ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಬ್ಬರು ಲೋಕಸಭಾ ಚುನಾವಣೆ ವೇಳೆಗೆ ಮೆಟ್ಟು, ಮೆಟ್ಟಿನಿಂದ ಹೊಡೆದಾಡಿಕೊಳ್ತಾರೆ.
ಬೆಳಗಾವಿ (ಜೂ.25): ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಬ್ಬರ ನೇತೃತ್ವದ ಸರ್ಕಾರ ಐದು ವರ್ಷ ಪೂರ್ಣಗೊಳಿಸಲ್ಲ. ಲೋಕಸಭಾ ಚುನಾವಣೆ ಮುನ್ನ, ಇಲ್ಲಾ ಚುನಾವಣೆಯಾದ ಬಳಿಕ ಆ್ಯಕ್ಸಿಡೆಂಟ್ ಆಗುತ್ತದೆ. ಅಷ್ಟರಲ್ಲಿ ಇಬ್ಬರು ಮೆಟ್ಟು, ಮೆಟ್ಟಿನಿಂದ ಹೊಡೆದಾಡಿಕೊಳ್ತಾರೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಹೇಳಿದರು.
ಬೆಳಗಾವಿಯಲ್ಲಿ ಭಾನುವಾರ ನಡೆದ ಜಿಲ್ಲಾ ಮಟ್ಟದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಇದು ಐದು ವರ್ಷ ನಡೆಯುವ ಸರ್ಕಾರ ಅಲ್ಲ. ಲೋಕಸಭಾ ಚುನಾವಣೆ ಮುನ್ನ, ಇಲ್ಲಾ ಆದ ಬಳಿಕ ಆ್ಯಕ್ಸಿಡೆಂಟ್ ಆಗುತ್ತದೆ. ಅಷ್ಟರಲ್ಲಿ ಇಬ್ಬರು ಮೆಟ್ಟು ಮೆಟ್ಟಿನಿಂದ ಹೊಡೆದಾಡಿಕೊಳ್ತಾರೆ. ಸಿದ್ದರಾಮಯ್ಯ ಮತ್ತು ಡಿಕೆಶಿ ಚಪ್ಪಲಿಯಿಂದ ಹೊಡೆದಾಡಿಕೊಳ್ತಾರೆ. ಡಿಕೆಶಿ ಅವರು ಯಡಿಯೂರಪ್ಪ, ಬೊಮ್ಮಾಯಿ ಮನೆಗೆ ಹೋಗಿ ಸೌಜನ್ಯ ಭೇಟಿ ಅಂತಾರೆ. ಇವರು ಸೌಜನ್ಯ ಭೇಟಿ ಕೊಡ್ತಿಲ್ಲ ಸೋನಿಯಾ ಗಾಂಧಿಗೆ ಅಂಜಿಸುವ ಕೆಲಸ ಮಾಡ್ತಾರೆ ಎಂದು ಹೇಳಿದರು.
undefined
ಬಿಜೆಪಿ ನಾಯಕರ ಕಚ್ಚಾಟ ಬಹಿರಂಗ: ಬುದ್ಧಿ ಹೇಳಿದ ಯತ್ನಾಳ್‌ಗೆ ತಿರುಗೇಟು ಕೊಟ್ಟ ಬೊಮ್ಮಾಯಿ
ಬೊಮ್ಮಾಯಿಗೆ ಬುದ್ಧಿ ಹೇಳಿದ ಯತ್ನಾಳ್: ಬೊಮ್ಮಾಯಿಯವರೇ ಅವರನ್ನ ನೀವು ಮನೆವರೆಗೂ ಬಿಟ್ಟುಕೊಳ್ಳಬೇಡಿ. ನಾವು ವಿರೋಧ ಪಕ್ಷದವರ ಮನೆಗೆ ಹೋಗುವುದಿಲ್ಲ ಅಂತಾರೆ. ಅದೇ ರೀತಿ ನಾವು ಅವರ ಮನೆಗೆ ಹೋಗುವುದಿಲ್ಲ ಅಂತಾ ಹೇಳಿ. ಅವರನ್ನ ಸ್ವಾಗತಿಸಿಕೊಂಡ್ರೇ ನಮ್ಮ ಕಾರ್ಯಕರ್ತರು ಮಲಗಿ ಬಿಡ್ತಾರೆ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ, ಹಲಕಟ್‌ಗಿರಿ ಮಾಡೊದಿದ್ರೇ ಬಿಟ್ಟು ಹೋಗಿ. ನಾವು ಯಾರು ಜಗಳ ಮಾಡುತ್ತಿಲ್ಲ, ಪಾರ್ಟಿ ನಿರ್ಣಯ ಮಾಡಿದವರ ಪರ ಕೆಲಸ ಮಾಡಿ. ವಿಧಾನಸಭೆ ಚುನಾವಣೆಯಲ್ಲಿ ಯಾರು, ಏನು ಮಾಡಿದರು ಎಂಬುದು ಕಾರ್ಯಕರ್ತರಿಗೆ ಗೊತ್ತಿದೆ. ಕಾರ್ಯಕರ್ತರ ಬದಲು ಮೊದಲು ನಾಯಕರು ಬದಲಾಗಬೇಕು, ಆಗಲೇ ನಾಯಕರಿಗೆ ಆಗ ಭವಿಷ್ಯವಿದೆ. ಪಕ್ಷ ನಿರ್ಣಯ ಮಾಡಿದವರು ವಿರೋಧ ಪಕ್ಷದ ನಾಯಕರು ಆಗಲಿದ್ದಾರೆ. ನಮ್ಮಲ್ಲಿ ಯಾವುದೇ ಒಳ ಪೈಪೋಟಿ ಇಲ್ಲಾ ಎಂದ ಯತ್ನಾಳ್ ಹೇಳಿದರು.
ಹಿಂದುತ್ವದ ಧ್ವನಿ ಅಡಗಿಸೋರು ಸೋತರು: ಬಿಜೆಪಿ ಕಾರ್ಯಕರ್ತರೊಂದಿಗೆ ಕುಳಿತುಕೊಳ್ಳಿ ಎಂದು ನಾನು ಬಸವರಾಜ್ ಬೊಮ್ಮಾಯಿರಿಗೂ ಹೇಳಿದ್ದೆನು. ಮಾಧ್ಯಮಗಳು ಫಿಪ್ಟಿ, ಫಿಪ್ಟಿ ಆಗಿವೆ ಕಾಂಗ್ರೆಸ್‌ನವರನ್ನು ಬೈತಾರೆ, ನಮ್ಮನ್ನೂ ಬೈತಾರೆ. ಅವರನ್ನು ಕೆಡವತಿನಿ ಇವರನ್ನ ಕೆಡವತಿನಿ ಅಂತ ನೀವೇ ಮೈಮೇಲಿ ಬಿದ್ರಿ. ನನ್ನ ಸೋಲಿಸಲು ಬೆಳಗಾವಿ, ಬೆಂಗಳೂರಿನಿಂದ ಹಣ ಕಳುಹಿಸಲಾಗಿತ್ತು. ನಾನಂತೂ ಹೆಂಗರೆ ಮಾಡಿ ಆರಿಸಿ ಬಂದೆ, ನನ್ನ ಸೋಲಿಸುತ್ತೇನೆ ಎಂದವರೇ ಸೋತರು. ಯತ್ನಾಳನ ಸೋಲಿಸಬೇಕು ಹಿಂದುತ್ವದ ಧ್ವನಿ ಅಡಗಿಸಬೇಕು ಅಂತ ಪ್ಲಾನ್ ಇತ್ತು ಎಂದರು.
ದೇಶದಲ್ಲಿ ಮೋದಿ ಸೋಲಲ್ಲ, ರಾಹುಲ್‌ಗಾಂಧಿಗೆ ಮದುವೆ ಆಗೊಲ್ಲ: ಬೊಮ್ಮಾಯಿ ವ್ಯಂಗ್ಯ
ಪ್ರಧಾನಿ ಮೋದಿ ತಿರುಗಾಡಿಸಿದ್ದಕ್ಕೆ ಬೇಸರವಾಗ್ತಿದೆ: ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿಗಳನ್ನು ಬಹಳ ತಿರುಗಾಡಿಸಿದ್ದು, ನಮಗೆ ಬೇಸರವಾಗ್ತಿದೆ. ಪ್ರಧಾನಿ ಮೋದಿಯವರು ಬೆಂಗಳೂರಿನಲ್ಲಿ 25 ಕೀಮಿ ರೋಡ್ ಶೋ ಮಾಡಿದ್ದರು. ಬೆಳಗಾವಿ, ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಮಾಡಿದರು. ಮೋದಿಗೆ ಗೌರವ ಕೊಡುವುದಕ್ಕಾಗಿ ಮುಂದಿನ ಚುನಾವಣೆಯಲ್ಲಿ 28 ಸ್ಥಾನವನ್ನು ನಾವು ಗೆಲ್ಲಬೇಕು. ನಾನು ಹಾಗೂ ಬಸವರಾಜ್ ಬೊಮ್ಮಾಯಿ ಕ್ಷೇತ್ರಕ್ಕೆ ಹೋಗದೆಯೇ ಆರಿಸಿ ಬಂದ್ವಿ. ಸೋತಿದ್ದೇವೆ ಅಂತ ಮನೆಯಲ್ಲಿ ಕೂರುವ ಅವಶ್ಯಕತೆಯಿಲ್ಲ. ಎಂಪಿ ಟಿಕೆಟ್ ಯಾರಿಗೆ ನೀಡಿದ್ರು ದೇಶಕ್ಕಾಗಿ ಮತ ನೀಡಬೇಕಾಗಿದೆ ಎಂದು ಹೇಳಿದರು.