ಅನರ್ಹರ ಕ್ಷೇತ್ರಕ್ಕೆ ಕೈ ಅಭ್ಯರ್ಥಿಗಳ ಪಟ್ಟಿ ಫೈನಲ್?  ಅಚ್ಚರಿ ಹೆಸರು ಸೇರ್ಪಡೆ

By Web Desk  |  First Published Oct 15, 2019, 4:24 PM IST

ಕಾಂಗ್ರೆಸ್ ನಲ್ಲಿ ಬಿರುಸುಗೊಂಡ ರಾಜಕಾರಣ/ ಉಪಚುನಾವಣೆಗೆ ಅಭ್ಯರ್ಥಿಗಳ ಫೈನಲ್ ಮಾಡುವ ಕೆಲಸ/ ಬೆಂಗಳೂರು ಮತ್ತು ಸುತ್ತಲಿನ ಕ್ಷೇತ್ರದ  ಬಗ್ಗೆ ಚರ್ಚೆ


ಬೆಂಗಳೂರು(ಅ. 15)  ಉಪಚುನಾವಣೆಗೆ ಎಲ್ಲ ಪಕ್ಷಗಳಂತೆ ಕಾಂಗ್ರೆಸ್ ಸಹ ಸಿದ್ಧತೆ ಮಾಡಿಕೊಳ್ಳುತ್ತಿದೆ.  ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವ ಕೆ.ಸಿವೇಣುಗೋಪಾಲ್  ನೇತೃತ್ವದಲ್ಲಿ ಬೆಂಗಳೂರು ವಿಭಾಗದ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆದಿದೆ.

ವಿಶೇಷವಾಗಿ ಬೆಂಗಳೂರು ಮತ್ತು ಬೆಂಗಳೂರು ಸುತ್ತಲಿನ ವ್ಯಾಪ್ತಿಯ ಬಗ್ಗೆ ಚರ್ಚೆ ನಡೆದಿದೆ. ವರದಿಯನ್ನು ಹೈಕಮಾಂಡ್ ಗೆ ಕಳುಹಿಸಿಕೊಡಲಾಗುತ್ತದೆ ಎಂದು ಹೇಳಲಾಗಿದೆ

Tap to resize

Latest Videos

ಹೊಸಕೋಟೆ, ಕೆ ಆರ್ ಪುರ, ಮಹಾಲಕ್ಷ್ಮಿ ಲೇಔಟ್, ಯಶವಂತಪುರ, ಶಿವಾಜಿನಗರ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕುರಿತು ಚರ್ಚೆ ನಡೆಯಿತು.

ಉಪಚುನಾವಣೆಗೂ ಮುನ್ನ ಕಾಂಗ್ರೆಸ್ ನಿಂದ ರಿವರ್ಸ್ ಆಪರೇಶನ್, ಯಾರಿಗೆ ಹಾಕಿದ್ದಾರೆ ಗಾಳ?

ಹಾಗಾದರೆ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳು ಯಾರ್ಯಾರು

ಹೊಸಕೋಟೆ - ಪದ್ಮಾವತಿ

ಕೆ ಆರ್ ಪುರ - ಎಮ್ಮೆಲ್ಸಿ ನಾರಾಯಣ ಸ್ವಾಮಿ

ಶಿವಾಜಿನಗರ - ರಿಜ್ವಾನ್ ಅರ್ಷದ್ ಅಥವಾ ಸಲೀಂ ಅಹಮದ್

ಮಹಾಲಕ್ಷ್ಮಿ ಲೇಔಟ್ - ಕಾರ್ಪೊರೇಟರ್ ಶಿವರಾಜ್ ಅಥವಾ ಮಂಜುನಾಥ್ ಗೌಡ

ಯಶವಂತಪುರ - ಎಂ. ರಾಜಕುಮಾರ್

ಚಿಕ್ಕಬಳ್ಳಾಪುರ - ಜಿ.ಎಚ್.ನಾಗರಾಜ್ ಅಥವಾ ಆಂಜಿನಪ್ಪ ಯಲವಳ್ಳಿ ರಮೇಶ್

ಆಕಾಂಕ್ಷಿಗಳ ಪಟ್ಟಿಯನ್ನು ದೆಹಲಿಗೆ ಕಳಿಸಲು‌ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಯಿತು. ಇದು ಮೇಲ್ನೋಟದ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಾಗಿದೆ. ಯಾವುದು ಏನೇ ಇದ್ದರೂ ಕಾಂಗ್ರೆಸ್ ಹೈಕಮಾಂಡ್ ಚರ್ಚೆ ಮಾಡಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಮೇಲೆ ಮುನಿಸಿಕೊಂಡ ಶಾಸಕರು  ಹದಿನೇಳು ಜನ ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರ ಪರಿಣಾಮ ಕಾಂಗ್ರೆಸ್ ಮತ್ತು ಜೆಡಿಎಸ್ ದೋಸ್ತಿ ಸರ್ಕಾರ ಹೋಗಿ ಆ ಜಾಗದಲ್ಲಿ ಬಿಜೆಪಿ ಸರ್ಕಾರ ಸ್ಥಾಪನೆಯಾಗಿತ್ತು. ರಾಜೀನಾಮೆ ಕೊಟ್ಟ ಶಾಸಕರನ್ನು ಅಂದಿನ ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ್ದರು. ಇದೀಗ ಅನರ್ಹ ಶಾಸಕರ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ಇದ್ದುನ ಇದೆಲ್ಲದರ ಮಧ್ಯವೇ ಚುನಾವಣೆ ಘೋಷಣೆಯಾಗಿದೆ.

click me!