಪುರ
ಅಥಣಿ
ಕಾಗವಾಡ 
ಶಿವಾಜಿನಗರ 
ಕೆ.ಆರ್.ಪೇಟೆ [ಮಂಡ್ಯ]

ಉಪ ಚುನಾವಣೆ ವೇಳಾಪಟ್ಟಿ 
* ನವೆಂಬರ್ 11 : ನಾಮಪತ್ರ ಸಲ್ಲಿಕೆ ಆರಂಭ 
* ನವೆಂಬರ್ 18 ನಾಮಪತ್ರ ಸಲ್ಲಿಕೆಗೆ ಕೊನೆ ದಿನ,
* ನವೆಂಬರ್ 19 ನಾಮಪತ್ರಗಳ ಪರಿಶೀಲನೆ
* ನವೆಂಬರ್ 21 ನಾಮಪತ್ರ ವಾಪಸ್ ಪಡೆಯಲು ಕೊನೆ ದಿನ
 * ಡಿಸೆಂಬರ್ 5 ಮತದಾನ (7 ಗಂಟೆಯಿಂದ 6)
 * ಡಿಸೆಂಬರ್ 9 ಮತ ಎಣಿಕೆ.

ಉಪಚುನಾವಣೆ ನಡೆಯಲಿರುವ ಕ್ಷೇತ್ರಗಳು
1) ಚಿಕ್ಕಬಳ್ಳಾಪುರ 2) ಮಹಾಲಕ್ಷ್ಮಿ ಲೇಔಟ್ 3) ಹೊಸಕೋಟೆ 4) ಹುಣಸೂರು 5) ಗೋಕಾಕ್, 6) ಯಶವಂತಪುರ 7) ಅಥಣಿ 8) ಕಾಗವಾಡ 9)ಶಿವಾಜಿನಗರ 10) ಕೆ.ಆರ್.ಪೇಟೆ 11) ಕೆ.ಆರ್.ಪುರಂ 12) ಹಿರೇಕೆರೂರು 13) ರಾಣೆಬೆನ್ನೂರು 14) ವಿಜಯನಗರ 15) ಯಲ್ಲಾಪುರ.

ಸುಪ್ರೀಂನಲ್ಲಿ ಅನರ್ಹರ ಭವಿಷ್ಯ
ಮೈತ್ರಿ ಸರ್ಕಾರದ ವಿರುದ್ಧ ಸಿಡಿದೆದ್ದು ಕಾಂಗ್ರೆಸ್ 15 ಹಾಗೂ ಜೆಡಿಎಸ್ ನ ಇಬ್ಬರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದ್ರೆ, ಇವರನ್ನು ಪಕ್ಷಾಂತರ ಕಾಯ್ದೆ ಅಡಿಯಲ್ಲಿ 17 ಶಾಸಕರನ್ನು ಅಂದಿನ ಸ್ಪೀಕರ್ ರಮೇಶ್ ಕುಮಾರ್ ಅಮಾನತು ಮಾಡಿದ್ದರು. ಇದನ್ನು ಪ್ರಶ್ನಿಸಿ ಅನರ್ಹಗೊಂಡ ಶಾಸಕರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಅಂತಿಮಗೊಳಿಸಿದ್ದು, ತೀರ್ಪುನ್ನು ಕಾಯ್ದಿರಿಸಿದೆ.

click me!