ವಿಧಾನ ಪರಿಷತ್ ಚುನಾವಣೆ: ನಿಗಮ-ಮಂಡಳಿ ನೇಮಕಾತಿ ಮತ್ತು ಸಂಪುಟ ವಿಸ್ತರಣೆಗೆ ತಾತ್ಕಾಲಿಕ ಬ್ರೇಕ್

Gowthami K   | Kannada Prabha
Published : Sep 30, 2026, 09:05 AM IST
Karnataka cabinet expansion delay

ಸಾರಾಂಶ

ವಿಧಾನಪರಿಷತ್‌ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಿಗಮ-ಮಂಡಳಿ ನೇಮಕ ಹಾಗೂ ಸಚಿವ ಸಂಪುಟ ವಿಸ್ತರಣೆ ತಾತ್ಕಾಲಿಕವಾಗಿ ಮುಂದೂಡಿಕೆಯಾಗುವ ಸಾಧ್ಯತೆಯಿದೆ. ಈ ಕುರಿತು ಚುನಾವಣಾ ಆಯೋಗ ಮತ್ತು ಸರ್ಕಾರದ ನಡುವೆ ಪತ್ರ ವ್ಯವಹಾರ ನಡೆಯುತ್ತಿದ್ದು, ಸ್ಪಷ್ಟನೆ ಸಿಗುವವರೆಗೆ ನೇಮಕಾತಿಗೆ ಗ್ರಹಣ ಹಿಡಿದಿದೆ. ಇದರ ಬೆನ್ನಲ್ಲೇ ದೆಹಲಿಯಲ್ಲಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ವರಿಷ್ಠರೊಂದಿಗೆ ಮಹತ್ವದ ಚರ್ಚೆ ನಡೆಸಿದ್ದಾರೆ.

ಬೆಂಗಳೂರು: ವಿಧಾನಪರಿಷತ್‌ನ ನಾಲ್ಕು ಸ್ಥಾನಗಳ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ನಿಗಮ-ಮಂಡಳಿ ನೇಮಕ ಹಾಗೂ ಸಚಿವ ಸಂಪುಟದ ಖಾಲಿ ಸ್ಥಾನ ಭರ್ತಿ ತಾತ್ಕಾಲಿಕವಾಗಿ ಮುಂದಕ್ಕೆ ಹೋಗುವ ಸಾಧ್ಯತೆಯಿದೆ.

ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರ್ಕಾರ ಹಾಗೂ ಚುನಾವಣಾ ಆಯೋಗದ ನಡುವೆ ನಿಗಮ-ಮಂಡಳಿ ನೇಮಕದ ಬಗ್ಗೆ ತಾಕಲಾಟ ನಡೆಯುತ್ತಿದೆ. ಈ ಬಗ್ಗೆ ಆಯೋಗದಿಂದ ಸ್ಪಷ್ಟತೆ ದೊರೆಯುವವರೆಗೆ ಮುಂದಕ್ಕೆ ಹೋಗುವ ನಿರೀಕ್ಷೆಯಿದೆ.

ಮೂಲಗಳ ಪ್ರಕಾರ, ರಾಜ್ಯ ಸರ್ಕಾರವು ನಿಗಮ-ಮಂಡಳಿಗಳ ನೇಮಕ ಸೇರಿದಂತೆ ಖಾಲಿ ಹುದ್ದೆಗಳ ಭರ್ತಿ ಕುರಿತು ಚುನಾವಣಾ ಆಯೋಗದ ಅನುಮತಿ ಕೋರಿತ್ತು. ಹುದ್ದೆಗಳು ಖಾಲಿ ಇದ್ದರೆ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಆಡಳಿತ ನಡೆಸಲು ಅಡಚಣೆ ಆಗುತ್ತದೆ. ಹೀಗಾಗಿ ನೇಮಕಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಿತ್ತು ಎನ್ನಲಾಗಿದೆ.

ಆದರೆ, ಚುನಾವಣಾ ಆಯೋಗವು ಅ.23ರಂದು ಎರಡು ಶಿಕ್ಷಕರ ಕ್ಷೇತ್ರ ಹಾಗೂ ಎರಡು ಪದವೀಧರರ ಕ್ಷೇತ್ರಗಳ ಪರಿಷತ್‌ ಚುನಾವಣೆ ನಡೆಯಲಿದೆ. ಈ ಅವಧಿಯಲ್ಲಿ ನಡೆಯುವ ನೇಮಕಾತಿಗಳು ಚುನಾವಣೆ ಮೇಲೆ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ಕೆಲವು ಸ್ಪಷ್ಟನೆಗಳು ಕೇಳಿತ್ತು.

ಆಯೋಗ ಕೇಳಿದ ಸ್ಪಷ್ಟನೆಗಳಿಗೆ ಸರ್ಕಾರ ಉತ್ತರ ನೀಡಿದ್ದು, ಎರಡನೇ ಬಾರಿಗೆ ಆಯೋಗವು ಕೆಲವೊಂದು ವಿವರಗಳನ್ನು ಕೋರಿದೆ. ಹೀಗಾಗಿ ಆಯೋಗ ಹಾಗೂ ಸರ್ಕಾರದ ನಡುವಿನ ತಾಕಲಾಟ ಬಗೆಹರಿದ ಬಳಿಕ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ, ಸುರ್ಜೇವಾಲಾ ಚರ್ಚೆ:

ಎಐಸಿಸಿ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ತೆರಳಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಅವರೊಂದಿಗೆ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯ ರಾಜಕೀಯ ಬೆಳವಣಿಗೆಗಳು, ಡಿ.ಕೆ. ಶಿವಕುಮಾರ್ ಸರ್ಕಾರದ 100 ದಿನಗಳ ಆಡಳಿತ, ಮುಂಬರುವ ಚುನಾವಣೆಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆದಿರುವ ಸಾಧ್ಯತೆಯಿದೆ.

ಮುಖ್ಯಾಂಶಗಳು

  • ಖಾಲಿ ಇರುವ 2 ಸಚಿವ ಸ್ಥಾನ, ನಿಗಮ-ಮಂಡಳಿಗಳ ನೇಮಕಕ್ಕೆ ಭಾರಿ ಕಸರತ್ತು
  • ಆದರೆ ವಿಧಾನ ಪರಿಷತ್‌ ಚುನಾವಣೆ ಕಾರಣ ಈ ಪ್ರಕ್ರಿಯೆಗೆ ನೀತಿ ಸಂಹಿತೆ ಅಡ್ಡಿ
  • ಆದರೂ ನಿಗಮ-ಮಂಡಳಿ ನೇಮಕಕ್ಕೆ ಆಯೋಗದ ಅನುಮತಿ ಕೋರಿದ್ದ ಸರ್ಕಾರ
  • ಈ ಬಗ್ಗೆ ಕೆಲವು ಸ್ಪಷ್ಟನೆ ಕೇಳಿ ರಾಜ್ಯ ಸರ್ಕಾರದಿಂದ ಮಾಹಿತಿ ಬಯಸಿದ ಆಯೋಗ
  • ಈ ಗೊಂದಲ ಬಗೆಹರಿವತನಕ ಸಂಪುಟ ವಿಸ್ತರಣೆ, ನಿಗಮ ನೇಮಕಕ್ಕೆ ಗ್ರಹಣ
  • ಈ ಬಗ್ಗೆ ನಿನ್ನೆ ದಿಲ್ಲಿಯಲ್ಲಿ ವರಿಷ್ಠರ ಜತೆ ಡಿಕೆ, ಬಿಕೆ, ಸಿದ್ದರಾಮಯ್ಯ ಸಮಾಲೋಚನೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

₹1400 ಕೋಟಿ ಆಸ್ತಿ ವಿವಾದ: ಬೇಕಿದ್ರೆ ಆದಾಯ ಇಲಾಖೆಗೆ ದೂರು ಕೊಡು, ಹೆಚ್ಡಿಕೆ ಆರೋಪಗಳಿಗೆ ಡಿಕೆ ಸವಾಲ್!
INDIA ಮೈತ್ರಿಕೂಟದ ಸ್ಟೇರಿಂಗ್‌ ಹಿಡಿಯೋರು ಯಾರು? ನಾಳೆ ದೆಹಲಿಯಲ್ಲಿ ಸಭೆ; ಕೂತುಹಲ ಮೂಡಿಸಿದ ಅಖಿಲೇಶ್-ಪವಾರ್-ಉದ್ಧವ್ ನಡೆ!