ಸಿದ್ದರಾಮಯ್ಯ- ಡಿಕೆಶಿ ನಡುವೆ ಬಿರುಕು ಎಂದು ಅಪಪ್ರಚಾರ ಮಾಡಲಾಗಿತ್ತು. ವಿಪಕ್ಷಗಳು ಸುಳ್ಳು ಸೃಷ್ಟಿ, ಜನರಿಗೆ ತಪ್ಪು ಮಾಹಿತಿ ನೀಡಿವೆ. ಜನ್ಮ ದಿನಾಚರಣೆಗೆ ಡಿಕೆಶಿ ವಿರೋಧ ಎಂದು ಅಪಪ್ರಚಾರ ಮಾಡಲಾಯಿತು. ಇದು ವಿರೋಧಿಗಳು, ಮಾಧ್ಯಮಗಳು ಸೃಷ್ಟಿಸಿದ ಸುಳ್ಳು. ನಾನು- ಡಿ.ಕೆ.ಶಿವಕುಮಾರ್ ನಡುವೆ ಭಿನ್ನಾಭಿಪ್ರಾಯ ಇಲ್ಲ. ನಾನು- ಡಿ.ಕೆ.ಶಿವಕುಮಾರ್ ಒಗ್ಗಟ್ಟಾಗಿದ್ದೇವೆ. ರಾಜ್ಯದಲ್ಲಿ ಭ್ರಷ್ಟ, ಕೋಮುವಾದಿ ಸರ್ಕಾರ ಕಿತ್ತೊಗೆಯಬೇಕು
ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ತರಬೇಕಿದೆ, ಎಂದು ಸಿದ್ದರಾಮೋತ್ಸವದಲ್ಲಿ ಘೋಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ವೇದಿಕೆ ಮೇಲೂ ಒಗ್ಗಟ್ಟು ಪ್ರದರ್ಶಿಸಿದರು.
05:40 PM (IST) Aug 03
ಸಿದ್ಧರಾಮೋತ್ಸವದ ಮೂಲಕ ಮತಗಳನ್ನು ಸೆಳೆಯಲು ಕಾಂಗ್ರೆಸ್ ಯತ್ನ ಮಾಡಿದೆ. ಈ ಸಮಾರಂಭದ ಮೂಲಕ ಕಾಂಗ್ರೆಸ್‌ನಲ್ಲಿ ಮುಂದಿನ ಚುನಾವಣೆ ಎದುರಿಸಲು ಹೊಸ ಉತ್ಸಾಹ ಬಂದಿರುವುದಂತೂ ಸತ್ಯ. ಸಿದ್ಧರಾಮೋತ್ಸವದ ಮೂಲಕ ಶಕ್ತಿ ಪ್ರದರ್ಶನ ಮುಗಿಯಿತಾ ಅಥವಾ ಇಲ್ಲಿಂದ ಶಕ್ತಿ ಪ್ರದರ್ಶನ ಆರಂಭವೇ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ. ಆದರೆ, ದಾವಣಗೆರೆಯಲ್ಲಿ ನಡೆದ ಸಮಾರಂಭ ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವೆ ಯಾವುದೇ ಮುನಿಸು ಕಾಳಲಿಲ್ಲ. ಇಬ್ಬರ ನಡುವಿನ ಒಗ್ಗಟ್ಟು ಪ್ರದರ್ಶನಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಯಿತು.
04:36 PM (IST) Aug 03
ಅಚ್ಛೇ ದಿನ್ ಬರುತ್ತದೆ ಎನ್ನುತ್ತ ಅಧಿಕಾರಕ್ಕೆ ಬಂದಿರಿ, ಇಂದು ಪೆಟ್ರೋಲ್ ಬೆಲೆ 102 ರೂ, ಡೀಸೆಲ್ 95, ಗ್ಯಾಸ್ ಸಿಲಿಂಡರ್ 1 ಸಾವಿರ ರೂ.‘ನಾ ಖಾವೂಂಗ, ನಾ ಖಾನೆ ದೂಂಗ ಎನ್ನುತ್ತಾರೆ
ರಾಜ್ಯದಲ್ಲಿ ಗುತ್ತಿಗೆದಾರರ ಸಂಘ ಮೋದಿಗೆ ಪತ್ರ ಬರೆದಿದೆ. ಬಿಎಸ್ವೈ, ಬೊಮ್ಮಾಯಿ ಸರ್ಕಾರ 40% ಸರ್ಕಾರ. ಗುತ್ತಿಗೆದಾರರ ಸಂಘದ ಕೆಂಪಣ್ಣ ಪತ್ರ ಬರೆದಿದ್ದಾರೆ. ಆದ್ರೆ ನೀವು ನಾ ಖಾವೂಂಗ, ನಾ ಖಾನೆ ದೂಂಗ ಎನ್ನುತ್ತಿದ್ದಾರೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಅನ್ನುತ್ತಾರೆ. ಕಳೆದ 15 ದಿನದಲ್ಲಿ ಮೂವರ ಕೊಲೆಯಾಗಿದೆ. ಸಿಎಂ ಬೊಮ್ಮಾಯಿ ಪ್ರವೀಣ್ ಮನೆಗೆ ಭೇಟಿ ಕೊಟ್ರು. ಬೊಮ್ಮಾಯಿಯವರೇ ನೀವು ಕರ್ನಾಟಕದ ಸಿಎಂ? ಒಂದು ಧರ್ಮಕ್ಕೆ ಸೇರಿದ ಮುಖ್ಯಮಂತ್ರಿಯೇ ? ಮಸೂದ್, ಫಾಜಿಲ್ ಮನೆಗೆ ಹೋಗಲಿಲ್ಲ. ಪ್ರವೀಣ್ ಕುಟುಂಬಕ್ಕೆ ಪರಿಹಾರ ಕೊಟ್ಟಿದ್ದು ತಪ್ಪಲ್ಲ. ಮಸೂದ್, ಫಾಜಿಲ್ ಕುಟುಂಬಕ್ಕೆ ಪರಿಹಾರ ಕೊಡಲಿಲ್ಲ ಏಕೆ? ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನಲು ನೈತಿಕತೆ ಇದೆಯಾ? ನೀವು ಸಿಎಂ ಆಗಲು ಲಾಯಕ್ಕಾ ? ರಾಜ್ಯ ಆಳಲು ಲಾಯಕ್ಕಾ? ಮಾನ, ಮರ್ಯಾದೆ ಇದ್ರೆ ರಾಜೀನಾಮೆ ಕೊಟ್ಟು ಹೋಗಿ, ಎಂದ ಸಿದ್ದರಾಮಯ್ಯ.
04:17 PM (IST) Aug 03
ಇಂಥ ಭ್ರಷ್ಟ, ಕೋಮುವಾದಿ ಸರ್ಕಾರ ನಾನು ನೋಡಿರಲಿಲ್ಲ. ಕೋಮುವಾದಿ ಬಿಜೆಪಿ ಕಿತ್ತೊಗೆಯಲು ಶಪಥ ಮಾಡಿ. ಬಡವರು, ದಲಿತರು, ಅಲ್ಪಸಂಖ್ಯಾತರು, ಯುವಕರು, ರೈತರು, ಮಹಿಳೆಯರು ಆತಂಕದಿಂದ ಬದುಕುತ್ತಿದ್ದಾರೆ. ಮೋದಿ ಪ್ರಧಾನಿಯಾದ ಬಳಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಜಾಪ್ರಭುತ್ವದ ಸಂಕಷ್ಟದಲ್ಲಿದೆ, ಸಂವಿಧಾನಕ್ಕೆ ರಕ್ಷಣೆ ಇಲ್ಲವೆಂದ ಸಿದ್ದರಾಮಯ್ಯ.
04:08 PM (IST) Aug 03
ಸಿದ್ದರಾಮಯ್ಯ ನೂರು ವರ್ಷ ಬದುಕಲಿ ಅವರಿಗೆ ಶುಭಾಶಯ ಹೇಳ್ತೇನೆ. ಆದ್ರೆ ನೀವು ಸಾವಿನ ಮನೆಯಲ್ಲಿ ಸಂಭ್ರಮ ಮಾಡ್ತಾ ಇದ್ದೀರಿ. ಮಳೆಯಿಂದ ರಾಜ್ಯದಲ್ಲಿ 13 ಜನ ಸತ್ತಿದ್ದಾರೆ.
ಮಕ್ಕಳು ಸತ್ತಿದ್ದಾರೆ, ನಿಮ್ಮದೇ ಒಬ್ಬ ಕಾರ್ಯಕರ್ತ ಅಪಘಾತದಲ್ಲಿ ಸತ್ತಿದ್ದಾನೆ. ಆದ್ರೂ ನೀವು ಸಂಭ್ರಮ ಮಾಡ್ತಾ ಇದ್ದೀರಿ. ಕಾಂಗ್ರೆಸ್ ಸಂವೇದನೆ ಕಳೆದುಕೊಂಡಿದೆ.ನಮ್ಮ ಒಬ್ಬ ಕಾರ್ಯಕರ್ತ ಪ್ರವೀಣ್ ಸತ್ತಾಗ ನಾವು ಜನೋತ್ಸವ ರದ್ದು ಮಾಡಿದ್ದೇವೆ. ಆದರೆ ನೀವು ಸಂಭ್ರಮ ಮಾಡ್ತಾ ಇದ್ದೀರಿ. ಸೂತಕದ ಮನೆಯಲ್ಲಿ ಸಂಭ್ರಮ ಮಾಡ್ತಾರಾ? ಸಿದ್ದರಾಮಯ್ಯ ಮೇಲೆ ಸಿಟಿ ರವಿ ವಾಗ್ದಾಳಿ.
ಮಳೆಯಿಂದ ಮನೆ ಮಠ ಕಳೆದುಕೊಂಡಿದ್ದಾರೆ. ಸಮಾವೇಶಕ್ಕೆ ಖರ್ಚು ಮಾಡುವ ಹಣವನ್ನು ಅತಿವೃಷ್ಟಿಯಿಂದ ಮನೆ ಕಳೆದುಕೊಂಡವರಿಗೆ ನೀಡಬಹುದಿತ್ತು, ಎಂದ ಸಿಟಿ ರವಿ.
03:37 PM (IST) Aug 03
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಸಾಮರಸ್ಯ ಕಾಪಾಡಿತ್ತು. ಈಗಿನ ಬಿಜೆಪಿ ಸರ್ಕಾರದಲ್ಲಿ ತದ್ವಿರುದ್ಧ ಪರಿಸ್ಥಿತಿ ಇದೆ. ‘ಬಿಜೆಪಿ ಸರ್ಕಾರ ಶಾಂತಿ -ಸುವ್ಯವಸ್ಥೆ ಹಾಳುಗೆಡವುತ್ತಿದೆ. ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಎಲ್ಲರಿಗೂ ಕಾಣುವಂತಿದೆ. ಬಸವನ ಎದುರು ಪ್ರತಿಜ್ಞೆ ಮಾಡಿ ಜನರನ್ನು ಕೊಳ್ಳೆ ಒಡೆದರು. ಬಸವಣ್ಣ ಪ್ರಾಮಾಣಿಕರಾಗಿರಿ, ನುಡಿದಂತೆ ನಡೆಯಿರಿ ಎಂದಿದ್ದರು. ಬಿಜೆಪಿ ಸರ್ಕಾರ ಬಸವನ ತತ್ವಕ್ಕೆ ವಿರುದ್ಧವಾಗಿ ನಡೆಯುತ್ತಿದೆ. ಭಾರತಕ್ಕೆ ನಮ್ಮ ಭಾಷೆ, ಸಂಸ್ಕೃತಿಯೇ ಅಸ್ತಿತ್ವ. ಆದರೆ, ಕೇಂದ್ರ ಹಾಗೂ ಕರ್ನಾಟಕದಲ್ಲಿರುವ ಬಿಜೆಪಿ ಸರಕಾರ ನೋಟು ಅಮಾನ್ಯಕರಣ ಮತ್ತು ಜಿಎಸ್‌ಟಿ ಜಾರಿಯಿಂದ ಸಣ್ಣ ರೈತರು, ಸಣ್ಣ ಪುಟ್ಟ ವ್ಯಾಪಾರಿಗಳು ಬೀದಿಗೆ ಬರುವಂತೆ ಮಾಡಿದೆ.
03:31 PM (IST) Aug 03
ಕರ್ನಾಟಕದಲ್ಲಿರುವ ಬಿಜೆಪಿ ಸರಕಾರ ಜನರನ್ನು ವಿಭಜಿಸುವ ಕೆಲಸ ಮಾಡುತ್ತಿದೆ. ಐಕ್ಯತೆ, ಸಮಾನತೆಗೆ ಹೆಸರಾಗಿರುವ ಕರ್ನಾಟಕವನ್ನು ಬಿಜೆಪಿಗರು ವಿಭಜಿಸುತ್ತಿದ್ದಾರೆ. ಕರ್ನಾಟಕ ಅಭಿವೃದ್ಧಿ ಪಥದತ್ತ ಸಾಗಬೇಕು. ಅನ್ನಭಾಗ್ಯ, ಇಂದಿರಾ ಭ್ಯಾಗ, ಕ್ಷೀರಭಾಗ್ಯದಂಥ ಅನೇಕ ಯೋಜನೆಗಳನ್ನು ಸಿದ್ದರಾಮಯ್ಯ ನೇತೃತ್ವದ ಸರಕಾರ ನೀಡಿದ್ದು, ಕಾಂಗ್ರೆಸ್ ಕಾರ್ಯ ವೈಖರಿಯನ್ನು ಇವತ್ತಿಗೂ ಜನರು ಸ್ಮರಿಸುತ್ತಾರೆ. ಕರ್ನಾಟಕದಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಇಂಥ ಮತ್ತಷ್ಟು ಕಾರ್ಯಕ್ರಮಗಳನ್ನು ಮಾಡಲು ಬದ್ಧರಾಗಿದ್ದಾರೆ ಎಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ.
03:23 PM (IST) Aug 03
ಸಿದ್ದರಾಮೋತ್ಸವದಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಇದು ಕಾಂಗ್ರೆಸ್ ಪಕ್ಷಕ್ಕೆ ತಿರುಗುಬಾಣ ಆಗಲಿದೆ ಹೊರತು. ಬಿಜೆಪಿಗೆ ಯಾವುದೇ ನಷ್ಟವಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 75 ವರ್ಷ ತುಂಬುತ್ತಿರುವ ಸಿದ್ದರಾಮಯ್ಯ ಅವರಿಗೆ ದೇವರು ಇನ್ನೂ ಆಯಸ್ಸು ನೀಡಿ, ರಾಜ್ಯ ಹಾಗೂ ರಾಷ್ಟ್ರದ ಸೇವೆ ಮಾಡಲಿ ಎಂದು ಆರೈಸುತ್ತೇನೆ. ಆದರೆ, ಧರ್ಮದ್ರೋಹದ ಕೆಲಸ ಮಾಡುವ ರಾಷ್ಟ್ರದ್ರೋಹಿಗಳಿಗೆ ಅವರು ಬೆಂಬಲ ನೀಡುವುದನ್ನು ನಾನು ವಿರೋಧಿಸುತ್ತೇನೆ ಎಂದು ಕಟುವಾಗಿ ಹೇಳಿದರು.
ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
01:51 PM (IST) Aug 03
ಮಾಜಿ ಸಚಿವ ಕೃಷ್ಣಭೈರೇಗೌಡ ಭಾಷಣ, ಸಿದ್ದರಾಮಯ್ಯ ಜೀವನವೇ ಸಮಾಜದಲ್ಲಿ ಸಮಾನತೆಗೆ ಉದಾಹರಣೆ. ಸಿದ್ದರಾಮಯ್ಯ ಐಕ್ಯತೆಗೆ ಮಾದರಿ. ಗಾಂಧಿ, ಅಂಬೇಡ್ಕರ್ ತತ್ವಗಳನ್ನು ಜಾರಿಗೊಳಿಸಿದ್ದೇ ಸಿದ್ದರಾಮಯ್ಯ. ಬಿಜೆಪಿಯವರು ದೇಶವನ್ನು ವಿಭಜತೆ ಮಾಡುತ್ತಿದ್ದಾರೆ. ಅಸಮಾನತೆ ಸೃಷ್ಟಿಸಿ, ದೇಶವನ್ನು ಹಿಂದಕ್ಕೆ ಕೊಂಡೊಯ್ಯುತ್ತಿದ್ದಾರೆ. ಜಾತಿ, ಸಮುದಾಯಗಳ ನಡುವೆ ಬಿಜೆಪಿ ಕಂದಕ ಸೃಷ್ಟಿಸುತ್ತಿದೆ. ಸಿದ್ದರಾಮಯ್ಯನವರ ಆಡಳಿತವೇ ನಮಗೆ ದಾರಿ ದೀಪ. ಸಿದ್ದರಾಮಯ್ಯನವರ ಜೀವನ, ಹೋರಾಟ ನಮಗೆ ಮಾದರಿ. ಇಡೀ ರಾಜಕೀಯಕ್ಕೆ ಸಿದ್ದರಾಮಯ್ಯ ಮಾದರಿ ನಾಯಕ. ಸಿದ್ದರಾಮಯ್ಯನಂಥ ನೂರಾರು ಮಂದಿ ಹುಟ್ಟಲಿ.
01:42 PM (IST) Aug 03
ಮಾಜಿ ಸಚಿವ ಎಚ್.ಸಿ. ಮಹಾದೇವಪ್ಪ ಭಾಷಣ, ಸಿದ್ದರಾಮಯ್ಯ ಎಮ್ಮೆ ಮೇಯಿಸಿದ್ದಾರೆ, ಕುರಿ ಸಾಕಿದ್ದಾರೆ. ಸಿದ್ದರಾಮಯ್ಯಗೆ ಬಡಜನ ಸಂಕಷ್ಟದ ಅರಿವಿದೆ. ರೈತ, ಸಮಾಜವಾದಿ ಹೋರಾಟಗಳಲ್ಲಿ ಭಾಗಿಯಾಗಿದ್ದಾರೆ. ಸಾಮಾಜಿಕ ನ್ಯಾಯದ ಪರವಾಗಿ ಹೋರಾಡಿದ್ದಾರೆ. ಸಿದ್ದರಾಮಯ್ಯ ಚರಿತ್ರೆ ಗೊತ್ತಿರೋದರಿಂದ ಚರಿತ್ರೆ ನಿರ್ಮಾಣ. ಸಿದ್ದರಾಮಯ್ಯ ಬಗ್ಗೆ ಗೊತ್ತಿಲ್ಲದವರಿಂದ ಚರಿತ್ರೆ ನಿರ್ಮಾಣ ಅಸಾಧ್ಯ. ಸಿದ್ದರಾಮೋತ್ಸವ ಇಡೀ ದೇಶಕ್ಕೆ ಸಂದೇಶ ರವಾನೆ. ಸಿದ್ದರಾಮಯ್ಯ ಹೊಗಳಲು, ಶಹಬ್ಬಾಶ್ ಕೊಡಲು ಸೀಮಿತ ಅಲ್ಲ. ಮತ್ತೊಂದು ಸ್ವಾತಂತ್ರ್ಯ ಚಳವಳಿ ರೂಪದಲ್ಲಿ ಈ ಸಮಾವೇಶ ನಡೆಯುತ್ತಿದೆ. ಕೋಮು ಸೌಹಾರ್ದತೆ ಕಾಪಾಡಬೇಕು, ಅಸ್ಪೃಶ್ಯತೆ ಹೋಗಲಾಡಿಸಬೇಕು. ಸರ್ವಜನರ ಹಿತ ಕಾಪಾಡುವ ಆಡಳಿತ ನೀಡಬೇಕಿದೆ. ಹೊಸ ಚಳವಳಿ ಹುಟ್ಟುಹಾಕಲು ಸಿದ್ದರಾಮೋತ್ಸವ ಒಂದು ನೆಪ. ಸರ್ವಾಧಿಕಾರ, ಕೋಮುವಾದ ಅಳಿ ಹಾಕುವಂಥ ವೇದಿಕೆ ಇದು.
01:18 PM (IST) Aug 03
ಸಿದ್ದರಾಮೋತ್ಸವದಲ್ಲಿ ಮಾಜಿ ಸ್ಪೀಕರ್ ರಮೇಶ್ಕುಮಾರ್ ಭಾಷಣ. ಬಿಜೆಪಿ ವಿರುದ್ಧ ರಮೇಶ್ ಕುಮಾರ್ ಪರೋಕ್ಷ ವಾಗ್ದಾಳಿ. ಸ್ವಾತಂತ್ರ್ಯಕ್ಕಾಗಿ ಹೋರಾಡದವರು ಇಂದು ಅಧಿಕಾರ ಹಿಡಿದಿದ್ದಾರೆ. ಮನುವಾದಿಗಳು ಸಂವಿಧಾನದ ವಿರೋಧಿಗಳು. ಕಾಂಗ್ರೆಸ್ಗೆ ಅಧಿಕಾರಕ್ಕೆ ಸಿಕ್ಕರೆ ಶಿಕ್ಷಣ, ಆರೋಗ್ಯ ಪಂಚಾಯತ್ ರಾಜ್ ವಿಕೇಂದ್ರೀಕರಣ ಜಾರಿಗೊಳಿಸಬೇಕು. ಆರೋಗ್ಯ, ಶಿಕ್ಷಣ ಖಾಸಗಿಯವರ ಕಪಿಮುಷ್ಟಿಯಿಂದ ಮುಕ್ತಿಗೊಳಿಸಬೇಕು. ಪೊಲೀಸ್ ಇಲಾಖೆಯನ್ನು ದುರಸ್ತಿ ಮಾಡದಿದ್ರೆ ಜನರಿಗೆ ನ್ಯಾಯ ಸಿಗಲ್ಲ. ಸಂವಿಧಾನದ ಆಶಯಗಳನ್ನು ಸಮರ್ಥವಾಗಿ ಈಡೇರಿಸಬೇಕು
ಮಾಡದ ತಪ್ಪಿಗೆ ಸೋನಿಯಾ, ರಾಹುಲ್ ಗಾಂಧಿ ಆತಂಕದಲ್ಲಿದ್ದಾರೆ. ಸೋನಿಯಾ, ರಾಹುಲ್ ಗಾಂಧಿ ಆತಂಕ ದೂರ ಮಾಡುವುದು ನಮ್ಮ ಕರ್ತವ್ಯ. ಬಗ್ಗಿ, ಬಗ್ಗಿ ಮಾತನಾಡುವವರಿಂದ ದೂರವಿದೆ, ಅವರಿಂದ ಅಪಾಯವಿದೆ, ಸಿದ್ದರಾಮೋತ್ಸವದಲ್ಲಿ ಮಾಜಿ ಸ್ಪೀಕರ್ ರಮೇಶ್ಕುಮಾರ್ ಭಾಷಣ
11:31 AM (IST) Aug 03
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ 75ನೇ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರ ತವರು ಜಿಲ್ಲೆ ಮೈಸೂರಿನಲ್ಲೂ ಅಭಿಮಾನಿಗಳು ಹಾಗು ಆಪ್ತರಿಂದ ಹುಟ್ಟು ಹಬ್ಬ ಆಚರಣೆ.
ಎನ್‌ಎಸ್‌ಯುಐ ಕಾರ್ಯಕರ್ತರಿಂದಲೂ ಸಿದ್ದರಾಮಯ್ಯ ಹುಟ್ಟು ಹಬ್ಬ ಆಚರಣೆ. ಅಗ್ರಹಾರದ ನೂರೊಂದು ಗಣಪತಿ ದೇವಸ್ಥಾನದಲ್ಲಿ ಸಿದ್ದರಾಮಯ್ಯಗೆ ಒಳಿತಾಗುವಂತೆ ಪ್ರಾರ್ಥಿಸಿ ಪೂಜೆ ಸಲ್ಲಿಸಿದ ಎನ್‌ಎಸ್‌ಯುಐ ಕಾರ್ಯಕರ್ತರು. ಸಿದ್ದರಾಮಯ್ಯರ ಭಾವಚಿತ್ರಗಳನ್ನು ಹಿಡಿದು ಸಿದ್ದು ಪರವಾಗಿ ಜಯಕಾರ ಹಾಕಿದ ಅಭಿಮಾನಿಗಳು. ಸಿದ್ದರಾಮಯ್ಯಗೆ 75 ವರ್ಷವಾದ್ದರಿಂದ 75 ತೆಂಗಿನಕಾಯಿಗಳನ್ನು ಈಡುಗಾಯಿ ಹಾಕಿ ಸಿದ್ದರಾಮಯ್ಯಗೆ ಶುಭ ಕೋರಿದ ಅಭಿಮಾನಿಗಳು.
11:23 AM (IST) Aug 03
ಸಿದ್ಧರಾಮೋತ್ಸವ ಸಮಾವೇಶ ವೇಳೆ ಶಾಸಕ ಜಮೀರ್ ಅಹಮದ್ ಬೆಂಬಲಿಗರ ಬ್ಯಾನರ್ ಪ್ರದರ್ಶನ. ಜಮೀರ್ ಅಹಮದ್ ಅವರನ್ನು ಉಪಮುಖ್ಯಮಂತ್ರಿ ಮಾಡಿ ಅಂತ ಪೋಸ್ಟರ್ ಪ್ರದರ್ಶಿಸಿದ ಅಭಿಮಾನಿಗಳು. ಸಿದ್ದರಾಮಯ್ಯ ಸಿಎಂ ಆಗಬೇಕು. ಜಮೀರ್ ಅಹಮದ್ ಡಿಸಿಎಂ ಆಗಬೇಕೆಂಬ ಬೇಡಿಕೆಯ ಪೋಸ್ಟರ್ ಪ್ರದರ್ಶಿಸಿದ ಕಾಂಗ್ರೆಸ್ ಕಾರ್ಯಕರ್ತರು.
11:11 AM (IST) Aug 03
ಚಿತ್ರದುರ್ಗ: ಕೋಟೆನಾಡಿಗೆ ಕೆಲವೇ ಕ್ಷಣಗಳಲ್ಲಿ ರಾಹುಲ್ ಗಾಂಧಿ ಆಗಮನ ಹಿನ್ನೆಲೆಯಲ್ಲಿ ಚಿತ್ರದುರ್ಗದ ಮುರುಘಾ ಮಠಕ್ಕೆ ಬಿಗಿ ಪೊಲೀಸ್ ಭದ್ರತೆ. 11:30 ಕ್ಕೆ ಮುರುಘಾ ಮಠಕ್ಕೆ ಆಗಮಿಸಲಿರುವ ರಾಹುಲ್ ಗಾಂಧಿ. ಡಾ.ಶಿವಮೂರ್ತಿ ಮುರುಘಾ ಶರಣರ ಭೇಟಿಯಾಗಲಿರುವ ರಾಹುಲ್. ಮುರುಘಾ ಶರಣರೊಂದಿಗೆ ವಿವಿಧ ಮಠಾಧೀಶರ ಭೇಟಿ ಆಗಲಿರುವ ರಾಹುಲ್ ಗಾಂಧಿ. ಪ್ರವೇಶ ದ್ವಾರದಲ್ಲಿ ಬಿಗಿ ಪೊಲೀಸ್ ಭದ್ರತೆ ನಿಯೋಜನೆ. ಮುರುಘಾ ಮಠದ ಎರಡು ದ್ವಾರಗಳಲ್ಲಿ ಬಿಗಿ ಪೊಲೀಸ್ ಭದ್ರತೆ. ಪ್ರತಿ ವಾಹನಗಳ ತಪಾಸಣೆ ನಡೆಸಿ ಒಳಗೆ ಬಿಡುತ್ತಿರುವ ಪೊಲೀಸರು.
10:04 AM (IST) Aug 03
ವಿಐಪಿ / ಮಿಡಿಯಾ/ ಪಕ್ಷದ ಪದಾಧಿಕಾರಿಗಳಿಗೆ ಮೀಸಲಾಗಿದ್ದ ಆಸನಗಳಲ್ಲೂ ಜನರು ಭರ್ತಿ. ಪೊಲೀಸರಿಗೂ, ಸಂಘಟಕರಿಗೆ ಕ್ಯಾರೆ ಅನ್ನದ ಜನಸ್ತೋಮ. ಬಹುತೇಕ ಸಮಾವೇಶದ ಸ್ಥಳ ಭರ್ತಿ. ಜನಸ್ತೋಮದ ಸಂಭ್ರಮಕ್ಕೆ ಸಾಥ್ ನೀಡಿದ ದೃಶ್ಯ ವೈಭವ. ಸಿದ್ದರಾಮಯ್ಯ ಜೀವನಗಾಥೆ ವಿಸ್ಯುವಲ್ ಪ್ರಸಾರ ಆದಾಗ ಮುಗಿಲು ಮುಟ್ಟಿದ ಸಂಭ್ರಮ. ಟವೆಲ್ ಬಿಸಿ ಶುಭಾಷಯ ಕೋರುತ್ತಿರುವ ಅಭಿಮಾನಿಗಳು. ಮುಖ್ಯ ವೇದಿಕೆಯಲ್ಲಿ 11 ಮಂದಿಗೆ ಮುಂದಿನ ಸಾಲಿನ ಆಸನದ ವ್ಯವಸ್ಥೆ. ಸಿದ್ದರಾಮಯ್ಯ, ರಾಹುಲ್ ಗಾಂಧಿ, ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಆರ್‌ವಿ ದೇಶಪಾಂಡೆ ಬಿಕೆ ಹರಿಪ್ರಸಾದ್ ಕೆಸಿ ವೇಣುಗೋಪಾಲ್ ಎಂಬಿ ಪಾಟೀಲ್ ಡಾ.ಜಿ ಪರಮೇಶ್ವರ್ ಸೇರಿ 11 ಮುಖಂಡರಿಗೆ ಮಾತ್ರ ವೇದಿಕೆ ಮೇಲೆ ಅವಕಾಶ. ಮುಖ್ಯ ವೇದಿಕೆಯ ಎಡ ಬಲಕ್ಕೆ ಉಳಿದ ಶಾಸಕರು, ನಾಯಕರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.
09:56 AM (IST) Aug 03
ಸಿದ್ದರಾಮೋತ್ಸವಕ್ಕೆ ಶಿವಮೊಗ್ಗದಿಂದ ಕಾಂಗ್ರೆಸ್ ಕಾರ್ಯಕರ್ತರು. ದಾವಣಗೆರೆಯಲ್ಲಿ ಸಿದ್ದರಾಮಯ್ಯ ಜನ್ಮದಿನದ ಆಂಗವಾಗಿ ನಡೆಯುತ್ತಿರುವ ಅಮೃತ ಮಹೋತ್ಸವ. ಶಿವಮೊಗ್ಗದ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ನೇತೃತ್ದದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ತಂಡ. ಶಿವಮೊಗ್ಗದ ಕೋಟೆ ಮಾರಿಕಾಂಬ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಹೊರಟ ಕಾರ್ಯಕರ್ತರು. ಬಸ್ಸು ,ಕಾರುಗಳಲ್ಲಿ ತೆರಳುತ್ತಿದ್ದಾರೆ ಕೈ ಕಾರ್ಯಕರ್ತರು.
09:47 AM (IST) Aug 03
ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ಆ.3ರಂದು ನಡೆಯುವ ಸಿದ್ದರಾಮಯ್ಯ ಅಮೃತ ಮಹೋತ್ಸವವು ಹಳೆ ಮೈಸೂರು-ಉತ್ತರ ಕರ್ನಾಟಕ-ಮಲೆನಾಡು-ಬಯಲು ಸೀಮೆ ಜಿಲ್ಲೆಗಳ ಕಾಂಗ್ರೆಸ್ ಮುಖಂಡರಿಗೆ ಶಕ್ತಿ ತುಂಬುವ ಜೊತೆಗೆ ಅನೇಕರ ರಾಜಕೀಯ ಮರು ಹುಟ್ಟಿಗೂ ವೇದಿಕೆಯಾಗುವ ಸಾಧ್ಯತೆಗಳೇ ಹೆಚ್ಚಾಗಿವೆ. ಸಿದ್ದರಾಮಯ್ಯ ಕೇವಲ ಅಹಿಂದ ವರ್ಗದ ನಾಯಕನಲ್ಲ, ಎಲ್ಲಾ ವರ್ಗದ ಜನ ಮೆಚ್ಚುವಂತಹ ಆಡಳಿತ ನೀಡಿದ್ದ ವ್ಯಕ್ತಿ. ಈ ಹಿನ್ನೆಲೆಯಲ್ಲಿ ದಾವಣಗೆರೆ, ಚಿತ್ರದುರ್ಗ, ವಿಜ ಯ ನಗರ, ಬಳ್ಳಾರಿ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ನಾಯಕರು, ಭವಿಷ್ಯದ ನಾಯಕರ ರಾಜಕೀಯ ಜೀವನಕ್ಕೆ ಸಿದ್ದರಾಮಯ್ಯ ಅಮೃತ ಮಹೋತ್ಸವವು ರಾಜಕೀಯ ದಿಕ್ಸೂಚಿಯಾಗುವುದು ಅಷ್ಟೇ ನಿಶ್ಚಿತ.
09:43 AM (IST) Aug 03
ಸಮಾಜವಾದಿ ಚಿಂತನೆಯುಳ್ಳ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜಕೀಯ ಭವಿಷ್ಯ ಇನ್ನಷ್ಟುಉಜ್ವಲವಾಗಬೇಕು. ಅವರ ಪ್ರಾಮಾಣಿಕ ಹಾಗೂ ಜಾತ್ಯಾತೀತ ಜನಪರ ಸೇವೆಯ ಆಡಳಿತ ನಾಡಿನ ಜನತೆಗೆ ಮತ್ತೊಮ್ಮೆ ಲಭಿಸುವಂತಾಗಬೇಕು ಎಂದು ಅಹಿಂದ ನಾಯಕ, ತಾಲೂಕು ಕುರುಬರ ಸಂಘದ ಅಧ್ಯಕ್ಷ, ಸಮಾಜ ಸೇವಕ ಮಲ್ಲಿಕಾರ್ಜುನ ಮದರಿ ಹೇಳಿದ್ದಾರೆ. ಪಟ್ಟಣದ ಹೇಮರಡ್ಡಿ ಮಲ್ಲಮ್ಮ ವೃತ್ತದಲ್ಲಿ ದಾವಣಗೆರೆಯಲ್ಲಿ ಆ.3 ರಂದು ನಡೆಯಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 75ನೇ ಜನ್ಮ ದಿನಾಚರಣೆ ನಿಮಿತ್ತ ನಡೆಯುತ್ತಿರುವ ಸಿದ್ದರಾಮೋತ್ಸವದಲ್ಲಿ ಪಾಲ್ಗೊಳ್ಳಲು ಹೊರಟಿರುವ ಸಿದ್ದರಾಮಯ್ಯನವರ ಅಭಿಮಾನಿಗಳಿಂದ ತುಂಬಿದ 150ಕ್ಕೂ ಹೆಚ್ಚು ವಾಹನಗಳಿಗೆ ಚಾಲನೆ ನೀಡಿ ಅವರು ಮಾತನಾಡಿ, ಸಿದ್ದರಾಮಯ್ಯ ಅವರನ್ನು ರಾಜಕೀಯ ಮುತ್ಸದ್ಧಿ ಎಂದು ಬಣ್ಣಿಸಿದ್ದಾರೆ.
09:40 AM (IST) Aug 03
ಬಾಗಲಕೋಟೆ: ಸಿದ್ದರಾಮೋತ್ಸವಕ್ಕೆ ತೆರಳುತ್ತಿದ್ದ ಕ್ರೂಸರ್ ವಾಹನ ಅಪಘಾತಕ್ಕೀಡಾಗಿ ಚಾಲಕ ಮೃತಪಟ್ಟಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಹೂಲಗೇರಿ ಗ್ರಾಮದ ಬಳಿ ಮಂಗಳವಾರ ಸಂಜೆ ಸಂಭವಿಸಿದೆ. ಬೀಳಗಿ ತಾಲೂಕಿನ ಹಿರೆಅಳಗುಂಡಿ ಬಿಕೆ ಗ್ರಾಮದಿಂದ ದಾವಣಗೆರೆಗೆ ತೆರೆಳುತ್ತಿದ್ದ ಅಭಿಮಾನಿಗಳು ಪ್ರಯಾಣಿಸುತ್ತಿದ್ದ ಕ್ರೂಸರ್ ಎದುರಿಗೆ ಬಂದ ಹಾಲಿನ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕ್ರೂಸರ್ ಚಾಲಕ ಮೃತಪಟ್ಟಿದ್ದು, ಆತನ ಹೆಸರು ಪ್ರಕಾಶ ಎಂದು ತಿಳಿದುಬಂದಿದೆ. ಕ್ರೂಸರ್‌ನಲ್ಲಿದ್ದ 12 ಜನರಲ್ಲಿ ಕೆಲವರಿಗೆ ಗಾಯಗಳಾಗಿದ್ದು, ಅವರನ್ನು ಬಾಗಲಕೋಟೆ ಜಿಲ್ಲಾ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕೆರೂರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
09:38 AM (IST) Aug 03
ರಾಜ್ಯ ಹೊರರಾಜ್ಯಗಳಲ್ಲಿಂದಲೂ ಸಿದ್ದರಾಮಯ್ಯ ಅವರ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಅದೇ ರೀತಿ ರಾಜ್ಯದ ವಿವಿಧ ಜಿಲ್ಲೆ ಹಾಗೂ ತಾಲೂಕಿನಿಂದ ಲಕ್ಷಾಂತರ ಜನರು ಭಾಗವಹಿಸುವ ಮೂಲಕ ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಿ ಬರುವ ದಿನಗಳಲ್ಲಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು ಅಭಿವೃದ್ಧಿಗೆ ದಿಕ್ಸೂಚಿ ಆಗುವ ನಿರೀಕ್ಷೆ ಇದೆ.