
ಬೆಂಗಳೂರು(ಜ.13): ಅಂತೂ ಇಂತು ಕರ್ನಾಟಕ ಕ್ಯಾಬಿನೆಟ್ ಸರ್ಕಸ್ ಕೊನೆಗೊಂಡಿದೆ. ಯಾರೆಲ್ಲಾ ಮಂತ್ರಿಯಾಗ್ತಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದ್ದು, ಸಿಎಂ ಬಿ. ಎಸ್. ಯಡಿಯೂರಪ್ಪ ಇಂದು ಸಂಜೆ ಪ್ರಮಾಣವಚನ ಸ್ವೀಕರಿಸಲಿರುವ ಏಳು ಮಂದಿಯ ಹೆಸರನ್ನು ಬಹಿರಂಗಗೊಳಿಸಿದ್ದಾರೆ. ಸಚಿವಾಕಾಂಕ್ಷಿಯಾಗಿದ್ದ ಮುನಿರತ್ನ ಕನಸು ಭಗ್ನವಾಗಿದ್ದು, ಮತ್ತೆ ರಾಜಕೀಯ ಭಿನ್ನಮತ ಎದುರಾಗುವ ಸಾಧ್ಯತೆ ಇದೆ.
"
ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಿಎಂ ಯಡಿಯೂರಪ್ಪ ಸಚಿವರಾಗಲಿರುವ ಏಳು ಮಂದಿಯ ಹೆಸರನ್ನು ಘೋಷಿಸಿದ್ದಾರೆ. ಅನೇಕ ಮಂದಿ ಸಚಿವಗಿರಿ ಪಡೆಯಲು ಲಾಭಿ ನಡೆಸಿದ್ದು, ಮುನಿರತ್ನ ಸೇರಿ ಕೆಲವರ ಕನಸು ಭಗ್ನವಾಗಿದೆ.
ಸಚಿವರಾಗಲಿರುವವರ ಹೆಸರು ಹೀಗಿದೆ ನೋಡಿ:
* ಉಮೇಶ್ ಕತ್ತಿ: ಹುಕ್ಕೇರಿ ಶಾಸಕ. ಕತ್ತಿ ಎಂಟು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ, ಎರಡು ಬಾರಿ ಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
* ಸಿ. ಪಿ ಯೋಗೇಶ್ವರ್: ಪರಿಷತ್ ಸದಸ್ಯ. ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಇವರು, ಎರಡನೇ ಬಾರಿ ಮಂತ್ರಿಯಾಗುವವರಿದ್ದಾರೆ.
* ಮುರುಗೇಶ್ ನಿರಾಣಿ: ಬೀಳಗಿ ಕ್ಷೇತ್ರದ ಶಾಸಕ. ಒಟ್ಟು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಇವರು ಎರಡನೇ ಬಾರಿ ಮಂತ್ರಿಯಾಗುತ್ತಿದ್ದಾರೆ.
* ಅರವಿಂದ ಲಿಂಬಾವಳಿ: ಮಹದೇವಪುರ ಕ್ಷೇತ್ರದ ಶಾಸಕ. ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಲಿಂಬಾವಳಿ, ಎರಡನೇ ಬಾರಿ ಮಂತ್ರಿಯಾಗುತ್ತಿದ್ದಾರೆ.
* ಎಸ್.ಅಂಗಾರ: ಸುಳ್ಯ ಕ್ಷೇತ್ರದ ಶಾಸಕರಾಗಿರುವ ಅಂಗಾರ ಅವರು ಒಟ್ಟು ಆರು ಬಾರಿ ಗೆಲುವು ಸಾಧಿಸಿದ್ದಾರೆ. ಇದೇ ಮೊದಲ ಬಾರಿ ಮಂತ್ರಿಯಾಗುತ್ತಿದ್ದಾರೆ.
* ಆರ್. ಶಂಕರ್: ಪರಿಷತ್ ಸದಸ್ಯ
* ಎಂಟಿಬಿ ನಾಗರಾಜ್: ಪರಿಷತ್ ಸದಸ್ಯರಾಗಿರುವ ಎಂಟಿಬಿ ಮೂರು ಬಾರಿ ಶಾಸಕರಾಗಿದ್ದವರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.