ಗೆದ್ದರೆ ಆಡಲು ಬಂದಿದ್ದೆ, ಸೋತರೆ ನೋಡಲು ಬಂದಿದ್ದೆ ಎಂಬ ನಿಲುವು ಕಾಂಗ್ರೆಸ್ಸಿನದು : ಶಾಸಕ ವಿರೂಪಾಕ್ಷಪ್ಪ ವಾಗ್ದಾಳಿ

By Kannadaprabha News  |  First Published Mar 24, 2023, 12:30 PM IST

 ಕೋವಿಡ್‌ನಂತಹ ಸಂಕಷ್ಟಸಂದರ್ಭಗಳಲ್ಲಿ ಆಡಳಿತಾರೂಢ ಸರ್ಕಾರಗಳಿಗೆ ಕೈಜೋಡಿಸದೇ, ಕೊರೋನಾ ಇಲ್ಲವೆಂದು ಹೇಳಿಕೆ ನೀಡುವ ಮೂಲಕ ಬೇಜವಾಬ್ದಾರಿ ವರ್ತನೆ ತೋರಿದ್ದ ಕಾಂಗ್ರೆಸ್‌ ಮುಖಂಡರು ಇದೀಗ ಚುನಾವಣೆ ಸಮಯದಲ್ಲಿ ಪುಕ್ಕಟೆ ಭಾಗ್ಯಗಳ ಘೋಷಿಸುತ್ತಿದ್ದಾರೆ ಎಂದು ಶಾಸಕ ವಿರೂಪಾಕ್ಷಪ್ಪ ವಾಗ್ದಾಳಿ ನಡೆಸಿದರು.


ಬ್ಯಾಡಗಿ (ಮಾ.24) : ಕೋವಿಡ್‌ನಂತಹ ಸಂಕಷ್ಟಸಂದರ್ಭಗಳಲ್ಲಿ ಆಡಳಿತಾರೂಢ ಸರ್ಕಾರಗಳಿಗೆ ಕೈಜೋಡಿಸದೇ, ಕೊರೋನಾ ಇಲ್ಲವೆಂದು ಹೇಳಿಕೆ ನೀಡುವ ಮೂಲಕ ಬೇಜವಾಬ್ದಾರಿ ವರ್ತನೆ ತೋರಿದ್ದ ಕಾಂಗ್ರೆಸ್‌ ಮುಖಂಡರು ಇದೀಗ ಚುನಾವಣೆ ಸಮಯದಲ್ಲಿ ಪುಕ್ಕಟೆ ಭಾಗ್ಯಗಳ ಘೋಷಿಸುತ್ತಿರುವುದು ಪ್ರಜಾತಂತ್ರ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ(MLA Virupaksappa Bellary) ಹೇಳಿದರು.

ತಾಲೂಕಿನ ಮಾಸಣಗಿ ಗ್ರಾಮದಲ್ಲಿ ಪಂಚಾಯತ್‌ ರಾಜ್‌ ತಾಂತ್ರಿಕ ಉಪ-ವಿಭಾಗದ ವತಿಯಿಂದ .1.40 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಮಾಸಣಗಿ-ಕೆರವಡಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯಾನಂತರ 6 ದಶಕಗಳ ದೇಶವನ್ನಾಳಿದ ಕಾಂಗ್ರೆಸ್‌ ‘ಗರೀಬಿ ಹಠಾವೋ’ ಎಂದು ಹೇಳಿಕೆ ನೀಡುವ ಮೂಲಕ ದೇಶದ ಆರ್ಥಿಕ ವ್ಯವಸ್ಥೆಯನ್ನು ಹಾಳು ಮಾಡಿದ ಕಾಂಗ್ರೆಸ್‌ ಇದೀಗ ಮತ್ತದೇ ದಾರಿಯನ್ನು ಹಿಡಿದಿದ್ದು ಪಾಕಿಸ್ತಾನ ಹಾಗೂ ಶ್ರೀಲಂಕಾ ಮಾದರಿಯಲ್ಲಿ ದೇಶವನ್ನು ಹಾಳುಮಾಡ ಹೊರಟಿದೆ ಎಂದು ಆರೋಪಿಸಿದರು.

Tap to resize

Latest Videos

undefined

 

ನಿರುದ್ಯೋಗಿ ಯುವಕರಿಗೆ 3 ಸಾವಿರ ರೂ. ಭತ್ಯೆ: ಕಾಂಗ್ರೆಸ್‌ 4ನೇ ಗ್ಯಾರಂಟಿ ಯುವನಿಧಿ ಘೋಷಣೆ

ಪುಕ್ಕಟೆ ಯೋಜನೆ ಘೋಷಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಚುನಾವಣೆ ಸಮೀಪಿಸಿದರೂ ಇನ್ನೂ ಕ್ಷೇತ್ರ ಹುಡುಕುವುದರಲ್ಲಿದ್ದಾರೆ. ರಾಜ್ಯದ ಜನರನ್ನು ಸ್ವಾಭಿಮಾನದಿಂದ ಬದುಕುವುದಕ್ಕೆ ಸಹಕಾರ ಮಾಡಬೇಕಾಗಿದ್ದ ಸರ್ಕಾರದ ಬಳಿ ಕೈಯೊಡ್ಡುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು. ಅಧಿಕಾರದ ಬೆನ್ನು ಹತ್ತಿರುವ ಅವರು ರಾಜ್ಯದ ಜನರಿಗೆ ತಮಗೆ ತಲೆಗೆ ತೋಚಿದ ಸುಳ್ಳು ಭರವಸೆಗಳನ್ನು ನೀಡಲು ಮುಂದಾಗಿದ್ದಾರೆ ಎಂದು ಹೇಳಿದರು.

‘ಗೆದ್ದರೇ ಆಡಲು ಬಂದಿದ್ದೆ, ಸೋತರೆ ನೋಡಲು ಬಂದಿದ್ದೆ’ ಎಂಬ ನಿಲುವನ್ನು ಹೊಂದಿರುವ ಕಾಂಗ್ರೆಸ್‌ ಇನ್ಮುಂದೆ ಸ್ವಂತ ಬಲದಿಂದ ಸರ್ಕಾರ ರಚಿಸಲು ಸಾಧ್ಯವಿಲ್ಲ. ಕಾಂಗ್ರೆಸ್‌ ಪೂರ್ಣಾವಧಿಯ 5 ವರ್ಷ ಹಾಗೂ 14 ತಿಂಗಳುಗಳ ಸಮ್ಮಿಶ್ರ ಸರ್ಕಾರ ನಡೆಸಿದ ಅಧಿಕಾರವಧಿಯಲ್ಲಿ ಯಾವುದೇ ಜನಪರ ಯೋಜನೆಗಳನ್ನು ರೂಪಿಸಿಲ್ಲ. ಕೇವಲ 34 ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ಹಿಂದೆಂದೂ ಆಗಿರದಂತಹ ಅಭಿವೃದ್ಧಿ ಕಾರ್ಯಗಳಾಗಿವೆ ಎಂದರು.

ನಿರುದ್ಯೋಗಿಗಳಿಗೆ ಮಾಸಿಕ 3,000 ರೂ. ಭತ್ಯೆ: ಕಾಂಗ್ರೆಸ್‌ ಗ್ಯಾರಂಟಿ 4 ಘೋಷಣೆ

ಇದಕ್ಕೂ ಮುನ್ನ ಪಿಎಲ್‌ಡಿ ಬ್ಯಾಂಕ್‌ ನಿರ್ದೇಶಕ ಸುರೇಶ ಯತ್ನಳ್ಳಿ ಪ್ರಾಸಾವಿಕವಾಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಶೇಖಪ್ಪ ಅಳಲಗೇರಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ರೇಣುಕಾ ಪಡಿಯಣ್ಣನವರ, ಸದಸ್ಯರಾದ ನಾಗರಾಜ ಕೊರ್ಲಿ, ಬಸವರಾಜ ಬನ್ನಿಹಟ್ಟಿ, ಮಮತಾ ಕೋಣನವರ, ಶಿವರಾಜ ಬನ್ನಿಹಟ್ಟಿ, ನೇತ್ರಾ ಕಳಕ್ಕನವರ, ಪಾರ್ವತಮ್ಮ ಚಿಕ್ಕಮ್ಮನರ, ಶಿವಣ್ಣ ಕುಮ್ಮೂರ, ಪುರಸಭೆ ಸದಸ್ಯ ವಿನಯ ಹಿರೇಮಠ, ಗುತ್ತಿಗೆದಾರ ಎಂ.ಎನ್‌. ಹೊಸಗೌಡ್ರ ಇನ್ನಿತರರಿದ್ದರು.

click me!