ನಾನು ಪ್ರಹ್ಲಾದ ಜೋಶಿ ಅವರನ್ನು ಸಂಸದರನ್ನಾಗಿ ಮಾಡಲು ಎಷ್ಟುಓಡಾಡಿದ್ದೇನೆ ಎಂಬುದನ್ನು ಅವರು ನೆನಪಿಸಿಕೊಳ್ಳಲಿ. ನನ್ನ ಚುನಾವಣೆಗೂ ನಾನು ಅಷ್ಟುಓಡಾಡುತ್ತಿರಲಿಲ್ಲ, ಆದರæ ನನಗೆ ಟಿಕೆಟ್ ಕೊಡಲು ನಿರಾಕರಿಸಿದಾಗ ಜೋಶಿ ಗಟ್ಟಿಯಾಗಿ ಧ್ವನಿ ಎತ್ತಲಿಲ್ಲ. ಆಗಬಹುದಾದ ಅನಾಹುತಗಳ ಬಗ್ಗೆ ವರಿಷ್ಠರಿಗೆ ಮನವರಿಕೆ ಮಾಡಿಕೊಡಲಿಲ್ಲ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ತೀವ್ರ ಬೇಸರ ವ್ಯಕ್ತಪಡಿಸಿದರು.
ಹುಬ್ಬಳ್ಳಿ (ಏ.20) : ನಾನು ಪ್ರಹ್ಲಾದ ಜೋಶಿ ಅವರನ್ನು ಸಂಸದರನ್ನಾಗಿ ಮಾಡಲು ಎಷ್ಟುಓಡಾಡಿದ್ದೇನೆ ಎಂಬುದನ್ನು ಅವರು ನೆನಪಿಸಿಕೊಳ್ಳಲಿ. ನನ್ನ ಚುನಾವಣೆಗೂ ನಾನು ಅಷ್ಟುಓಡಾಡುತ್ತಿರಲಿಲ್ಲ, ಆದರæ ನನಗೆ ಟಿಕೆಟ್ ಕೊಡಲು ನಿರಾಕರಿಸಿದಾಗ ಜೋಶಿ ಗಟ್ಟಿಯಾಗಿ ಧ್ವನಿ ಎತ್ತಲಿಲ್ಲ. ಆಗಬಹುದಾದ ಅನಾಹುತಗಳ ಬಗ್ಗೆ ವರಿಷ್ಠರಿಗೆ ಮನವರಿಕೆ ಮಾಡಿಕೊಡಲಿಲ್ಲ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ತೀವ್ರ ಬೇಸರ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವರ ಚುನಾವಣೆಯ ಎಲ್ಲ ಕರಪತ್ರಗಳಲ್ಲಿ ನನ್ನ ದೊಡ್ಡ ಫೋಟೋ ಇರುತ್ತಿತ್ತು. ನಾನು ಸ್ಪೀಕರ್ ಇದ್ದಾಗ, ನನ್ನ ಫೋಟೋ ಬದಲು ನನ್ನ ಪತ್ನಿ ಶಿಲ್ಪಾ ಶೆಟ್ಟರ್(Shilpa shettar) ಫೋಟೋ ಹಾಕಲಾಗಿತ್ತು. ನನ್ನ ಪರವಾಗಿ ಅವರೇ ಭಾಷಣ ಮಾಡಿದ್ದರು ಎಂದು ನೆನೆದರು.
ನಿಮಗಾಗಿ ನಾವು ಏನೆಲ್ಲ ಮಾಡಿದೆವು ನೆನಪಿಸಿಕೊಳ್ಳಿ, ನೀವು ಪ್ರಯತ್ನ ಮಾಡದೆ ಗಟ್ಟಿಯಾಗಿ ಮಾತನಾಡಬೇಕಿತ್ತು. ಶೆಟ್ಟರ್(Jagadish shettar)ಗೆ ಟಿಕೆಟ್ ಬೇಕೇ ಬೇಕು ಎಂದು ನಿಲ್ಲಬೇಕಿತ್ತು ಎಂದರು
ರಾಜ್ಯ ಕಾರ್ಯಕಾರಣಿಯಲ್ಲಿ ನಮಗೆ ಮಾತನಾಡಲು ಅವಕಾಶವೇ ಇರುತ್ತಿರಲಿಲ್ಲ. 3 ವರ್ಷದಿಂದ ಮಾತನಾಡಲು ನಮಗೆ ಅವಕಾಶ ಕೊಡಲಿಲ್ಲ. ಪಕ್ಷದ ಹಿತಾಸಕ್ತಿಗಾಗಿ ಎಲ್ಲವನ್ನೂ ಸಹಿಸಿಕೊಂಡು ಬಂದೆ ಎಂದರು.
ಮರ್ಯಾದೆಗಾಗಿ ಕಾಂಗ್ರೆಸ್ಸಿಗೆ:
70 ವರ್ಷಕ್ಕೆ ರಾಜಕೀಯ ನಿವೃತ್ತಿಗೆ ನಿರ್ಧರಿಸಿದ್ದ ನಾನು, ಅಗೌರವದಿಂದ ಹೋಗಬಾರದು ಎಂದು ಕಾಂಗ್ರೆಸ್ ಸೇರಿದ್ದೇನೆ. ನನಗೆ ಅಧಿಕಾರದ ಲಾಲಸೆ ಇಲ್ಲ. ನನ್ನನ್ನು ಗೌರವದಿಂದ ನಡೆಸಿಕೊಳ್ಳಿ ಎಂದಷ್ಟೇ ಕಾಂಗ್ರೆಸ್ ನಾಯಕರಿಗೆ ಹೇಳಿರುವೆ. ನಿಮ್ಮ ಪಕ್ಷಕ್ಕೆ ನಿಷ್ಠನಾಗಿ, ಕೊಟ್ಟಜವಾಬ್ದಾರಿಯನ್ನು ನಿಭಾಯಿಸುವೆ ಎಂದು ಮಾತು ಕೊಟ್ಟಿದ್ದೇನೆ. ನಾನಿರುವ ಪಕ್ಷವನ್ನು ಗೆಲ್ಲಿಸಿ, ಅಧಿಕಾರಕ್ಕೆ ತರುವುದಷ್ಟೇ ನನ್ನ ಆದ್ಯತೆ. ಹಾಗಾಗಿ, ಏನೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುವೆ ಎಂದರು.
ಯಾವುದಕ್ಕೂ ಭಯಪಡಲ್ಲ:
ಕಾನೂನು ಬಾಹಿರವಾಗಿ ನಾನು ಏನನ್ನೂ ಮಾಡಿಲ್ಲ. ಹಾಗಾಗಿ, ಐಟಿ, ಇಡಿಗೆ ಭಯಪಡುವ ವ್ಯಕ್ತಿಯಲ್ಲ. ನಡ್ಡಾ ಅವರು ಹುಬ್ಬಳ್ಳಿಗೆ ಬರುತ್ತಿದ್ದಾರೆ. ಆದರೂ, ಏನೂ ಪ್ರಯೋಜನವಾಗುವುದಿಲ್ಲ. ಈಗಾಗಲೇ ಪಕ್ಷಕ್ಕೆ ದೊಡ್ಡ ಡ್ಯಾಮೇಜ್ ಆಗಿದೆ ಎಂದರು.
ಕಾಂಗ್ರೆಸ್‌ನಿಂದ ನಿಲ್ಲುತ್ತೇನೋ ಅಥವಾ ಪಕ್ಷೇತರ ಸ್ಪರ್ಧೆ ಅದು ನನ್ನ ಇಚ್ಛೆ, ಹೇಗೆ ಸ್ಪರ್ಧಿಸಬೇಕು ಎಂದು ಹೇಳಲು ಬೆಲ್ಲದ ಯಾರು? ನಾನು ಲಿಂಗಾಯತ ನಾಯಕ ಹೌದೋ ಅಲ್ಲವೋ ಎಂದು ಜನ ತೀರ್ಮಾನಿಸುತ್ತಾರೆ. ನನಗೆ ಅನ್ಯಾಯವಾಗಿದ್ದನ್ನು ಕೇಳಿ ವಿವಿಧ ಜಿಲ್ಲೆಗಳಿಂದ ಜನರು ಹುಬ್ಬಳ್ಳಿಗೆ ಬಂದು ನನ್ನ ಜೊತೆ ನಿಲ್ಲುವುದಾಗಿ ಹೇಳಿದ್ದಾರೆ. ನಾಯಕನಾಗಿದ್ದಾಗ ಮಾತ್ರ ಜನ ಈ ರೀತಿ ಬರಲು ಸಾಧ್ಯ ಎಂದು ತಿರುಗೇಟು ನೀಡಿದರು.
ಕಳೆದ ಸಲಕ್ಕಿಂತ ಹೆಚ್ಚಿನ ಮತಗಳ ಅಂತರದಿಂದ ಆರಿಸಿ ಬರುವೆ. ಬಿಜೆಪಿಯಲ್ಲಿದ್ದಾಗ ನನ್ನ ಮಹತ್ವ ಗೊತ್ತಾಗಲಿಲ್ಲ, ಈಗ ಗೊತ್ತಾಗುತ್ತಿದೆ. ನನ್ನ ಸೋಲಿಸಲು ಘಟನಾನುಘಟಿಗಳು ಬರುವುದಾದರೆ, ಬರಲಿ, ಆಗಲಾದರೂ ನನ್ನ ಮಹತ್ವ ಏನು ಎಂಬುದು ಹೊರ ಜಗತ್ತಿಗೆ ಗೊತ್ತಾಗಲಿದೆ.
ಜಗದೀಶ ಶೆಟ್ಟರ್, ಮಾಜಿ ಸಿಎಂ.