'ನೋಣಗಳಲ್ಲಿ ಎರಡು ರೀತಿ..' ಆರೆಸ್ಸೆಸ್ ಟೀಕಿಸಿದ ಖರ್ಗೆ, ಬಿಕೆ ಹರಿಪ್ರಸಾದ್ ವಿರುದ್ಧ ಕನ್ಹೇರಿ ಶ್ರೀ ಕಿಡಿ

Published : Jul 12, 2026, 02:51 PM IST
kanheri sri on priyank kharge

ಸಾರಾಂಶ

ಆರ್‌ಎಸ್‌ಎಸ್‌ ಕುರಿತ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರ ಹೇಳಿಕೆಗಳಿಗೆ ಕನ್ಹೇರಿ ಶ್ರೀಗಳು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಆರ್‌ಎಸ್‌ಎಸ್‌ ಒಂದು ರಾಷ್ಟ್ರಭಕ್ತಿ ಸಂಘಟನೆ, ಪ್ರಚಾರಕ್ಕಾಗಿ ಕೆಲವರು ಅದರ ವಿರುದ್ಧ ಮಾತನಾಡುತ್ತಾರೆ ಎಂದು ಕಿಡಿ.

ವಿಜಯಪುರ (ಜು.12): ಆರ್‌ಎಸ್‌ಎಸ್‌ ಅದೊಂದು ದೇಶದಲ್ಲಿ ರಾಷ್ಟ್ರಭಕ್ತಿ ನಿರ್ಮಾಣ ಮಾಡುವ ಸಂಘಟನೆ, ಕೆಲವರು ಪ್ರಚಾರಕ್ಕಾಗಿ ಆರೆಸ್ಸೆಸ್ ವಿರುದ್ಧ ಮಾತನಾಡ್ತಾರೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕನ್ಹೇರಿ ಶ್ರೀಗಳು ಕಿಡಿಕಾರಿದರು.

ದೊಡ್ಡವರಿಗೆ ಬೈದ್ರೆ ಪುಕ್ಸಟ್ಟೆ ಪ್ರಚಾರ ಸಿಗುತ್ತೆ ಅನ್ನೋ ಟೆಕ್ನಿಕ್

ಅರ್‌ಎಸ್‌ಎಸ್‌ ಮೆರವಣಿಗೆಗೆ ಅನುಮತಿ ಪಡೆಯಬೇಕೆಂಬ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ಕುರಿತ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶ್ರೀಗಳು, ಪ್ರಿಯಾಂಕ್ ಖರ್ಗೆಯವರು ಮೇಲಿಂದ ಮೇಲೆ ಬರೀ ಆರೆಸ್ಸೆಸ್ ಬಿಟ್ರೆ ಬೇರೇನೂ ಮಾತಾಡ್ತಿಲ್ಲ. ಅದು ಏನಾಗುತ್ತೆ ಅಂದ್ರೆ ಕೆಲವರಿಗೆ ಪ್ರಚಾರ ಯಾವುದರಿಂದ ಸಿಗುತ್ತೆ ಅಂತ ಗೊತ್ತಾಗಿಬಿಟ್ಟಿದೆ. ಕೆಲವು ಜನರು ಏನು ಮಾಡ್ತಾರಂದ್ರೆ ದೊಡ್ಡವರಿಗೆ ಬೈದು ಬಿಟ್ರೆ ತಮಗೆ ಸುಲಭವಾಗಿ ಪ್ರಚಾರ ಸಿಗುತ್ತೆ ಅನ್ನೋ ಟೆಕ್ನಿಕ್ ಗೊತ್ತಾಗಿದೆ ಹೀಗಾಗಿ ಅವರು ಬೆಳಗಾದ್ರೆ ಮಾಡೋ ಕೆಲಸ ಬಿಟ್ಟು ಆರೆಸ್ಸೆಸ್ ಬಗ್ಗೆ ಮಾತನಾಡ್ತಾರೆ ಎಂದು ಪ್ರಿಯಾಂಕ್ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ವಿರುದ್ಧ ವಾಗ್ದಾಳಿ ನಡೆಸಿದರು.

ಆರ್‌ಎಸ್‌ಎಸ್‌ ಬಗ್ಗೆ ಟೀಕಿಸೋದು ಒಂದು ರೀತಿ ಮಾನಸಿಕ ಕಾಯಿಲೆ

ನನಗನಿಸುತ್ತೆ ಈ ರೀತಿ ಮಾಡ್ತಾ ಹೋದ್ರೆ ಅಂದ್ರೆ ತಮ್ಮ ಅವನತಿ ಬೇಗ ಕಂಡುಕೊಳ್ತಾರೆ ಅಂತ ಅನ್ಸುತ್ತೆ. ಅದೇನೋ ಒಂದೊಂದ್ಸಲ ಹುಚ್ಚರಂತೆ ಮಾತನಾಡೋದು ಕೆಲವರ ಸ್ವಭಾವ ಆಗಿಬಿಟ್ಟಿದೆ. ಈ ರೀತಿ ಒಂದು ಏನಾದರೂ ಕಾಯಿಲೆ ಇರಬಹುದು ಅಂತಾ ನನಗೆ ಅನ್ಸುತ್ತೆ. ಆರೆಸ್ಸೆಸ್ ಪರ್ಮಿಷನ್ ತಗೊಬೇಕು ಅಂತಾರೆ. ಅವರು ನಾಳೆ ಊಟ ಮಾಡಲಿಕ್ಕೂ ಪರ್ಮಿಷನ್ ತಗೊಬೇಕು ಅಂತಾರೆ. ಆರೆಸ್ಸೆಸ್‌ನವರು ಯಾರದೇ ಮನೆಯಲ್ಲಿ ಊಟಕ್ಕೆ ಹೋದ್ರೂ ಪರ್ಮಿಷನ್ ತಗೊಬೇಕು ಅಂತಾರೆ, ಈ ಊರಿನಿಂದ ಆ ಊರಿಗೆ ಎಲ್ಲಾದರೂ ಪ್ರವಾಸ ಮಾಡಬೇಕಾಗಿತ್ತು ಅಂದರೆ ಅದಕ್ಕೂ ಪರ್ಮಿಷನ್ ಕೇಳು ಅಂತ ಹೇಳ್ತಾರೆ ಆಗ ಏನು ಮಾಡೋದು? ಎಂದು ಪ್ರಶ್ನಿಸಿದರು.

ಪ್ರಿಯಾಂಕ್ ಖರ್ಗೆ ಆರೆಸ್ಸೆಸ್ ಬಗ್ಗೆ ಮಾತನಾಡಿದ್ರೆ ಸರ್ಕಾರ, ಪಕ್ಷಕ್ಕೆ ಡ್ಯಾಮೇಜ್?

ಪ್ರಿಯಾಂಕ್ ಖರ್ಗೆ ಆರೆಸ್ಸೆಸ್ ಬಗ್ಗೆ ಮಾತನಾಡೋದ್ರಿಂದ ಅದು ಸರ್ಕಾರ, ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್ ಆಗುತ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶ್ರೀಗಳು, ಹಾ ಆಗುತ್ತೆ. ಅದು ಒಂದೊಂದಸಲ ದೇವರ ಈ ರೀತಿ ಮಾಡಿಸ್ತಾನೋ ಏನೋ.. ವಿನಾಶಕಾಲೇ ವಿಪರೀತಿ ಬುದ್ಧಿ ಅಂತಾರಲ್ಲ ಹಾಗೆ. ಅದು ಆ ಪುಣ್ಯಾತ್ಮರ ನೋಡಿನೇ ಹೇಳಿರಬೇಕು ಅನಿಸುತ್ತೆ. ಆರೆಸ್ಸೆಸ್ ಬಗ್ಗೆ ಮನ್ಸಿಗೆ ಬಂದಂಗ ಮಾತನಾಡುವ ಪ್ರಿಯಾಂಕ್ ಖರ್ಗೆ ಅವರ ತಂದೆಯಾದ್ರೂ ಕರೆದು ಬುದ್ಧಿ ಹೇಳಬೇಕಿತ್ತು. ಹೀಗೆಲ್ಲ ಮಾಡಬಾರದು ಅಂತಾ. ಮಲ್ಲಿಕಾರ್ಜುನ ಖರ್ಗೆಯವರು ಹಿರಿಯರು, ಅನುಭವಸ್ಥರು ಇದ್ದಾರೆ. ಆದರೆ ಅವರೂ ಹೇಳ್ತಾ ಇಲ್ಲ ಯಾಕೋ ಏನೋ. ಅಥವಾ ತಂದೆ ಮಾತು ಕೇಳದಷ್ಟು ತಂದೆಗಿಂತ ಎರಡು ಹೆಜ್ಜೆ ಮುಂದೆ ಹೋಗ್ತಿದ್ದಾರೇನೋ ಗೊತ್ತಿಲ್ಲ, ಹಾಗೆ ಆಗುತ್ತಿರಬಹುದು ಅಂತಾ ನನಗನಿಸುತ್ತೆ ಎಂದರು.

ನೋಣಗಳಲ್ಲಿ ಎರಡು ರೀತಿ… ಬಿಕೆ ವಿರುದ್ಧ ಕನ್ಹೇರಿ ಶ್ರೀ ಕಿಡಿ

ಇನ್ನು ಆರ್‌ಎಸ್‌ ಕುರಿತು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರ 'ಅರ್‌ಎಸ್‌ಎಸ್‌ ಎಲ್ಲೆಲ್ಲೆ ಸಭೆ ಮಾಡುತ್ತೋ ಅಲ್ಲೆಲ್ಲ ಏನಾದರೂ ಒಂದು ಅನಾಹುತ ಆಗುತ್ತೆ ಎಂಬ ಹೇಳಿಕೆಗೆ ತಿರುಗೇಟು ನೀಡಿದ ಶ್ರೀಗಳು, ​ಅದೇ ಕಾಮಾಲೆಯಾದವರಿಗೆಲ್ಲ ವಿಶ್ವನೇ ಹಳದಿ ಕಾಣಿಸ್ತೈತೆ ಅಂತಾರಲ್ಲ ಆ ರೀತಿ ಕಾಣುತ್ತಿರಬಹುದು. ಆರೆಸ್ಸೆಸ್ ಒಂದು ದೇಶಭಕ್ತರ ಸಂಘಟನೆ. ಅದನ್ನ ಅವರು ಯಾವ ದೃಷ್ಟಿಯಿಂದ ನೋಡ್ತಾರೋ ಹಾಗೆ ಕಾಣುತ್ತೆ. ಯಾರು ಯಾವ ಚಷ್ಮಾ ಹಾಕೊಂಡು ನೋಡ್ತಾರೋ ಅವರಿಗೆ ಹಂಗೆ ಕಾಣಿಸ್ತದೆ ಅದರಲ್ಲಿ ಏನಿದೆ. ಅನುಭವಸ್ಥರು ಹೇಳ್ತಿರ್ತಾರೆ ನೋಣಗಳಲ್ಲಿ ಎರಡು ರೀತಿ ನೋಣಗಳು ಇರ್ತಾವೆ. ಒಂದು ಹೊಲಸಿನ ಮೇಲೆ ಕೂಡೋ ನೋಣಗಳು, ಇನ್ನೊಂದು ಜೇನ್ನೋಣ. ಯಾವ್ಯಾವ ನೋಣ ಎಲ್ಲೆಲ್ಲಿ ಹಾರಾಡಬೇಕೋ, ಎಲ್ಲೆಲ್ಲಿ ಕೂಡಬೇಕು ಅಲ್ಲಲ್ಲಿ ಕೂಡುತವೆ ಎನ್ನುವ ಮೂಲಕ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಹೇಳಿಕೆಗೆ ತೀಕ್ಷ್ನವಾಗಿ ಪ್ರತಿಕ್ರಿಯಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

MP V MLA Pension: ನಿವೃತ್ತಿಯ ನಂತರ ಒಬ್ಬ ಸಂಸದನಿಗೆ ಎಷ್ಟು ಪಿಂಚಣಿ ಸಿಗುತ್ತೆ?
Rahul Gandhi Missing: ರಾಹುಲ್ ಗಾಂಧಿ ನಾಪತ್ತೆಯಾಗಿರೋಕೆ ಸಂಪುಟ ವಿಸ್ತರಣೆ ವಿಳಂಭ? ಪ್ರಲ್ಹಾದ್ ಜೋಶಿ ಹೇಳಿಕೆ ವೈರಲ್