ಮನೆ ಕೆಲಸ ನಿರ್ವಹಿಸುವ ಗೃಹಿಣಿಯರಿಗೂ ಭತ್ಯೆ!

Published : Dec 22, 2020, 07:36 AM IST
ಮನೆ ಕೆಲಸ ನಿರ್ವಹಿಸುವ ಗೃಹಿಣಿಯರಿಗೂ ಭತ್ಯೆ!

ಸಾರಾಂಶ

ಮನೆ ಕೆಲಸ ನಿರ್ವಹಿಸುವ ಗೃಹಿಣಿಯರಿಗೂ ಭತ್ಯೆ!| ನಟ ಕಮಲ್‌ಹಾಸನ್‌ ಪಕ್ಷದ ಭರವಸೆ

 

ಕಾಂಚಿಪುರಂ(ಡಿ.22): ತಮಿಳುನಾಡು ವಿಧಾನಸಭೆ ಚುನಾವಣೆಗೆ ಮಕ್ಕಳ್‌ ನೀಧಿ ಮೈಯ್ಯಮ್‌ (ಎಂಎನ್‌ಎಂ) ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿರುವ ನಟ ಕಮಲ್‌ ಹಾಸನ್‌, ಒಂದು ವೇಳೆ ತಮ್ಮ ಪಕ್ಷ 2021ರ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಮನೆಯ ಜವಾಬ್ದಾರಿಯನ್ನು ನಿರ್ವಹಿಸುವ ಗೃಹಿಣಿಯರಿಗೂ ಭತ್ಯೆ ನೀಡುವ ಭರವಸೆ ನೀಡಿದ್ದಾರೆ.

ಚುನಾವಣೆ ಸಂಬಂಧ ಏಳು ಅಂಶಗಳ ‘ಆಡಳಿತ ಮತ್ತು ಆರ್ಥಿಕ ಕಾರ್ಯಸೂಚಿ’ಯನ್ನು ಕಮಲ್‌ ಹಾಸನ್‌ ಸೋಮವಾರ ಬಿಡುಗಡೆ ಮಾಡಿದರು. ಮನೆಯನ್ನು ನಿಭಾಯಿಸುವ ಗೃಹಿಣಿಯರ ಗೌರವವನ್ನು ಹೆಚ್ಚಿಸಲು ಅವರಿಗೂ ವೇತನ ನೀಡುವುದು. ಎಲ್ಲಾ ಮನೆ ಮಂದಿಗೆ ಕಂಪ್ಯೂಟರ್‌ ಜೊತೆ ಅತಿ ವೇಗದ ಇಂಟರ್ನೆಟ್‌ ಆಶ್ವಾಸನೆಯ ಪ್ರಮುಖ ಅಂಶಗಳಾಗಿವೆ.

ಇದೇ ವೇಳೆ ಬಡತನ ರೇಖೆಗಿಂತ ಕೆಳಗಿನವರ ಆರ್ಥಿಕ ಉನ್ನತೀಕರಣಕ್ಕೆ ತಮ್ಮ ಪಕ್ಷ ಕ್ರಮ ಕೈಗೊಳ್ಳಲಿದೆ. ಗ್ರಾಮಗಳಲ್ಲಿ ರೈತರಿಗೆ ವಿಶ್ವದರ್ಜೆಯ ಶೀತಲೀಕರಣ ವ್ಯವಸ್ಥೆ, ಮೌಲ್ಯಾಧಾರಿತೆ ಕೃಷಿಯ ಮೇಲೆ ಹೂಡಿಕೆ, ಸಾವಯಯವ ಕೃಷಿಗೆ ಒತ್ತು ನೀಡಲಾಗುವುದು ಎಂದು ಕಮಲ್‌ ಹಾಸನ್‌ ಭರವಸೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಸತಿ ಯೋಜನೆಗಳಿಗೆ ಸಹಾಯಧನ ಹೆಚ್ಚಳಕ್ಕೆ ಚಿಂತನೆ: ಸಚಿವ ಜಮೀರ್‌ ಅಹಮದ್‌
ವಿದೇಶದಲ್ಲಿ ಇರುವವರಿಗೂ ಗ್ಯಾರಂಟಿ ಲಾಭ ಬಗ್ಗೆ ಸಿಎಲ್ಪೀಲಿ ಪ್ರಸ್ತಾಪ: ಸಚಿವ ಮಧು ಬಂಗಾರಪ್ಪ